ಮೈಸೂರಿನ ವಿವಿಧೆಡೆ ಸಿದ್ಧಗಂಗಾ ಶ್ರೀಗಳ ಪುಣ್ಯ ಸ್ಮರಣೆ
ಮೈಸೂರು

ಮೈಸೂರಿನ ವಿವಿಧೆಡೆ ಸಿದ್ಧಗಂಗಾ ಶ್ರೀಗಳ ಪುಣ್ಯ ಸ್ಮರಣೆ

February 1, 2019

ಮೈಸೂರು: ತ್ರಿವಿಧ ದಾಸೋಹಿ, ನಡೆದಾಡುವ ದೇವರು ಲಿಂಗೈಕ್ಯ ಸಿದ್ಧಗಂಗಾ ಮಠದ ಡಾ. ಶ್ರೀ ಶಿವ ಕುಮಾರ ಸ್ವಾಮಿಗಳ ಪುಣ್ಯಸ್ಮರಣೆ ಕಾರ್ಯ ಕ್ರಮವನ್ನು ಗುರುವಾರ ಮೈಸೂರಿನಲ್ಲಿ ವಿವಿಧ ಸಂಘ-ಸಂಸ್ಥೆಗಳು ನಡೆಸಿದವು. ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಪ್ರಸಾದ ವಿತರಿಸುವ ಮೂಲಕ ಶ್ರೀಗಳಿಗೆ ಗೌರವ ನಮನ ಸಲ್ಲಿಸಿದವು.

ಬಂಡೀಪಾಳ್ಯದಲ್ಲಿ: ಬಂಡೀಪಾಳ್ಯ ಎಪಿ ಎಂಸಿ ಯಾರ್ಡ್‍ನಲ್ಲಿರುವ ತರಕಾರಿ ಮಾರು ಕಟ್ಟೆ ಆವರಣದಲ್ಲಿ ಶ್ರೀಗಳ ಭಾವಚಿತ್ರವನ್ನು ಪೂಜಿಸಿದ ತರಕಾರಿ ವ್ಯಾಪಾರಿಗಳು ಪುಷ್ಪ ನಮನ ಸಲ್ಲಿಸಿದರು. ಬಳಿಕ ಅನ್ನ ಸಂತ ರ್ಪಣೆ ನಡೆಸಲಾಯಿತು. ವರ್ತಕರು, ವ್ಯಾಪಾರಿಗಳು ಹಾಗೂ ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಇದೇ ವೇಳೆ ತರಕಾರಿ ವ್ಯಾಪಾರಿ ಬಿ.ಉಮಾ ಪತಿರಾವ್ ಮಾತನಾಡಿ, ನಡೆದಾಡುವ ದೇವರಂತಿದ್ದ ಡಾ.ಶಿವಕುಮಾರಸ್ವಾಮಿ ಶ್ರೀಗಳನ್ನು ಎಲ್ಲಾ ಜಾತಿ, ಧರ್ಮದವರೂ ಆರಾಧಿಸುತ್ತಿದ್ದರು. ಶ್ರೀಗಳು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುವ ಮೂಲಕ ಸಮಾಜ ದಲ್ಲಿ ಶಾಂತಿ, ಸಹಬಾಳ್ವೆ ನೆಲೆಸುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಇಂದು ತರಕಾರಿ ಮಾರುಕಟ್ಟೆಯಲ್ಲಿ ನಡೆದ ಪುಣ್ಯ ಸ್ಮರಣೆಯಲ್ಲಿ ರೈತರು, ಮಧ್ಯವರ್ತಿಗಳು, ವರ್ತಕರು, ಎಪಿಎಂಸಿ ಆಡಳಿತ ಮಂಡಳಿ, ಆಟೋ ಚಾಲಕರು ಸೇರಿದಂತೆ ಎಲ್ಲಾ ವರ್ಗದ ಜನರು ಜಾತಿ, ಭೇದ ಪಂಥ ವನ್ನು ಮೀರಿ ಪಾಲ್ಗೊಳ್ಳುವ ಮೂಲಕ ನಡೆದಾಡಿದ ದೇವರಿಗೆ ಗೌರವ ನಮನ ಸಲ್ಲಿಸಿದ್ದಾರೆ ಎಂದರು.

ಕರ್ನಾಟಕ ಸೇನಾಪಡೆ: ಜೆಎಸ್‍ಎಸ್ ವಿದ್ಯಾಪೀಠದ ಮುಂಭಾಗದ ಆಂಜನೇಯ ಸ್ವಾಮಿ ದೇವಾಲಯದ ಬಳಿ ಕರ್ನಾಟಕ ಸೇನಾ ಪಡೆ ಹಾಗೂ ವಿದ್ಯಾಪೀಠ ಆಟೋ ಗೆಳೆಯರ ಬಳಗದಿಂದ ಶಿವಕುಮಾರ ಶ್ರೀಗಳ ಪುಣ್ಯ ಆರಾಧನೆ ಅಂಗವಾಗಿ ಅನ್ನ ಸಂತರ್ಪಣೆ ಆಯೋಜಿಸಲಾಗಿತ್ತು. ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಾರ್ವಜನಿ ಕರಿಗೆ ಮೊಸರನ್ನ, ತರಕಾರಿ ಬಾತ್ ವಿತರಿ ಸಲಾಯಿತು. ಸಮಾಜ ಸೇವಕ ಕೆ.ರಘುರಾಂ ಮಾತನಾಡಿ ಶ್ರೀಗಳನ್ನು ಸ್ಮರಿಸಿದರು.

ಹಿಂದೂ-ಮುಸ್ಲಿಂ ಸ್ನೇಹ ಬಳಗ: ಹಿಂದೂ-ಮುಸ್ಲಿಂ ಸ್ನೇಹ ಬಳಗದಿಂದ ನಗರದ ಮಹೇಂದ್ರ ಹೋಟೆಲ್ ಮುಂಭಾಗ ಶ್ರೀಗಳ ಭಾವಚಿತ್ರವನ್ನಿಟ್ಟು ಪೂಜೆ ಮಾಡಿ ನಮನ ಸಲ್ಲಿಸಲಾಯಿತು. ಸಾರ್ವಜನಿಕ ರಿಗೆ ಉಪಾಹಾರ ವಿತರಿಸಲಾಯಿತು. ಈ ವೇಳೆ ಸ್ನೇಹ ಬಳಗದ ಟಿ.ಗೋಪಾಲ್, ಅಮ್ಜದ್, ಮಧು, ಶ್ರೀಕಾಂತ್, ಜೀ ಶಾನ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಚಾಮರಾಜ ಜೋಡಿ ರಸ್ತೆ, ಕೆ.ಆರ್. ವೃತ್ತ, ಮಹಾನಗರ ಪಾಲಿಕೆ ಮುಂಭಾಗ, ಅಗ್ರಹಾರ, ಅಶೋಕ ರಸ್ತೆ, ಕುವೆಂಪು ನಗರ, ಆಲನಹಳ್ಳಿ, ಟೆರೇಷಿಯನ್ ಕಾಲೇಜು ಬಳಿ, ಟಿ.ಕೆ.ಲೇಔಟ್, ಸರಸ್ವತಿಪುರಂ, ಶಾರದಾದೇವಿನಗರ, ನಾಗನಹಳ್ಳಿ, ಶ್ರೀರಾಮ ಪುರ, ಮಹದೇವಪುರ, ರಿಂಗ್ ರಸ್ತೆ ಜಂಕ್ಷನ್ ಸೇರಿದಂತೆ ವಿವಿಧೆಡೆ ಆಟೋ ರಿಕ್ಷಾ ನಿಲ್ದಾಣಗಳಲ್ಲಿಯೂ ಸಿದ್ಧಗಂಗಾ ಶ್ರೀಗಳ ಪುಣ್ಯಸ್ಮರಣೆ ನಡೆಯಿತು.

ಅನ್ನಸಂತರ್ಪಣೆಯೊಂದಿಗೆ ತ್ರಿವಿಧ ದಾಸೋಹಿ ಸ್ಮರಣೆ
ಮೈಸೂರು: ನಗರದ ಕುದೇರು ಮಠ, ಮೇಟಗಳ್ಳಿ ಮತ್ತು ಹೆಬ್ಬಾಳ್‍ನಲ್ಲಿ ಸಾರ್ವಜನಿಕರು ಸಿದ್ಧಗಂಗಾ ಮಠದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ 11ನೇ ದಿನದ ಪುಣ್ಯಸ್ಮರಣೆ ಅಂಗವಾಗಿ ಅನ್ನಸಂತರ್ಪಣೆ ನಡೆಸಿದರು.

ಹೆಬ್ಬಾಳ್-ಮೇಟಗಳ್ಳಿ ಮುಖ್ಯರಸ್ತೆಯಲ್ಲಿರುವ ಅಹಲ್ಯ ಕಾಂಪ್ಲೆಕ್ಸ್ ಮಾಲೀಕರ ಬಳಗದ ವತಿಯಿಂದ ಗುರುವಾರ ತ್ರಿವಿಧ ದಾಸೋಹಿ, ಕರ್ನಾಟಕ ರತ್ನ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ನಂತರ ನೂರಾರು ಮಂದಿಗೆ ಅನ್ನಸಂತರ್ಪಣೆ ಮಾಡಿದರು.

ಈ ವೇಳೆ ಅಹಲ್ಯ ಕಾಂಪ್ಲೆಕ್ಸ್ ಮಾಲೀಕ ನಂಜುಂಡಸ್ವಾಮಿ, ಬಸವಣ್ಣ, ಧರ್ಮ ಪಾಲ್, ಪಾತ್ರೆ ಅಂಗಡಿ ರಾಮು, ಕೃಷ್ಣಮೂರ್ತಿ, ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.

ಕಾವೇರಿ ಮೆಸ್: ಮೈಸೂರಿನ ಹೆಬ್ಬಾಳ್‍ನ ಸೂರ್ಯಬೇಕರಿ ಬಳಿಯಿರುವ ಕಾವೇರಿ ಮೆಸ್ ಮಾಲೀಕರಾದ ಮಂಡ್ಯ ಸಿದ್ದರಾಜ್‍ಗೌಡ, ಪಾಲಿಕೆ ಸದಸ್ಯರಾದ ಕೆ.ವಿ.ಶ್ರೀಧರ್, ಪ್ರೇಮ ಶಂಕರೇಗೌಡ ಅವರು ಸಿದ್ಧಗಂಗಾ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ನಂತರ ಸಾರ್ವಜನಿಕರಿಗೆ ಉಪಾಹಾರ ವಿತರಿಸಿದರು.

ಈ ವೇಳೆ ಈಶ್ವರಗೌಡ, ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಸೂರ್ಯ ಬೇಕರಿ ಸಮೀಪದ ಚಾಮುಂಡೇಶ್ವರಿ ದೇವಸ್ಥಾನ ಸಮೀಪದ ಕಾಫಿಪುಡಿ ಅಂಗಡಿ ಮಾಲೀಕ ಹನುಮಂತಪ್ಪ ಅವರು ಅನ್ನಸಂತರ್ಪಣೆ ಮಾಡಿದರು.

ಕುದೇರುಮಠ ಮುಂಭಾಗ: ಬಸವೇಶ್ವರ ರಸ್ತೆಯಲ್ಲಿನ ಸಿದ್ಧಗಂಗಾಶ್ರೀಗಳ ಭಕ್ತರು ಶ್ರೀಗಳ ಭಾವಚಿತ್ರಕ್ಕೆ ಗುರುವಾರ ಬೆಳಿಗ್ಗೆ ಪುಷ್ಪಾರ್ಚನೆ ಸಲ್ಲಿಸಿ ಭಕ್ತಿ ಪೂರ್ವಕ ನಮನ ಸಲ್ಲಿಸಿದರು. ನಂತರ ಅನ್ನ ಸಂತರ್ಪಣೆ ಮಾಡಿದರು. ಈ ವೇಳೆ ಶ್ರೀ ಕುದೇರು ಮಠಾಧೀಶ ಶ್ರೀ ಗುರುಶಾಂತ ಸ್ವಾಮಿಗಳು, ನಗರ ಪಾಲಿಕೆ ಸದಸ್ಯರಾದ ಸೌಮ್ಯ, ಮಾಜಿ ಸದಸ್ಯ ಎನ್.ಸುನಿಲ್ ಕುಮಾರ್, ಮಲ್ಲಿಕಾರ್ಜುನ ಸ್ವಾಮಿ, ಪವನ್ ಕುಮಾರ್, ನಂದೀಶ್, ಚಂದನ್, ಮಹಾದೇವ ಮತ್ತಿತರರು ಉಪಸ್ಥಿತರಿದ್ದರು.

Translate »