ಪ್ರಾಮಾಣಿಕ ಸೇವೆ ಸಲ್ಲಿಸಿದರೆ ಸವಿತಾ ಸಮಾಜದ ಉದ್ಧಾರ ಸಾಧ್ಯ
ಮೈಸೂರು

ಪ್ರಾಮಾಣಿಕ ಸೇವೆ ಸಲ್ಲಿಸಿದರೆ ಸವಿತಾ ಸಮಾಜದ ಉದ್ಧಾರ ಸಾಧ್ಯ

February 1, 2019

ಮೈಸೂರು: ಪ್ರತಿ ಯೊಬ್ಬರೂ ಪ್ರಾಮಾಣಿಕ ಸಮಾಜ ಸೇವಕರಾಗಿ ಸಮಾಜದ ಏಳಿಗೆಗೆ ನಿರಂತರವಾಗಿ ದುಡಿದರೆ ಸಮಾಜದ ಉದ್ಧಾರ ಸಾಧ್ಯವಾಗಲಿದೆ ಎಂದು ಶಾಸಕ ತನ್ವೀರ್‍ಸೇಠ್ ಅಭಿಪ್ರಾಯಪಟ್ಟರು.

ಮೈಸೂರಿನ ಖಾಸಗಿ ಹೋಟೆಲ್ ಸಭಾಂ ಗಣದಲ್ಲಿ ಕರ್ನಾಟಕ ರಾಜ್ಯ ಸವಿತಾ ಸಮಾ ಜದ ವತಿಯಿಂದ ನಡೆದ ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಜಯಂತ್ಯೋತ್ಸವ ಮತ್ತು ಸಮಾಜದ ಮೈಸೂರು ಜಿಲ್ಲಾ ಕಾರ್ಯಕಾರಿ ಸಮಿ ತಿಯ ಪದಗ್ರಹಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸೇವೆ ಎಂಬುದು ಒಂದು ಜನಾಂಗಕ್ಕೆ ಮಾತ್ರ ಸೀಮಿತವಲ್ಲ. ಎಲ್ಲಾ ವರ್ಗದವರೂ ಸೇವೆ ಸಲ್ಲಿಸಬಹುದು. ಸಮಾಜದವರು ಮೊದಲು ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ನಂತರ ನಿಮ್ಮ ವೃತ್ತಿಗೆ ಬೆಲೆ ಕೊಡಬೇಕು. ಸಂಘಟನೆಯನ್ನೂ ಗೌರವಿಸಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯ ಕ್ಷತೆ ವಹಿಸಿದ್ದ ಮಾಜಿ ಸಚಿವ ಸಿ.ಹೆಚ್. ವಿಜಯಶಂಕರ್ ಮಾತನಾಡಿ, ಜಾತಿಗಳ ಆಧಾರದ ಮೇಲೆ ವೃತ್ತಿ ಹುಟ್ಟಿಕೊಂಡಿವೆ. ಈ ಜಾತಿ ಆಧಾರಿತ ವೃತ್ತಿ ಪದ್ಧತಿ ಎಂಬುದು ಮೊದಲು ಹೋಗಬೇಕು. ಹಾಗಾದರೆ ಮಾತ್ರ ಸಮಾಜದ ಉದ್ಧಾರ ಸಾಧ್ಯವಾಗುತ್ತದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಎನ್. ಆರ್.ನಾಗೇಶ್, ತಾವು ಬಿಹಾರದ ಮುಖ್ಯ ಮಂತ್ರಿಯಾಗಬೇಕಾದರೆ ಕರ್ಪೂರಿ ಠಾಕೂರ್ ಅವರ ಹೋರಾಟವೇ ಕಾರಣ. ಜಾತಿ ನಿಂದನೆಯ ಸಮಸ್ಯೆಯನ್ನು ತೆಗೆ ಯಲು ಸರ್ಕಾರದೊಂದಿಗೆ ಸಾಕಷ್ಟು ಹೋರಾಟ ನಡೆಸಿದವರು. ಸಿದ್ದರಾಮಯ್ಯ ಮುಖ್ಯಮಂತ್ರಿ ಅವಧಿಯಲ್ಲಿ ಸವಿತಾ ಸಮಾಜಕ್ಕೆ ಸರ್ಕಾರದಿಂದ ಹಲವು ಸವ ಲತ್ತುಗಳನ್ನು ನೀಡಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಸಮಾಜದ ಸದಸ್ಯರಿಗೆ ಗುರುತಿನ ಪತ್ರ, ಸಮಾಜದ ಪದಾಧಿಕಾರಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಚಲನಚಿತ್ರ ನಟ ಎಂ. ಎಸ್.ಮುತ್ತುರಾಜ್, ಬೆಂಗಳೂರಿನ ಎಂಬಿಎ ಕಾಲೇಜು ಅಧ್ಯಕ್ಷ ಎಂ.ಬಿ.ಶಿವಕುಮಾರ್, ಮಾಜಿ ಎಂಎಲ್‍ಸಿ ಪುಟ್ಟಸಿದ್ದಶೆಟ್ಟಿ, ಸಮಾ ಜದ ಮುಖಂಡ ನರಸಿಂಹಮೂರ್ತಿ, ಸವಿತಾ ಬಂಧು ಪತ್ರಿಕೆ ಸಂಪಾದಕ ಟಿ. ತ್ಯಾಗರಾಜ್, ವಕೀಲ ಕೃಷ್ಣಪ್ಪ, ಜಿಲ್ಲಾ ಉಪಾಧ್ಯಕ್ಷ ಜಲೇಂದ್ರಕುಮಾರ್, ವಿವಿಧ ತಾಲೂಕು ಅಧ್ಯಕ್ಷರಾದ ನಾಗೇಂದ್ರ, ಮುರಳೀಧರ, ಗೌರೀಶ್ ಗದ್ದಿಗೆ, ಮಂಜು ನಾಥ್, ನರಸಿಂಹ, ಸಿ.ಕೃಷ್ಣರಾಜ್, ಕೃಷ್ಣ ಪಿರಿಯಾಪಟ್ಟಣ, ಸಂಪತ್‍ಕಮಾರ್ ಇನ್ನಿತರರು ಉಪಸ್ಥಿತರಿದ್ದರು.

Translate »