ಹೈದರಾಬಾದ್, ನ.18- 7 ವರ್ಷದ ಬಾಲಕನನ್ನು ಅಪಹರಿಸಿ 3 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ 10ನೇ ಕ್ಲಾಸ್ ವಿದ್ಯಾರ್ಥಿಯನ್ನು ಪೆÇಲೀಸರು ಬಂಧಿಸಿದ್ದಾರೆ. ಹೈದ್ರಾಬಾದ್‍ನ ಮೀರ್‍ಪೇಟ್‍ನಲ್ಲಿ ಘಟನೆ ನಡೆದಿದ್ದು, ದೂರು ದಾಖಲಾದ 4 ಗಂಟೆಯಲ್ಲಿಯೇ ಪೆÇಲೀ ಸರು ಪ್ರಕರಣವನ್ನು ಬೇಧಿಸಿ, ಏಳರ ಪೆÇೀರನನ್ನು ರಕ್ಷಿಸಿದ್ದಾರೆ. ಹಣ ನೀಡಲು ಪೆÇೀಷಕರು ಒಪ್ಪದಿದ್ದಾಗ ಬಾಲಕ ಅರ್ಜುನನನ್ನು ಕೊಲ್ಲುವುದಾಗಿ ಅಪ್ರಾಪ್ತ ಬೆದರಿಕೆ ಹಾಕಿದ್ದಾನೆ.
ಈ ಕುರಿತು ಪೆÇಲೀಸರು ಮಾಹಿತಿ ನೀಡಿದ್ದು, ಪಿಎಸ್‍ಆರ್ ಕಾಲೋನಿಯ ನಿವಾಸಿ ಅರ್ಜುನ್ ಭಾನುವಾರ ಮಧ್ಯಾಹ್ನ 2.30ರ ಸುಮಾರಿಗೆ ತನ್ನ ಸ್ನೇಹಿತನೊಂದಿಗೆ ಆಟವಾಡುತ್ತಿದ್ದನು. 10ನೇ ತರಗತಿ ವಿದ್ಯಾರ್ಥಿ ಆಡುತ್ತಿದ್ದ ಅರ್ಜುನನನ್ನು ನೋಡಿದ್ದಾನೆ. ತಕ್ಷಣವೇ ಬಾಲಕನ್ನು ಅಪಹರಿಸಿ ಅವರ ಕುಟುಂಬಸ್ಥರ ಬಳಿ ಹಣ ಕೇಳಲು ಪ್ಲಾನ್ ಮಾಡಿಕೊಂಡಿದ್ದನು. ಮೊದಲು ಆರೋಪಿ ಅಪ್ರಾಪ್ತ, ಅರ್ಜುನ್ ಜೊತೆ ಸ್ನೇಹ ಬೆಳೆಸಿದ್ದು, ನಂತರ ಬಾಲಕ ನನ್ನು ಅಲ್ಮಾಸ್ಗುಡಾದ ತನ್ನ ನಿವಾಸದ ಬಳಿ ಕರೆದೊಯ್ದು ದೇವಾ ಲಯದ ಒಳಗೆ ಕುಳಿತುಕೊಳ್ಳುವಂತೆ ಸೂಚಿಸಿದ್ದಾನೆ. ಬಾಲಕನನ್ನು ದೇವಸ್ಥಾನದಲ್ಲಿ ಕೂರಿಸಿಕೊಂಡು ಅರ್ಜುನ್ ತಂದೆ ರಾಜು ಅವರಿಗೆ ಕರೆ ಮಾಡಿದ್ದಾನೆ ಎಂದು ಪೆÇಲೀಸರು ಮಾಹಿತಿ ನೀಡಿದರು. ಮಾತನಾಡುವ ವೇಳೆ ತನ್ನ ಧ್ವನಿಯನ್ನು ಬದಲಾಯಿಸಲು ಯತ್ನಿ ಸಿದ್ದು, ನಂತರ 3 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಯಾವುದೇ ಕಾರಣಕ್ಕೂ ಪೆÇಲೀಸರನ್ನು ಸಂಪರ್ಕಿಸಬೇಡಿ, ನಾನು ಹೇಳಿದಷ್ಟು ಮಾಡಿ ಎಂದು ಆವಾಜ್ ಹಾಕಿದ್ದಾನೆ. ಅಲ್ಲದೆ ಒಂದು ವೇಳೆ ಪೆÇಲೀಸರಿಗೆ ಮಾಹಿತಿ ನೀಡಿದಲ್ಲಿ ನಿಮ್ಮ ಮಗನನ್ನು ಕೊಲ್ಲು ವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಾಹಿತಿ ನೀಡಿದರು.
ಇದಕ್ಕೆ ಅರ್ಜುನ್ ತಂದೆ ರಾಜು ಮಗನ ಸುರಕ್ಷತೆಗಾಗಿ ಮನವಿ ಮಾಡಿದ್ದು, ಮಾತುಕತೆ ನಡೆಸಲು ಒಪ್ಪಿಕೊಂಡಿದ್ದಾರೆ. ಅಲ್ಲದೆ ತಮ್ಮ ಬಳಿ ಕೇವಲ 1.5 ಲಕ್ಷ ರೂ. ಮಾತ್ರ ಇದೆ ಎಂದು ತಿಳಿಸಿದ್ದಾರೆ. ಆದರೆ ಅಪ್ರಾಪ್ತ ಇದನ್ನು ಸ್ವೀಕರಿಸಲು ನಿರಾಕರಿಸಿದ್ದಾನೆ. ನಂತರ ರಾಜು ಅವರು 25 ಸಾವಿರ ರೂ. ನಗದು ಹಾಗೂ ಉಳಿದ ಹಣವನ್ನು ಚೆಕ್ ರೂಪದಲ್ಲಿ ನೀಡಲು ಮುಂದಾಗಿದ್ದಾರೆ. ಇದನ್ನು 17 ವರ್ಷದ ಬಾಲಕ ಒಪ್ಪಿಕೊಂಡಿದ್ದಾನೆ ಎಂದು ರಾಚಕೊಂಡ ಪೆÇಲೀಸರು ತಿಳಿಸಿದ್ದಾರೆ. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ರಾಜು, ಮಧ್ಯಾಹ್ನ 3 ಗಂಟೆ ಸುಮಾರಿಗೆ ನಮ್ಮ ಮಗ ಕಾಣೆಯಾಗಿದ್ದಾನೆ ಎಂದು ಅರಿವಾಯಿತು. ಕರೆ ಮಾಡಿದವರು ಹಣ ಕೇಳಿದರು. ನಾನು ಒಪ್ಪಿಕೊಳ್ಳದಿದ್ದರೆ ಅರ್ಜುನ್ ಎಂದಿಗೂ ಮನೆಗೆ ಹಿಂದಿರುಗುವುದಿಲ್ಲ ಎಂದು ಹೇಳಿದರು. ಹೀಗಾಗಿ ನಾವು ಭಯಭೀತರಾದೆವು. ನಂತರ ನಾವು ಮೀರ್‍ಪೇಟೆ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆವು ಎಂದು ವಿವರಿಸಿದರು.
ದೂರು ದಾಖಲಾದ 4 ಗಂಟೆಗಳಲ್ಲಿ ಪೆÇಲೀಸರು ಅಪ್ರಾಪ್ತ ಆರೋಪಿ ಇದ್ದ ಸ್ಥಳವನ್ನು ಪತ್ತೆ ಹಚ್ಚಿದರು. ನಂತರ ಅಪ್ರಾಪ್ತ ಆರೋಪಿ ಯನ್ನು ವಶಕ್ಕೆ ಪಡೆದಿದ್ದು, ಆತ ಅಪರಾಧವನ್ನು ಒಪ್ಪಿಕೊಂಡಿ ದ್ದಾನೆ. ಅರ್ಜುನನ ತಂದೆಯಿಂದ ಹಣ ಸಂಗ್ರಹಿಸಿಕೊಳ್ಳಲು ಬಂದಾಗ ಆತನನ್ನು ಹಿಡಿದಿದ್ದೇವೆ ಎಂದು ರಾಚಕೊಂಡ ಪೆÇಲೀಸ್ ಆಯುಕ್ತ ಮಹೇಶ್ ಭಾಗವತ್ ಹೇಳಿದ್ದಾನೆ. ಅಪ್ರಾಪ್ತ ಆರೋಪಿ ಅಪರಾಧದ ಇತಿಹಾಸ ಹೊಂದಿದವನಾಗಿದ್ದಾನೆ. ಈ ಹಿಂದೆ ಈತ ತನ್ನ ನೆರೆಯವರಿಂದ 1 ಲಕ್ಷ ರೂ.ಕದ್ದಿದ್ದ ಎಂದು ತಿಳಿದು ಬಂದಿದೆ.