ಸರ್ಕಾರಿ ಬಾಲಕಿಯರ ಬಾಲಮಂದಿರದಲ್ಲಿ `ಸ್ಮಾರ್ಟ್ ಕ್ಲಾಸ್’ ತರಗತಿಗೆ ಚಾಲನೆ
ಮೈಸೂರು

ಸರ್ಕಾರಿ ಬಾಲಕಿಯರ ಬಾಲಮಂದಿರದಲ್ಲಿ `ಸ್ಮಾರ್ಟ್ ಕ್ಲಾಸ್’ ತರಗತಿಗೆ ಚಾಲನೆ

December 4, 2018

ಮೈಸೂರು: ಜಪಾನ್ ದೇಶದ ಬಹುತೇಕ ವಿದ್ಯಾಸಂಸ್ಥೆಗಳಲ್ಲಿ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವ ರೆಗೂ `ಸ್ಮಾರ್ಟ್‍ಕ್ಲಾಸ್’ ತರಗತಿಗಳನ್ನು ಪರಿಚಯಿಸಲಾಗಿದೆ. ಇದಕ್ಕೆ ಬೇಕಾದ ತಂತ್ರಾಂಶವನ್ನು ಅಲ್ಲಿನ ಸರ್ಕಾರ ಒದಗಿಸಿದೆ ಎಂದು ಮಿಸ್ಟಿಬಿಸಿ ಕಂಪನಿ ಮೈಸೂರು ಘಟಕದ ವ್ಯವಸ್ಥಾಪಕ ನಿರ್ದೇಶಕ ಕವಾಮೋಟೋ ತಿಳಿಸಿದರು.

ಮೈಸೂರು-ತಿ.ನರಸೀಪುರ ರಸ್ತೆಯಲ್ಲಿರುವ ಸರ್ಕಾರಿ ಬಾಲಕಿ ಯರ ಬಾಲಮಂದಿರ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸರ್ಕಾರಿ ಬಾಲಕಿಯರ ಬಾಲಮಂದಿರ ಮೈಸೂರು ಘಟಕ ಹಾಗೂ ಮಿಸ್ಟಿಬಿಸಿ ಕಂಪನಿ, ವಿದ್ವತ್ ಇನೋವೇಟಿವ್ ಸಲ್ಯೂಷನ್ಸ್ ಪ್ರೈ(ಲಿ) ಸಹಯೋಗದೊಂದಿಗೆ ಆಯೋಜಿಸಿದ್ದ `ಸ್ಮಾರ್ಟ್ ಕ್ಲಾಸ್’ ತರಗತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಪಾನ್ ದೇಶದಲ್ಲಿ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣ ದವರೆಗೆ `ಸ್ಮಾರ್ಟ್‍ಕ್ಲಾಸ್’ ಅಧ್ಯಯನಕ್ಕೆ ಹೆಚ್ಚಿನ ಒತ್ತು ನೀಡಲಾ ಗಿದೆ. ಇದಕ್ಕೆ ಬೇಕಾದ ತಂತ್ರಾಂಶ ಅಭಿವೃದ್ಧಿ, ಪಠ್ಯಕ್ಕೆ ತಕ್ಕ ಅನಿಮೇಷನ್ ಸೇರಿದಂತೆ ವಿದ್ಯಾರ್ಥಿಗಳನ್ನು ಆಕರ್ಷಿಸಲು ಬೇಕಾದ ಎಲ್ಲಾ ತಂತ್ರಾಂಶ `ಸ್ಮಾರ್ಟ್‍ಕ್ಲಾಸ್’ ನಲ್ಲಿರುತ್ತದೆ. ಅಲ್ಲದೆ, ನನ್ನ ಮಗಳು ಸಹ ಜಪಾನ್ ದೇಶದ ವಿದ್ಯಾಸಂಸ್ಥೆಯೊಂದರಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರು ಮೈಸೂರಿಗೆ ಆಗಮಿಸಿದಾಗ, ಕೆಲಕಾಲ ನಿಮ್ಮ ಜೊತೆಗಿರುವ ಬಗ್ಗೆ ಇಚ್ಛೆ ವ್ಯಕ್ತಪಡಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇ ಶಕಿ ಕೆ.ರಾಧಾ ಮಾತನಾಡಿ, ಬಾಲಮಂದಿರದ ಹೆಣ್ಣುಮಕ್ಕಳು, ಸಮಾಜದ ಇತರೆ ವಿದ್ಯಾರ್ಥಿನಿಯರಿಗೆ ಕಡಿಮೆ ಇಲ್ಲದಂತೆ ಸ್ಪರ್ಧಾ ತ್ಮಕ ಶಿಕ್ಷಣ ಪಡೆದು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು. ಈ ಘಟಕ ದಲ್ಲಿ ಒಂದರಿಂದ ದ್ವಿತೀಯ ಪಿಯುಸಿವರೆಗೆ ಸುಮಾರು 60ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಧ್ಯಯನ ನಡೆಸುತ್ತಿದ್ದು, ಪ್ರತಿವರ್ಷ ಶೇ.95ರಷ್ಟು ಫಲಿತಾಂಶದೊಂದಿಗೆ ತೇರ್ಗಡೆ ಹೊಂದುತ್ತಿದ್ದಾರೆ. ಪಿಯುಸಿ ನಂತರ ಕೆಲವರು ಸ್ವಯಂ ಉದ್ಯೋಗಕ್ಕಾಗಿ ವಿವಿಧ ಕೋರ್ಸ್ ಗಳಲ್ಲಿ ತರಬೇತಿ ಪಡೆದರೆ, ಇನ್ನು ಕೆಲವರು ಉನ್ನತ ವ್ಯಾಸಂಗಕ್ಕಾಗಿ ಓದು ಮುಂದುವರೆಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಮಿಸ್ಟಿಬಿಸಿ ಕಂಪನಿ ಮೈಸೂರು ಘಟಕದ ವ್ಯವಸ್ಥಾಪಕ ನಿರ್ದೇಶಕ ರಾದ ಕವಾಮೋಟೋ ಅವರು, ಬಾಲಮಂದಿರ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕಳೆದ 3 ವರ್ಷಗಳಿಂದ 30ಲಕ್ಷಕ್ಕೂ ಅಧಿಕ ಶಿಕ್ಷಣ ಸಾಮಗ್ರಿಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಇದರ ಭಾಗವಾಗಿ ಇಂದು `ಸ್ಮಾರ್ಟ್ ಕ್ಲಾಸ್’ ತರಗತಿ ಆರಂಭಿಸಲು ಬೇಕಾದ ಸ್ಕ್ರೀನ್ ಹಾಗೂ ಪ್ರೊಜೆಕ್ಟರ್ ದೇಣಿಗೆಯಾಗಿ ನೀಡಿದ್ದಾರೆ. ಇದಕ್ಕೆ ಬೇಕಾದ ತಂತ್ರಾಂಶ ವನ್ನು ವಿದ್ವತ್ ಇನೋವೇಟಿವ್ ಸಲ್ಯೂಷನ್ಸ್ ಪ್ರೈ(ಲಿ) ಸಂಸ್ಥೆಯ ವರು ಅಭಿವೃದ್ಧಿಪಡಿಸಿ ಸ್ಮಾರ್ಟ್ ಕ್ಲಾಸ್ ತರಗತಿಗೆ ಸಾಥ್ ನೀಡಿರು ವುದು ಸಂತಸದ ವಿಚಾರ ಎಂದರು. ಈ ವೇಳೆ ಮಿಸ್ಟಿಬಿಸಿ ಮೈಸೂರು ಘಟಕದ ಕಾರ್ಯದರ್ಶಿ ಸ್ಮಿತಾ, ವಿದ್ವತ್ ಇನೊವೇಟೀವ್ ಸಲ್ಯೂಷನ್ಸ್ ಪ್ರೈ(ಲಿ) ಎಂಡಿ ರೋಹಿತ್‍ಪಾಟೀಲ್, ವೇಣುಗೋಪಾಲ್, ಕುಮಾರಸ್ವಾಮಿ, ಸರ್ಕಾರಿ ಬಾಲಕಿಯರ ಬಾಲಮಂದಿರ ಮೈಸೂರು ಘಟಕದ ಅಧೀಕ್ಷಕಿ ಟಿ.ಎನ್.ಕವಿತಾ ಉಪಸ್ಥಿತರಿದ್ದರು.

Translate »