ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ
ಮೈಸೂರು

ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ

November 18, 2019

ನವದೆಹಲಿ: ಸಂಸತ್‍ನ ಚಳಿಗಾಲದ ಅಧಿವೇಶನ ಸೋಮವಾರ ಪ್ರಾರಂಭವಾಗಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ಭಾನುವಾರ ಪ್ರಧಾನಿ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ನಡೆಯಿತು.

ಕಳೆದ ಬಾರಿಯಂತೆ ಈ ಬಾರಿಯ ಅಧಿವೇಶನ ದಲ್ಲೂ ಎಲ್ಲಾ ವಿಚಾರಗಳನ್ನು ಮುಕ್ತವಾಗಿ ಚರ್ಚಿ ಸಲು ಅವಕಾಶ ಮಾಡಿಕೊಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದರು.

ಆದರೆ, 27 ಪಕ್ಷಗಳ ಮುಖಂಡರು ಪಾಲ್ಗೊಂ ಡಿದ್ದ ಈ ಸಭೆಯಲ್ಲಿ, ಫಾರೂಕ್ ಅಬ್ದುಲ್ಲಾ ಗೃಹ ಬಂಧನ, ನಿರುದ್ಯೋಗ, ಕೃಷಿ ಬಿಕ್ಕಟ್ಟು, ಆರ್ಥಿಕ ಬಿಕ್ಕಟ್ಟು ಇತ್ಯಾದಿ ವಿಚಾರಗಳನ್ನು ಅಧಿವೇಶನದಲ್ಲಿ ಚರ್ಚಿಸಬೇಕು ಎಂದು ಕಾಂಗ್ರೆಸ್ ಪಕ್ಷ ಒತ್ತಾ ಯಿಸಿದೆ. ಸದನದ ರೀತಿ ರಿವಾಜುಗಳ ಕಟ್ಟುಪಾಡಿ ನೊಳಗೆ ಎಲ್ಲಾ ವಿಚಾರಗಳನ್ನು ಚರ್ಚಿಸಲು ಸರ್ಕಾರ ಸಿದ್ಧವಿದೆ. ಸಂಸತ್‍ನಲ್ಲಿ ರಚನಾತ್ಮಕ ಚರ್ಚೆ ನಡೆದರೆ ಆಡಳಿತ ವ್ಯವಸ್ಥೆಗೂ ಚುರುಕು ಮುಟ್ಟಿಸಿದಂತಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಈ ಸಭೆಯಲ್ಲಿ ಪ್ರಸ್ತಾಪಿಸಿದರು.

ಫಾರೂಕ್ ವಿಚಾರವನ್ನು ಪ್ರಸ್ತಾಪಿಸಿದ ನ್ಯಾಷ ನಲ್ ಕಾನ್ಫೆರೆನ್ಸ್ ಸಂಸದ ಹಸ್ನೇನ್ ಮಸೂದಿ, ಒಬ್ಬ ಸಂಸದನನ್ನು ಅಕ್ರಮವಾಗಿ ಹೇಗೆ ಬಂಧನ ದಲ್ಲಿಟ್ಟುಕೊಳ್ಳಬಹುದು? ಅವರು ಸಂಸತ್ ಕಲಾಪ ಗಳಲ್ಲಿ ಪಾಲ್ಗೊಳ್ಳಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಆದರೆ, ಈ ವಿಚಾರದಲ್ಲಿ ಮೋದಿಯಿಂದ ಯಾವುದೇ ವಾಗ್ದಾನ ಸಿಗಲಿಲ್ಲ.

ಕಾಕತಾಳೀಯವೆಂದರೆ, ಫಾರೂಕ್ ಅಬ್ದುಲ್ಲಾ ಅವರನ್ನು ಗೃಹ ಬಂಧನದಲ್ಲಿಡಲು ಕಾರಣವಾದ ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್‍ಎ) ಅನ್ನು ರೂಪಿಸಿದ್ದೇ ಅವರ ತಂದೆ. 1978ರಲ್ಲಿ ಫಾರೂಕ್ ತಂದೆ ಹಾಗೂ ನ್ಯಾಷನಲ್ ಕಾನ್ಫೆರೆನ್ಸ್ ಸಂಸ್ಥಾಪಕ ಶೇಖ್ ಅಬ್ದುಲ್ಲಾ ಸಿಎಂ ಆಗಿದ್ದಾಗ ಈ ಕಾನೂನು ರೂಪಿಸಲಾಗಿದೆ. ಈಗ ಅದೇ ಕಾನೂನಿನ ಅಡಿ ಯಲ್ಲಿ ಫಾರೂಕ್ ಅಬ್ದುಲ್ಲ ಅವರನ್ನು ವಶಕ್ಕೆ ಪಡೆದು ಕೊಂಡಿಟ್ಟುಕೊಳ್ಳಲಾಗಿದೆ. ಚಳಿಗಾಲದ ಅಧಿವೇಶನ ದಲ್ಲಿ ಎಲ್ಲಾ ರಾಜಕೀಯ ಪಕ್ಷಗಳೂ ಸದನದ ಘನತೆ ಕಾಪಾಡಬೇಕು. ಸುಗಮ ಚರ್ಚೆಗೆ ಅವಕಾಶ ಮಾಡಿ ಕೊಡಬೇಕು ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಎಲ್ಲಾ ಪಕ್ಷಗಳಿಗೂ ಕರೆ ನೀಡಿದರು.

ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ, ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ, ವೈದ್ಯರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಕಠಿಣ ಕ್ರಮ ಸೇರಿದಂತೆ ಸುಮಾರು 35 ಮಸೂದೆಗಳಿಗೆ ಅಂಗೀಕಾರ ಲಭಿಸುವ ನಿರೀಕ್ಷೆ
ಇದೆ. ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಆರ್ಥಿಕ ಹಿಂಜರಿತ, ಜಿಡಿಪಿ ಕುಸಿತ, ನಿರುದ್ಯೋಗ ಸಮಸ್ಯೆ ಹೆಚ್ಚಳ, ಕೈಗಾರಿಕಾ ವಲಯದ ಅವಸಾನ ಮೊದಲಾದ ವಿಷಯಗಳನ್ನು ಪ್ರಸ್ತಾಪಿಸಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸರ್ವ ಪಕ್ಷಗಳು ತುದಿಗಾಲಲ್ಲಿ ನಿಂತಿವೆ. ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ತಾವರ್‍ಚಂದ್ ಗೆಹ್ಲೋಟ್, ಪ್ರಹ್ಲಾದ್ ಜೋಶಿ, ಅರ್ಜುನ್ ಮೇಘ ವಾಲ್, ಸ್ಪೀಕರ್ ಓಂ ಬಿರ್ಲಾ, ರಾಜ್ಯಸಭಾ ಉಪ ವಿಪಕ್ಷ ಮುಖಂಡ ಆನಂದ್ ಶರ್ಮಾ, ಟಿಎಂಸಿ ನಾಯಕ ಡೆರೆಕ್ ಓ ಬ್ರಿಯನ್, ಎಲ್‍ಜೆಪಿ ನಾಯಕ ಚಿರಾಗ್ ಪಾಸ್ವಾನ್, ಸಮಾಜವಾದಿ ಪಕ್ಷ ಮುಖಂಡ ರಾಮಗೋಪಾಲ್ ಯಾದವ್, ಟಿಡಿಪಿ ಪಕ್ಷದ ಜಯ ದೇವ್ ಗಲ್ಲಾ, ವಿ.ವಿಜಯಸಾಯ್ ರೆಡ್ಡಿ ಮೊದಲಾದವರು ಉಪಸ್ಥಿತರಿದ್ದರು. ಈ ಚಳಿಗಾಲದ ಅಧಿವೇಶನ ನವೆಂಬರ್ 18ರಿಂದ ಡಿಸೆಂಬರ್ 13ರವರೆಗೂ ನಡೆಯಲಿದೆ.

Translate »