ಬಾರ್ ಸಿಬ್ಬಂದಿ ಮೇಲೆ ಹಲ್ಲೆ
ಮೈಸೂರು

ಬಾರ್ ಸಿಬ್ಬಂದಿ ಮೇಲೆ ಹಲ್ಲೆ

June 14, 2018

ಮೈಸೂರು: ಹಣಕಾಸಿನ ವಿಚಾರವಾಗಿ ಬಾರ್ ಕ್ಯಾಷಿಯರ್ ಮತ್ತು ಸಿಬ್ಬಂದಿ ಮೇಲೆ ಮೂವರು ಅಪರಿಚಿತ ವ್ಯಕ್ತಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿರುವ ಘಟನೆ ಬನ್ನಿಮಂಟಪದ ಬಾಲಾಜಿ ಬಾರ್ ಅಂಡ್ ರೆಸ್ಟೋರೆಂಟ್‍ನಲ್ಲಿ ನಡೆದಿದೆ.

ಬಾರ್ ಕ್ಯಾಷಿಯರ್ ವೆಂಕಟೇಶ್ ಹಾಗೂ ರವಿ ಹಲ್ಲೆಗೊಳಗಾದವರು. ಜೂ.10 ರಂದು ರಾತ್ರಿ 10.30ರ ಸಮಯದಲ್ಲಿ ಮೂವರು ಅಪರಿಚಿತ ವ್ಯಕ್ತಿಗಳು 1,030 ರೂ. ಬೆಲೆಬಾಳುವ ಡ್ರಿಂಕ್ಸ್ ಖರೀದಿಸಿದ್ದಾರೆ. 800 ರೂ.ಗಳನ್ನು ಕೊಟ್ಟು ಪರಾರಿಯಾಗಲು ಯತ್ನಿಸಿದ್ದಾರೆ. ಇದನ್ನು ಅರಿತ ಬಾರ್ ಸಿಬ್ಬಂದಿ ವೆಂಕಟೇಶ್ ಮತ್ತು ಇತರರು ಡ್ರಿಂಕ್ಸ್ ಬಾಟಲ್‍ಗಳನ್ನು ಕಿತ್ತುಕೊಂಡಿದ್ದಾರೆ.
ಇದರಿಂದ ಕುಪಿತಗೊಂಡ ಈ ತಂಡ ಕ್ಯಾಷ್ ಕೌಂಟರ್‍ನಲ್ಲಿದ್ದ ರವಿ ಹಾಗೂ ಬಾಟಲ್ ಕಿತ್ತುಕೊಂಡ ವೆಂಕಟೇಶ್ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಮಂಡಿ ಠಾಣೆಯಲ್ಲಿ ದೂರು ದಾಖಲಾಗಿದೆ.

Translate »