ತರಕಾರಿ ಅಂಗಡಿಯಲ್ಲಿ ಅಡಗಿದ್ದ ನಾಗರಹಾವು
ಮೈಸೂರು

ತರಕಾರಿ ಅಂಗಡಿಯಲ್ಲಿ ಅಡಗಿದ್ದ ನಾಗರಹಾವು

December 4, 2018

ಮೈಸೂರು: ಹಾವುಗಳು ಪೊದೆ, ಬಿಲಗಳಲ್ಲಿ ಮಾತ್ರ ಇರು ವುದಿಲ್ಲ. ಮನೆಗಳಲ್ಲಿ, ಅಂಗಡಿ ಮಳಿಗೆ ಗಳಲ್ಲೂ ಅಡಗಿರು ವುದು ಇತ್ತೀಚೆಗೆ ಬೆಳ ಕಿಗೆ ಬರುತ್ತಿದೆ. ಅದ ರಲ್ಲೂ ನಗರ ಪ್ರದೇ ಶದ ಕಾಂಕ್ರಿಟ್ ಕಾಡಿ ನಲ್ಲಿ ಹಾವುಗಳು ನೆಲೆ ಇಲ್ಲದೆ ಕಂಗೆಟ್ಟು, ಸಿಕ್ಕಸಿಕ್ಕ ಕಡೆ ಆಹಾರ ಹಾಗೂ ಆಶ್ರಯ ಪಡೆಯುತ್ತಿವೆ.

ಸದಾ ಗ್ರಾಹಕ ದಟ್ಟಣೆ, ಭಾರೀ ಸದ್ದು ಇರುವಂತಹ ದೇವರಾಜ ಮಾರುಕಟ್ಟೆ ಯಲ್ಲೇ ನಾಗರ ಹಾವು ತನಗೆ ಇದೇ ಸುರಕ್ಷಿತ ಸ್ಥಾನವೆಂದು ನೆಲೆ ಕಂಡುಕೊಂಡಿತ್ತು. `ಸಂತೆಯೊಳಗೊಂದು ಮನೆಯ ಮಾಡಿ ಗಲಾಟೆಗಂಜಿದೊಡೆಂತಯ್ಯಾ’ ಎಂಬ ಬದುಕಿನ ವಾಣಿ ಈ ಹಾವಿಗೂ ಅನ್ವಯಿಸಿದಂತಿದೆ. ಹಾಗಾಗಿ ಮಾರುಕಟ್ಟೆ ತರ ಕಾರಿ ಅಂಗಡಿ ಮಳಿಗೆ ಹೊಕ್ಕು, ಅಲ್ಲಿ ಒಂದು ಮೂಲೆಯಲ್ಲಿ ಗುಡ್ಡೆ ಹಾಕಲಾಗಿದ್ದ, ಸೌತೆಕಾಯಿ ಅಡಿ ಆಶ್ರಯ ಪಡೆದಿತ್ತು. ಗ್ರಾಹಕರಿಗೆ ಸೌತೆಕಾಯಿ ಕೊಡಲು ಹೋದ ಅಂಗಡಿಯ ವ್ಯಾಪಾರಿ, ನಾಗರಹಾವು ಕಂಡು ಬೆಚ್ಚಿ ಬಿದ್ದರು. ಕೆಲ ಕ್ಷಣ ಕೈಕಾಲು ನಡುಗಲಾರಂಭಿಸಿ, ಮಾತೇ ಬಾರದಂತಾಯಿತು. ಸಾವರಿಸಿಕೊಂಡು ಅಕ್ಕಪಕ್ಕದ ತರಕಾರಿ ವ್ಯಾಪಾರಿಗಳಿಂದ ಸ್ನೇಕ್‍ಶ್ಯಾಂ ಫೋನ್ ನಂಬರ್ ಪಡೆದು, ಕರೆ ಮಾಡಿದರು. ಕೂಡಲೇ ಸ್ಥಳಕ್ಕೆ ಬಂದ ಶ್ಯಾಂ, ಹಾವನ್ನು ಸುರಕ್ಷಿತವಾಗಿ ಹಿಡಿದು, ಸಾಗಿಸಿದರು.

ದಿನೇ ದಿನೇ ಬಿಸಿಲು ಹೆಚ್ಚುತ್ತಿದ್ದು, ಭೂಮಿ ಉಷ್ಣಾಂಶ ಏರುತ್ತಿದೆ. ಹಾಗಾಗಿ ಹಾವು ಗಳು ಬಿಲಗಳನ್ನು ತೊರೆದು, ತಮಗೆ ಹಿತಕಾರಿ ತಾಣಗಳನ್ನು ಕಂಡುಕೊಳ್ಳಲು ಮುಂದಾ ಗುವುದರಿಂದ ಸಾರ್ವಜನಿಕರು ಎಚ್ಚರ ವಹಿಸುವುದು ಅವಶ್ಯ. ಹೀಗೆ ಕಣ್ಣಿಗೆ ಬಿದ್ದ ಹಾವನ್ನು ಕೊಲ್ಲುವ ಬದಲು ಮಾಹಿತಿ ನೀಡಿದರೆ, ಅವುಗಳನ್ನು ಸುರಕ್ಷಿತವಾಗಿ ಹಿಡಿದು, ಸಂರಕ್ಷಿಸಬಹುದು ಎಂದು ಸ್ನೇಕ್‍ಶ್ಯಾಂ ಮನವಿ ಮಾಡಿದ್ದಾರೆ.

Translate »