ಶಾಸಕ ತನ್ವೀರ್ ಸೇಠ್ ಹತ್ಯೆಗೆ ಯತ್ನ
ಮೈಸೂರು

ಶಾಸಕ ತನ್ವೀರ್ ಸೇಠ್ ಹತ್ಯೆಗೆ ಯತ್ನ

November 18, 2019

ಮೈಸೂರು: ನೂರಾರು ಜನರ ಸಮ್ಮುಖ ದಲ್ಲೇ ನರ ಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರನ್ನು ಮಚ್ಚಿ ನಿಂದ ಕೊಚ್ಚಿ ಹತ್ಯೆ ಮಾಡಲು ಪ್ರಯತ್ನಿಸಿದ ಘಟನೆ ಭಾನು ವಾರ ರಾತ್ರಿ ಮೈಸೂರಿನ ಪಂಜಿನ ಕವಾ ಯತು ಮೈದಾನದಲ್ಲಿ ನಡೆದಿದೆ. ತೀವ್ರ ವಾಗಿ ಗಾಯಗೊಂಡಿರುವ ಶಾಸಕರು ಖಾಸಗಿ ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಮ್ಮ ಆಪ್ತರ ಪುತ್ರನ ವಿವಾಹದ ಆರತ ಕ್ಷತೆ ಕಾರ್ಯ ಕ್ರಮದಲ್ಲಿ ಕುಟುಂಬ ಸಮೇತರಾಗಿ ಶಾಸಕ ತನ್ವೀರ್‍ಸೇಠ್ ಭಾಗವಹಿಸಿದ್ದ ವೇಳೆಯಲ್ಲೇ ಈ ಘಟನೆ ನಡೆದಿದ್ದು, ಮೈಸೂರಿನಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಶಾಸಕರು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆ ಮುಂದೆ ಅವರ ನೂರಾರು ಬೆಂಬಲಿಗರು ಜಮಾಯಿಸಿದ್ದಾರೆ. ಶಾಸಕರ ಮೇಲೆ ಹಲ್ಲೆ ನಡೆಸಿದವನನ್ನು ಆರತಕ್ಷತೆಗೆ ಬಂದಿದ್ದ ವರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಆತನನ್ನು ಇರಿಸಿರುವ ಎನ್‍ಆರ್ ಪೊಲೀಸ್ ಠಾಣೆ ಮುಂಭಾಗದಲ್ಲಿ ನೂರಾರು ಮಂದಿ ಜಮಾಯಿಸಿದ್ದು, ಆಸ್ಪತ್ರೆ, ಎನ್.ಆರ್. ಪೊಲೀಸ್ ಠಾಣೆ ಮತ್ತು ಪಂಜಿನ ಕವಾ ಯತು ಮೈದಾನದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಶಾಸ ಕರ ಹತ್ಯೆಗೆ ಯತ್ನಿಸಿದವನನ್ನು ಗೌಸಿಯಾ ನಗರದ ಫರಾನ್ ಎಂದು ಗುರುತಿಸಲಾಗಿದೆ.

ವಿವರ: ಶಾಸಕ ತನ್ವೀರ್ ಸೇಠ್ ಅವರ ಆಪ್ತರಾದ ಯೂನೂಸ್ ಎಂಬುವರ ಪುತ್ರ ಹಮೀದ್ ಅವರಿಗೆ ಇತ್ತೀಚೆಗೆ ಮದೀನಾ ದಲ್ಲಿ ವಿವಾಹವಾಗಿತ್ತು. ಅದರ ಆರತಕ್ಷತೆ ಪಂಜಿನ ಕವಾಯತು ಮೈದಾನದಲ್ಲಿ ಭಾನು ವಾರ ರಾತ್ರಿ ಏರ್ಪಡಿಸಲಾಗಿತ್ತು. ಈ ಸಮಾ ರಂಭಕ್ಕೆ ತನ್ವೀರ್‍ಸೇಠ್ ಕುಟುಂಬ ಸಮೇತ ಆಗಮಿಸಿದ್ದರು. ವೇದಿಕೆ ಮೇಲೆ ತೆರಳಿ ವರನಿಗೆ ಆಶೀರ್ವಾದ ನೀಡಿ ಮುಂದಿನ ಸಾಲಿನಲ್ಲಿ ಬಂದು ಅವರು ಕುಳಿತಿದ್ದರು. ಕವಾಲಿ ಹಾಡನ್ನು ಶಾಸಕರು ಆಲಿಸುತ್ತಿದ್ದ ವೇಳೆ ಕೆಂಪು ಬಣ್ಣದ ಶರ್ಟ್ ಧರಿಸಿದ್ದ ವ್ಯಕ್ತಿಯೋರ್ವ ಅವರ ಮುಂದೆ ಬಂದಿ ದ್ದಾನೆ. ಶಾಸಕರ ಹಿಂಭಾಗದಲ್ಲೇ ಅವರ ಗನ್‍ಮ್ಯಾನ್‍ಕೂಡಾ ಇದ್ದನೆನ್ನಲಾಗಿದ್ದು, ಸಹಜವಾಗಿಯೇ ತನ್ವೀರ್‍ಸೇಠ್ ಅವರನ್ನು ಪ್ರೀತಿಯಿಂದ ಮಾತನಾಡಿಸಲು ಅಭಿಮಾನಿ ಬಂದಿರಬಹುದು ಎಂದು ಗನ್‍ಮ್ಯಾನ್ ಸೇರಿದಂತೆ ಎಲ್ಲರೂ ಭಾವಿಸಿದ್ದರು. ಆದರೆ, ಹಠಾತ್ತನೇ ಅಪರಿಚಿತ ವ್ಯಕ್ತಿ ಮಚ್ಚನ್ನು ತೆಗೆದು ಶಾಸಕರ ಕತ್ತಿನ ಎಡಭಾಗಕ್ಕೆ ಬಲವಾಗಿ ಬೀಸಿದ ನಂತರ ಮಚ್ಚು ಮತ್ತು ಮೊಬೈಲ್‍ನ್ನು ಬಿಸಾಡಿ ಸ್ಥಳದಿಂದ ಓಡಿದ್ದಾನೆ.

ಶಾಸಕರ ಮೇಲಿನ ಹಲ್ಲೆಯನ್ನು ಗಮನಿಸಿದ ಮಾಜಿ ಕಾರ್ಪೋರೇಟರ್ ಸುಹೇಲ್ ಬೇಗ್ `ಅವನನ್ನು ಹಿಡಿಯಿರಿ… ಹಿಡಿಯಿರಿ…’ ಎಂದು ಕೂಗಾಡುತ್ತಾ ಹಲ್ಲೆಕೋರನ ಹಿಂದೆ ಓಡಿದ್ದಾರೆ. ಅದೇ ವೇಳೆ ಕೆಲವರು ಆತನನ್ನು ಹಿಡಿದುಕೊಂಡಿದ್ದಾರೆ. ಶಾಸಕರ ಮೇಲೆ ಹಲ್ಲೆ ನಡೆದಿದೆ ಎಂದು ಗೊತ್ತಾಗುತ್ತಿದ್ದಂತೆಯೇ ನೆರೆದಿದ್ದವರೆಲ್ಲಾ ಆತನನ್ನು ಹಿಗ್ಗಾಮುಗ್ಗಾ ಥಳಿಸಲು ಆರಂಭಿಸಿದ್ದಾರೆ. ಅದೇ ವೇಳೆ ಕೆಲವರು ಹಲ್ಲೆಕೋರನನ್ನು ಪೊಲೀಸ್ ಜೀಪ್‍ಗೆ ಹತ್ತಿಸಿ ಠಾಣೆಗೆ ಕಳುಹಿಸಿಕೊಟ್ಟಿದ್ದಾರೆ.

ಕತ್ತಿಗೆ ಬಿದ್ದ ಮಚ್ಚೇಟಿನಿಂದ ರಕ್ತ ಸುರಿಯುತ್ತಾ ಬರುತ್ತಿದ್ದ ತನ್ವೀರ್‍ಸೇಠ್ ಅವರನ್ನು ಅವರ ಅಭಿಮಾನಿಗಳು ತಕ್ಷಣವೇ ಕಾರಿನಲ್ಲಿ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿದ್ದು, ಶಾಸಕರಿಗೆ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶಾಸಕರು ಚಿಕಿತ್ಸೆ ಪಡೆಯು ತ್ತಿರುವ ಆಸ್ಪತ್ರೆಗೆ ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಮುತ್ತುರಾಜ್, ಎನ್.ಆರ್. ಎಸಿಪಿ ಗಜೇಂದ್ರಪ್ರಸಾದ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆ ಮುಂದೆ ಎರಡು ಪೊಲೀಸ್ ವ್ಯಾನ್‍ಗಳನ್ನು ನಿಲ್ಲಿಸಲಾಗಿದೆ.

Translate »