ವಿಕಲಚೇತನರ ಅಭಿವೃದ್ಧಿಗೆ ಸರ್ಕಾರ ಬದ್ಧ: ಸಚಿವ ಜಿಟಿಡಿ
ಮೈಸೂರು

ವಿಕಲಚೇತನರ ಅಭಿವೃದ್ಧಿಗೆ ಸರ್ಕಾರ ಬದ್ಧ: ಸಚಿವ ಜಿಟಿಡಿ

December 4, 2018

ಮೈಸೂರು: ರಾಜ್ಯದಲ್ಲಿ ವಿಕಲಚೇತನರ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಹೊಸ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ವಿಕಲ ಚೇತನರ ಹಿತ ಕಾಪಾಡಲಾಗುತ್ತಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.

ದಸರಾ ವಸ್ತು ಪ್ರದರ್ಶನ ಆವರಣದ ಪಿ.ಕಾಳಿಂಗರಾವ್ ಗಾನಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತ ನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಸೋಮವಾರ ನಡೆದ `ವಿಶ್ವ ವಿಕಲಚೇ ತನರ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತ ನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ವಿಕಲಚೇತನರು ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಮಾನ್ಯರಿಗೆ ಸರಿಸಮನಾಗಿ ಸಾಧನೆ ಮಾಡುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿಯೂ ವಿಕಲ ಚೇತನರು ಹಿಂದೆ ಬಿದ್ದಿಲ್ಲ. ಇಂದು ರಾಜ್ಯದ ಎಲ್ಲೆಡೆ ವಿಕಲಚೇತನರ ದಿನಾಚರಣೆ ಆಚರಿಸುತ್ತಿದ್ದು, ವಿವಿಧ ಬಗೆಯ ವಿಕಲಚೇತನರು ಬಹಳ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ ಎಂದರು.

ವಿಕಲಚೇತನರೂ ಸ್ವಾವಲಂಬಿಯಾಗಿ ಬಾಳಲು ಬೇಕಾ ಗುವ ಸವಲತ್ತು ಕಲ್ಪಿಸಲು ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಮುಂದಾಗಿದ್ದಾರೆ. ಎಲ್ಲ ರೀತಿಯ ಸೌಲಭ್ಯಗಳಲ್ಲೂ ವಿಕಲಚೇತನರಿಗೆ ಆದ್ಯತೆ ನೀಡಲಾಗುತ್ತಿದೆ. ಇದಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಬ್ರೈಲ್ ಲಿಪಿಯ ಕ್ಯಾಲೆಂಡರ್ ಅನ್ನು ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಸಿ.ಜೆ. ಮೊಹ ಮದ್ ಮುಜೀರುಲ್ಲಾ ಬಿಡುಗಡೆ ಮಾಡಿ ಮಾತನಾಡಿ, ತಮ್ಮ ಹಕ್ಕುಗಳಿಗಾಗಿ ವಿಕಲಚೇತನರು ಹೋರಾಟ ಮಾಡಲು ಸಾಧ್ಯವಿಲ್ಲ. ಸಾಮಾನ್ಯ ಜನ ವಿಕಲಚೇತನರಿಗೆ ಸೌಲಭ್ಯ ಕಲ್ಪಿಸಲು ನೆರವಾಗಬೇಕು. ತಮ್ಮ ಹಕ್ಕುಗಳಿಗಾಗಿ ಕಾನೂ ನಾತ್ಮಕವಾಗಿ ಹೋರಾಟ ಮಾಡಲು ಅವರಿಗೆ ಅವಕಾಶ ವಿದೆ. ಕಾನೂನು ಸೇವೆಗಳ ಪ್ರಾಧಿಕಾರ ಇಂತಹವರಿಗೆ ಉಚಿತ ಸೇವೆ ನೀಡಲಿದೆ. ಜಿಲ್ಲಾ ನ್ಯಾಯಾಲಯವಾಗಲೀ, ಹೈಕೋರ್ಟ್ ಅಥವಾ ಸುಪ್ರಿಂಕೋರ್ಟ್‍ನಲ್ಲಿ ಪ್ರಕರಣ ಗಳಿದ್ದರೂ ವಿಕಲಚೇತನರಿಗೆ ಪ್ರಾಧಿಕಾರ ನೆರವಾಗುತ್ತದೆ ಎಂದು ಅವರು ತಿಳಿಸಿದರು.

ಇದೇ ವೇಳೆ ನ.22 ಮತ್ತು 24ರಂದು ವಿಕಲಚೇತನ ರಿಗಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ತನ್ವೀರ್ ಸೇಠ್, ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಕೆ.ರಾಧ, ವಿಕಲಚೇತನರ ಸಂಘದ ಅಧ್ಯಕ್ಷ ಶ್ರೀಧರ್ ದೀಕ್ಷಿತ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ವಿಕಲಚೇತನರ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಹೆಚ್ಚಳವಾಗಬೇಕು: ಶಾಸಕ ತನ್ವೀರ್ ಸೇಠ್ ಆಗ್ರಹ
ಮೈಸೂರು: ಮೈಸೂರು ಜಿಲ್ಲೆಯಲ್ಲಿ 64 ಸಾವಿರ ವಿಕಲಚೇತನರಿದ್ದು, ಸರ್ಕಾರಿ ಹಾಗೂ ಖಾಸಗಿ ವಿಶೇಷ ಮಕ್ಕಳ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಹೆಚ್ಚಿಸುವ ಅಗತ್ಯ ವಿದೆ ಎಂದು ಶಾಸಕ ತನ್ವೀರ್ ಸೇಠ್ ಅಭಿಪ್ರಾಯಪಟ್ಟಿದ್ದಾರೆ.

ದಸರಾ ವಸ್ತುಪ್ರದರ್ಶನ ಆವರಣದಲ್ಲಿರುವ ಪಿ. ಕಾಳಿಂಗ ರಾವ್ ಗಾನಮಂಟಪದಲ್ಲಿ ಸೋಮವಾರ ನಡೆದ `ವಿಶ್ವ ವಿಕಲಚೇತನರ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾ ಡಿದ ಅವರು, ಇಂತಹ ಕಾರ್ಯಕ್ರಮ ನಡೆಸುವ ಮೂಲಕ ವಿವಿಧ ಬಗೆಯ ವಿಕಲಚೇತನರಿಗೆ ಧೈರ್ಯ ಹಾಗೂ ಆತ್ಮ ಸ್ಥೈರ್ಯ ತುಂಬುವ ಕೆಲಸ ಮಾಡುತ್ತಿರುವುದು ಶ್ಲಾಘ ನೀಯ. ಮೈಸೂರು ಜಿಲ್ಲೆಯಲ್ಲಿ ವಿಕಲಚೇತನರಿಗಾಗಿ ಶಿಕ್ಷಣ ನೀಡುವುದಕ್ಕೆ ಸರ್ಕಾರಿ ಸ್ವಾಮ್ಯದ ಮೂರು, ಸ್ವಯಂ ಸೇವಾ ಸಂಸ್ಥೆಗಳ 23 ಶಿಕ್ಷಣ ಸಂಸ್ಥೆಗಳಿವೆ. ಅಗತ್ಯಕ್ಕೆ ತಕ್ಕಂತೆ ವಿಕಲ ಚೇತನರಿಗೆ ಶಿಕ್ಷಣ ಸಂಸ್ಥೆಗಳಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿಯಾಗಿರುವ ವಿಕಲಚೇತನರ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಹೆಚ್ಚಿಸಬೇಕಾದ ಅಗತ್ಯವಿದೆ. ಈ ನಿಟ್ಟಿ ನಲ್ಲಿ ಚರ್ಚೆಗಳು ನಡೆಯಲಿ ಎಂದರು.

ಜಾಗೃತಿ ಅಗತ್ಯ: ಪ್ರಸ್ತುತ ನಾವು ಮಾಹಿತಿ-ತಂತ್ರಜ್ಞಾನ, ವಿಜ್ಞಾನ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಪ್ರಗತಿ ಸಾಧಿ ಸುತ್ತಿದ್ದೇವೆ. ಇದರ ಫಲವಾಗಿ ಅಂಗವೈಕಲ್ಯ ಮಕ್ಕಳ ಜನನಕ್ಕೆ ಕಾರಣವನ್ನು ಕಂಡು ಹಿಡಿಯಲಾಗಿದೆ. ಆದರೂ ವಿಕಲ ಚೇತನ ಮಕ್ಕಳ ಜನನ ಸಂಖ್ಯೆ ಹೆಚ್ಚುತ್ತಲೇ ಇದೆ. ಗರ್ಭಿಣಿ ಯರಿಗೆ ಪೌಷ್ಟಿಕ ಆಹಾರದ ಕೊರತೆ ಉಂಟಾದಾಗ, ಸಂಬಂಧ ಗಳಲ್ಲಿಯೇ ವಿವಾಹವಾಗುವುದರಿಂದ ವಿಕಲಚೇತನ ಮಕ್ಕಳ ಜನನವಾಗುತ್ತದೆ ಎಂದು ದೃಢಪಟ್ಟಿದೆ. ಇದಕ್ಕೆ ಪರಿಹಾ ರೋಪಾಯ ಕಂಡುಕೊಳ್ಳಬೇಕಿದೆ ಎಂದರು.

ಸದುಪಯೋಗವಾಗುತ್ತಿರುವುದು ಸಂಶಯ : ವಿಕಲಚೇತನ ರಿಗಾಗಿ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು ತಮ್ಮ ಅನುದಾನದಲ್ಲಿ ತ್ರಿಚಕ್ರ ವಾಹನಗಳನ್ನು ನೀಡುತ್ತಾ ಬಂದಿದ್ದಾರೆ. ಆದರೆ ಈ ವಾಹನಗಳು ಸದುಪಯೋಗವಾಗು ತ್ತಿರುವ ಸಂಬಂಧ ಸಂಶಯ ಕಾಡಲಾರಂಭಿಸಿದೆ. ಈ ಹಿನ್ನೆಲೆ ಯಲ್ಲಿ ಪರಿಶೀಲನೆಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಮೀಸಲಾತಿ ಸೌಲಭ್ಯ ನೀಡಲಾಗಿದೆ: ವಿಕಲಚೇತನರ ಸಂಘದ ಸದಸ್ಯರು ವಿಕಲಚೇತನರಿಗಾಗಿ ಪ್ರತ್ಯೇಕ ಕಾಲೋನಿ ನಿರ್ಮಿಸುವಂತೆ ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರವಾಗಲೀ ಅಥವಾ ಪ್ರಾಧಿಕಾರವಾಗಲೀ ವಿತರಿ ಸುವ ಮನೆ, ನಿವೇಶನಗಳಲ್ಲಿ ವಿಕಲಚೇತನರಿಗೆ ಆದ್ಯತೆ ನೀಡಲಾಗುತ್ತಿದೆ. ಈ ಸೌಲಭ್ಯವನ್ನು ಕೆಲವರು ಪಡೆದು ಕೊಂಡಿದ್ದಾರೆ. ಸರ್ಕಾರಿ ಉದ್ಯೋಗದಲ್ಲಿಯೂ ಇವರಿಗೆ ಮೀಸಲಾತಿ ಕಲ್ಪಿಸಲಾಗಿದೆ. ಸ್ಥಳೀಯ ಸಂಸ್ಥೆಗಳ ಅನು ದಾನದಲ್ಲಿ ಶೇ.3ರಷ್ಟು ವಿಕಲಚೇತನರ ಅಭಿವೃದ್ಧಿಗೆ ವಿನಿ ಯೋಗಿಸಲಾಗುತ್ತಿದೆ ಎಂದರು.

ಸಮಸ್ಯೆ ಪರಿಹರಿಸುವ ಅಧಿಕಾರಿಗಳು ಬೇಕು: ವಿಕಲ ಚೇತನರ ಕಲ್ಯಾಣ ಇಲಾಖೆಗೆ ಕೇವಲ ಸಂಭಾವನೆ ಪಡೆಯುವುದಕ್ಕಾಗಿಯೇ ಕೆಲಸ ಮಾಡುವ ಅಧಿಕಾರಿಗಳ ಅವಶ್ಯಕತೆಯಿಲ್ಲ. ವಿಕಲಚೇತನರನ್ನು ಪ್ರೀತಿಸುವ ಅವರ ಸಮಸ್ಯೆಗಳನ್ನು ಬಗೆಹರಿಸುವ ಮನೋಭಾವವುಳ್ಳ ಅಧಿ ಕಾರಿಗಳು ಬೇಕಾಗಿದ್ದಾರೆ. 2016ರ ವಿಕಲಚೇತನರ ಕಾಯ್ದೆ ಅನುಷ್ಠಾನಕ್ಕೆ ಒತ್ತಾಯಿಸಿ ಕೆಲವರು ಪ್ರತಿಭಟನೆ ನಡೆಸಿ ದ್ದಾರೆ. ಈ ಕಾಯ್ದೆಯನ್ನು ಸರ್ಕಾರ ಅನುಷ್ಠಾನಗೊಳಿ ಸುತ್ತದೆ. ಇದಕ್ಕೆ ಪ್ರತಿಭಟನೆ ನಡೆಸುವ ಅವಶ್ಯಕತೆ ಇಲ್ಲ.

ತಿಲಕ್‍ನಗರದಲ್ಲಿರುವ ಸರ್ಕಾರಿ ಅಂಧ ಮತ್ತು ಶ್ರವಣ ದೋಷವುಳ್ಳ ಮಕ್ಕಳ ಶಾಲೆಗೆ ವಿವಿಧ ಸೌಲಭ್ಯ ಕಲ್ಪಿಸಲು ಅಗತ್ಯವಾದ ಅನುದಾನ ನೀಡುತ್ತೇನೆ. ಈ ಹಿಂದೆ ಬ್ರೈಲ್ ಲಿಪಿಯ ಮುದ್ರಣಾಲಯ ಕೆಟ್ಟಿತ್ತು. ಇದನ್ನು ಮನಗಂಡು ನನ್ನ ಕ್ಷೇತ್ರ ವ್ಯಾಪ್ತಿಗೆ ಬರದೆ ಇದ್ದರೂ 10 ಲಕ್ಷ ರೂ. ಅನುದಾನ ನೀಡಿದ್ದೆ. ಇದರೊಂದಿಗೆ ಸರ್ಕಾರ 23 ಲಕ್ಷ ರೂ. ನೀಡಿ ಮುದ್ರಣಾಲಯವನ್ನು ದುರಸ್ತಿ ಮಾಡಿದೆ ಎಂದು ಅವರು ಸ್ಮರಿಸಿದರು.

ದೇವರ ಸೇವೆ ಎಂದು ಪರಿಗಣಿಸಿ: ಪೋಷಕರು ವಿಕಲ ಚೇತನ ಮಕ್ಕಳನ್ನು ಭಾರವೆಂದು ಪರಿಗಣಿಸಬಾರದು. ನನ್ನ ಅಕ್ಕನ ಮಗಳು ವಿಕಲಚೇತನಳಾಗಿದ್ದು, 41 ವರ್ಷ ಬದುಕಿದ್ದರು. ಹಾಗಾಗಿ ವಿಕಲಚೇತನ ಮಕ್ಕಳ ಪೋಷ ಕರು ಎದುರಿಸುವ ಸಮಸ್ಯೆಯನ್ನು ನಾನು ಬಲ್ಲವನಾಗಿ ದ್ದೇನೆ. ಇದಕ್ಕಾಗಿಯೇ ಪ್ರತಿ ವರ್ಷ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ವಿಕಲಚೇತನ ಮಕ್ಕಳು ದೇವರ ವರ ಎಂದು ಭಾವಿಸಿ, ಅವರ ಸೇವೆ ಮಾಡಿ ಎಂದು ಸಲಹೆ ನೀಡಿದರು.

Translate »