Tag: Tanveer Sait

ಮೈಸೂರು ಪಾಲಿಕೆಯಲ್ಲಿ ಕಾಂಗ್ರೆಸ್-ದಳ ಮೈತ್ರಿ ಮುಂದುವರಿಕೆ: ಶಾಸಕ ತನ್ವೀರ್
ಮೈಸೂರು

ಮೈಸೂರು ಪಾಲಿಕೆಯಲ್ಲಿ ಕಾಂಗ್ರೆಸ್-ದಳ ಮೈತ್ರಿ ಮುಂದುವರಿಕೆ: ಶಾಸಕ ತನ್ವೀರ್

February 14, 2021

ಮೈಸೂರು, ಫೆ.13(ವೈಡಿಎಸ್)- ಮೈಸೂರು ಮಹಾ ನಗರ ಪಾಲಿಕೆಯಲ್ಲಿ ಈ ಬಾರಿಯೂ ಜೆಡಿಎಸ್-ಕಾಂಗ್ರೆಸ್ ಮೈತ್ರಿ ನಿಶ್ಚಿತ ಎಂದು ಕಾಂಗ್ರೆಸ್ ಶಾಸಕ ತನ್ವೀರ್‍ಸೇಠ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೈಸೂರಿನ ಉದಯಗಿರಿ ಯಲ್ಲಿರುವ ತಮ್ಮ ನಿವಾಸದಲ್ಲಿ ಶನಿವಾರ ಮಾಧ್ಯಮ ದೊಂದಿಗೆ ಮಾತನಾಡಿ ಅವರು, ಶಾಸಕ ಸಾ.ರಾ.ಮಹೇಶ್ ಹಾಗೂ ನನ್ನ ನಡುವೆ ಕಾಂಗ್ರೆಸ್, ಜೆಡಿಎಸ್ ನಗರಾಧ್ಯಕ್ಷರ ಉಪಸ್ಥಿತಿಯಲ್ಲಿ ಒಪ್ಪಂದವಾಗಿದೆ. ಸ್ಥಳೀಯವಾಗಿ ಮೈತ್ರಿ ಮುಂದು ವರೆಯಲಿದೆ. ಶಾಸಕ ಸಾರಾ ಕೂಡ ಶುಕ್ರವಾರ ಸಭೆ ನಡೆಸಿದ್ದಾರೆ. ಅವರ ಜತೆ ಮತ್ತೊಮ್ಮೆ ಮಾತುಕತೆ ನಡೆಸುತ್ತೇನೆ ಎಂದರು. `ಯಾರೊಂದಿಗೂ ಮೈತ್ರಿ…

ಡಾ.ಬಿ.ಆರ್.ಅಂಬೇಡ್ಕರ್ ಭವನದ ಕಾಮಗಾರಿಗೆ ಶೀಘ್ರವೇ ಚಾಲನೆ
ಮೈಸೂರು

ಡಾ.ಬಿ.ಆರ್.ಅಂಬೇಡ್ಕರ್ ಭವನದ ಕಾಮಗಾರಿಗೆ ಶೀಘ್ರವೇ ಚಾಲನೆ

November 8, 2020

ಮೈಸೂರು,ನ.7(ಪಿಎಂ)- ಮೈಸೂರಿನ ಡಾ.ಬಿ.ಆರ್.ಅಂಬೇ ಡ್ಕರ್ ಭವನ ನಿರ್ಮಾಣ ಕಾಮಗಾರಿ ಶೀಘ್ರ ಪೂರ್ಣಗೊಳಿಸುವ ನಿಟ್ಟಿನಲ್ಲಿ ಹಿಂದಿನ ಪ್ರಸ್ತಾವನೆಗಳು ಸೇರಿದಂತೆ ಈಗಿರುವ ನ್ಯೂನತೆ ಗಳನ್ನು ಸರಿಪಡಿಸಿ ಸಂಪುಟ ಸಭೆಗೆ ಅನುಮೋದನೆಗೆ ಕ್ರಿಯಾ ಯೋಜನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬೆಂಗಳೂರಿನ ವಿಕಾಸಸೌಧದಲ್ಲಿ ಶನಿವಾರ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ಶನಿವಾರ ನಡೆದ ಸಭೆ ಯಲ್ಲಿ ಉಭಯ ಸಚಿವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ನಿಮಾರ್ಣಗೊಳ್ಳುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನ…

ಗಣ್ಯರಿಂದ ತನ್ವೀರ್ ಸೇಠ್ ಆರೋಗ್ಯ ವಿಚಾರಣೆ
ಮೈಸೂರು

ಗಣ್ಯರಿಂದ ತನ್ವೀರ್ ಸೇಠ್ ಆರೋಗ್ಯ ವಿಚಾರಣೆ

November 19, 2019

ಮೈಸೂರು, ನ. 18(ಆರ್‍ಕೆ,ಎಂಕೆ)- ತೀವ್ರ ಹಲ್ಲೆಗೊಳಗಾಗಿ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿರುವ ಶಾಸಕ ತನ್ವೀರ್ ಸೇಠ್ ಅವರನ್ನು ಸುತ್ತೂರು ಶ್ರೀಗಳು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು. ಮುಂಜಾನೆ 4 ಗಂಟೆ ವೇಳೆಗೆ ಮಾಜಿ ಸಚಿವ ಯು.ಟಿ. ಖಾದರ್ ಭೇಟಿ ನೀಡಿ ತನ್ವೀರ್, ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು. ಸಚಿವ ಶ್ರೀರಾಮುಲು, ಶಾಸಕರಾದ ಜಿ.ಟಿ.ದೇವೇಗೌಡ, ಪುಟ್ಟ ರಂಗ ಶೆಟ್ಟಿ, ಎಲ್.ನಾಗೇಂದ್ರ, ಸಂಸದ…

ಅಗತ್ಯವಿದ್ದರೆ ಏರ್ ಲಿಫ್ಟ್ ವ್ಯವಸ್ಥೆಗೆ ಸಿದ್ಧ: ಸಚಿವ ಸೋಮಣ್ಣ
ಮೈಸೂರು

ಅಗತ್ಯವಿದ್ದರೆ ಏರ್ ಲಿಫ್ಟ್ ವ್ಯವಸ್ಥೆಗೆ ಸಿದ್ಧ: ಸಚಿವ ಸೋಮಣ್ಣ

November 19, 2019

ತನ್ವೀರ್ ಸೇಠ್ ಅವರನ್ನು ಏರ್ ಲಿಫ್ಟ್ ಮೂಲಕ ದೇಶದ ಯಾವುದೇ ಆಸ್ಪ ತ್ರೆಗೆ ಬೇಕಾದರೂ ದಾಖಲಿ ಸಲು ಸರ್ಕಾರ ಸಿದ್ಧವಿದೆ. ಚಿಕಿತ್ಸಾ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರ ಭರಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ತಿಳಿಸಿದರು. ಆಸ್ಪತ್ರೆಯ ವೈದ್ಯಕೀಯ ಸೇವೆ ಗಳ ಮುಖ್ಯಸ್ಥ ಡಾ.ಉಪೇಂದ್ರ ಶೆಣೈ, ತಜ್ಞ ವೈದ್ಯರಾದ ಮಕ್ಸೂದ್ ಹಾಗೂ ದತ್ತಾತ್ರಿ ಅವರು ಸಕಾಲದಲ್ಲಿ ಶಸ್ತ್ರಚಿಕಿತ್ಸೆ ನಡೆಸದೇ ಇದ್ದಿದ್ದರೆ ತನ್ವೀರ್‍ಸೇಠ್ ಬದುಕುಳಿಯುವುದು ಕಷ್ಟವಾಗು ತ್ತಿತ್ತು. ದೇವರ ದಯೆ ಯಾವುದೇ ಅಪಾಯವಿಲ್ಲ ಎಂದು ಸೋಮಣ್ಣ ತಿಳಿಸಿದರು….

ತನ್ವೀರ್ ಮೇಲಿನ ಹಲ್ಲೆಗೆ ಎಸ್‍ಡಿಪಿಐ ಖಂಡನೆ:  ಸಿದ್ದರಾಮಯ್ಯ ಹೇಳಿಕೆಗೆ ಅಬ್ದುಲ್ ಮಜೀದ್ ಬೇಸರ
ಮೈಸೂರು

ತನ್ವೀರ್ ಮೇಲಿನ ಹಲ್ಲೆಗೆ ಎಸ್‍ಡಿಪಿಐ ಖಂಡನೆ: ಸಿದ್ದರಾಮಯ್ಯ ಹೇಳಿಕೆಗೆ ಅಬ್ದುಲ್ ಮಜೀದ್ ಬೇಸರ

November 19, 2019

ಮೈಸೂರು, ನ.18- ಮಾಜಿ ಸಚಿವ, ಶಾಸಕರಾದ ತನ್ವೀರ್ ಸೇಠ್ ಮೇಲೆ ಮಾರ ಣಾಂತಿಕ ಹಲ್ಲೆ ನಡೆಸಿರುವುದು ಆಘಾತಕಾರಿ ಘಟನೆಯಾಗಿದ್ದು, ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಹೇಳಿದ್ದಾರೆ. ಒಬ್ಬ ಜನಪ್ರತಿನಿಧಿಯ ಮೇಲೆ ನೂರಾರು ಜನರ ಸಮ್ಮುಖದಲ್ಲೇ ಈ ರೀತಿ ಹಲ್ಲೆ ನಡೆಸಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಹಲ್ಲೆ ನಡೆಸಿರುವ ಆರೋಪಿಯನ್ನು ಈಗಾಗಲೇ ಪೆÇಲೀಸರು ಬಂಧಿಸಿದ್ದು, ಘಟನೆಯ ಹಿಂದಿರುವ ಉದ್ದೇಶವನ್ನು ಬಯಲಿಗೆಳೆದು ಸಮಗ್ರ ತನಿಖೆ ನಡೆಸುವಂತೆ…

ಶಾಸಕ ತನ್ವೀರ್ ಸೇಠ್ ಹತ್ಯೆಗೆ ಯತ್ನ
ಮೈಸೂರು

ಶಾಸಕ ತನ್ವೀರ್ ಸೇಠ್ ಹತ್ಯೆಗೆ ಯತ್ನ

November 18, 2019

ಮೈಸೂರು: ನೂರಾರು ಜನರ ಸಮ್ಮುಖ ದಲ್ಲೇ ನರ ಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರನ್ನು ಮಚ್ಚಿ ನಿಂದ ಕೊಚ್ಚಿ ಹತ್ಯೆ ಮಾಡಲು ಪ್ರಯತ್ನಿಸಿದ ಘಟನೆ ಭಾನು ವಾರ ರಾತ್ರಿ ಮೈಸೂರಿನ ಪಂಜಿನ ಕವಾ ಯತು ಮೈದಾನದಲ್ಲಿ ನಡೆದಿದೆ. ತೀವ್ರ ವಾಗಿ ಗಾಯಗೊಂಡಿರುವ ಶಾಸಕರು ಖಾಸಗಿ ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಮ್ಮ ಆಪ್ತರ ಪುತ್ರನ ವಿವಾಹದ ಆರತ ಕ್ಷತೆ ಕಾರ್ಯ ಕ್ರಮದಲ್ಲಿ ಕುಟುಂಬ ಸಮೇತರಾಗಿ ಶಾಸಕ ತನ್ವೀರ್‍ಸೇಠ್ ಭಾಗವಹಿಸಿದ್ದ ವೇಳೆಯಲ್ಲೇ ಈ ಘಟನೆ ನಡೆದಿದ್ದು,…

ಪ್ರಾಮಾಣಿಕ ಸೇವೆ ಸಲ್ಲಿಸಿದರೆ ಸವಿತಾ ಸಮಾಜದ ಉದ್ಧಾರ ಸಾಧ್ಯ
ಮೈಸೂರು

ಪ್ರಾಮಾಣಿಕ ಸೇವೆ ಸಲ್ಲಿಸಿದರೆ ಸವಿತಾ ಸಮಾಜದ ಉದ್ಧಾರ ಸಾಧ್ಯ

February 1, 2019

ಮೈಸೂರು: ಪ್ರತಿ ಯೊಬ್ಬರೂ ಪ್ರಾಮಾಣಿಕ ಸಮಾಜ ಸೇವಕರಾಗಿ ಸಮಾಜದ ಏಳಿಗೆಗೆ ನಿರಂತರವಾಗಿ ದುಡಿದರೆ ಸಮಾಜದ ಉದ್ಧಾರ ಸಾಧ್ಯವಾಗಲಿದೆ ಎಂದು ಶಾಸಕ ತನ್ವೀರ್‍ಸೇಠ್ ಅಭಿಪ್ರಾಯಪಟ್ಟರು. ಮೈಸೂರಿನ ಖಾಸಗಿ ಹೋಟೆಲ್ ಸಭಾಂ ಗಣದಲ್ಲಿ ಕರ್ನಾಟಕ ರಾಜ್ಯ ಸವಿತಾ ಸಮಾ ಜದ ವತಿಯಿಂದ ನಡೆದ ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಜಯಂತ್ಯೋತ್ಸವ ಮತ್ತು ಸಮಾಜದ ಮೈಸೂರು ಜಿಲ್ಲಾ ಕಾರ್ಯಕಾರಿ ಸಮಿ ತಿಯ ಪದಗ್ರಹಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸೇವೆ ಎಂಬುದು ಒಂದು ಜನಾಂಗಕ್ಕೆ ಮಾತ್ರ ಸೀಮಿತವಲ್ಲ. ಎಲ್ಲಾ ವರ್ಗದವರೂ…

ವಿಕಲಚೇತನರ ಅಭಿವೃದ್ಧಿಗೆ ಸರ್ಕಾರ ಬದ್ಧ: ಸಚಿವ ಜಿಟಿಡಿ
ಮೈಸೂರು

ವಿಕಲಚೇತನರ ಅಭಿವೃದ್ಧಿಗೆ ಸರ್ಕಾರ ಬದ್ಧ: ಸಚಿವ ಜಿಟಿಡಿ

December 4, 2018

ಮೈಸೂರು: ರಾಜ್ಯದಲ್ಲಿ ವಿಕಲಚೇತನರ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಹೊಸ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ವಿಕಲ ಚೇತನರ ಹಿತ ಕಾಪಾಡಲಾಗುತ್ತಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ. ದಸರಾ ವಸ್ತು ಪ್ರದರ್ಶನ ಆವರಣದ ಪಿ.ಕಾಳಿಂಗರಾವ್ ಗಾನಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತ ನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಸೋಮವಾರ ನಡೆದ `ವಿಶ್ವ ವಿಕಲಚೇ ತನರ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತ ನಾಡಿದ…

ಈ ಬಾರಿ ದಸರಾ ಉತ್ಸವದ ಬಗ್ಗೆ ಸಮಗ್ರ ತನಿಖೆ  ಆಗಬೇಕು: ಶಾಸಕ ತನ್ವೀರ್ ಸೇಠ್ ಆಗ್ರಹ
ಮೈಸೂರು

ಈ ಬಾರಿ ದಸರಾ ಉತ್ಸವದ ಬಗ್ಗೆ ಸಮಗ್ರ ತನಿಖೆ  ಆಗಬೇಕು: ಶಾಸಕ ತನ್ವೀರ್ ಸೇಠ್ ಆಗ್ರಹ

October 21, 2018

ಮೈಸೂರು:  ದಸರಾ ಮಹೋತ್ಸವ ಆಚರಣೆಯಲ್ಲಿ ಜಿಲ್ಲಾ ಉಸ್ತು ವಾರಿ ಸಚಿವರ ಕೈಗೊಂಬೆಯಂತೆ ಮೈಸೂರು ಜಿಲ್ಲಾಡಳಿತ ನಡೆದುಕೊಳ್ಳುವ ಮೂಲಕ ಕರ್ತವ್ಯ ಲೋಪ ಎಸಗಿದ್ದು, ಪಾಸ್ ವಿತರಣೆ, ಶಿಷ್ಟಾಚಾರ ಪಾಲನೆ ಸೇರಿದಂತೆ ಈ ಬಾರಿ ದಸರಾ ಮಹೋತ್ಸವ ಸಂಬಂಧ ಸಮಗ್ರ ತನಿಖೆಯಾಗಬೇಕೆಂದು ಶಾಸಕರೂ ಆದ ಮಾಜಿ ಸಚಿವ ತನ್ವೀರ್‍ಸೇಠ್ ಆಗ್ರಹಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ನಾಡಹಬ್ಬ ದಸರಾದಲ್ಲಿ ಕಾಂಗ್ರೆಸ್‍ನ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಹಾಗೂ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ. ದಸರಾ ಮಹೋತ್ಸವ…

ಕೇಂದ್ರದ ಜನ ವಿರೋಧಿ ನೀತಿ ಖಂಡಿಸಿ ನಾಳಿನ ಬಂದ್ ಬೆಂಬಲಿಸಲು ಶಾಸಕ ತನ್ವೀರ್ ಮನವಿ
ಮೈಸೂರು

ಕೇಂದ್ರದ ಜನ ವಿರೋಧಿ ನೀತಿ ಖಂಡಿಸಿ ನಾಳಿನ ಬಂದ್ ಬೆಂಬಲಿಸಲು ಶಾಸಕ ತನ್ವೀರ್ ಮನವಿ

September 9, 2018

ಮೈಸೂರು: ಕೇಂದ್ರ ಸರ್ಕಾರದ ಜನವಿರೋಧಿ ನಡೆಯನ್ನು ಖಂಡಿಸಿ ದೇಶದ ಜನತೆಯ ದನಿಯಾಗಲು ಕಾಂಗ್ರೆಸ್ ಪಕ್ಷವು ಸೆ.10ರಂದು ಭಾರತ್ ಬಂದ್‍ಗೆ ಕರೆ ನೀಡಿದೆ ಎಂದು ಶಾಸಕರೂ ಆದ ಮಾಜಿ ಸಚಿವ ತನ್ವೀರ್ ಸೇಠ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ ಅವೈಜ್ಞಾನಿಕ ನಿಲುವುಗಳಿಂದ ಪೆಟ್ರೋಲ್-ಡೀಸೆಲ್ ಬೆಲೆ ಗಗನಕ್ಕೇರಿದ್ದು, ಪರಿಣಾಮ ಅಗತ್ಯ ವಸ್ತುಗಳ ಬೆಲೆಯೂ ಹೆಚ್ಚಳಗೊಂಡು ಜನಸಾಮಾನ್ಯರು ಸಂಕಷ್ಟ ಅನುಭವಿಸುವಂತಾಗಿದೆ. ದಿನೇ ದಿನೆ ತೈಲ…

1 2
Translate »