ಸಿದ್ದರಾಮಯ್ಯ ಆಡಳಿತದಿಂದಾಗಿ  `ಸಾಲದ ಶೂಲ’ದಲ್ಲಿ ರಾಜ್ಯದ ಜನ
ಮೈಸೂರು

ಸಿದ್ದರಾಮಯ್ಯ ಆಡಳಿತದಿಂದಾಗಿ `ಸಾಲದ ಶೂಲ’ದಲ್ಲಿ ರಾಜ್ಯದ ಜನ

February 1, 2019

ಮೈಸೂರು: ರಾಜ್ಯ ಸರ್ಕಾರದ ಸಾಲದ ಮೊತ್ತ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲೇ ಇದ್ದು, ಪ್ರತಿಯೊಬ್ಬ ಪ್ರಜೆಯ ತಲೆಯ ಮೇಲೆ ಸರಾಸರಿ ಅರ್ಧ ಲಕ್ಷದಷ್ಟು ಸಾಲದ ಹೊರೆ ಎಂಬುದಾಗಿ ಅಂಕಿ ಅಂಶಗಳು ಬಹಿರಂಗಪಡಿಸಿ ರುವುದನ್ನು ನೋಡಿದರೆ, ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಸಾಲದ ಮೊತ್ತದಲ್ಲಿ ಏರಿಕೆ ಕಂಡು ಬಂದಿದ್ದು, ಬರೀ ಸಾಲ ಮಾಡಿದ್ದೇ ಅವರ ಸಾಧನೆಯಾಗಿದೆ ಎಂದು ರಾಜ್ಯ ಬಿಜೆಪಿ ಸಹ ವಕ್ತಾರ ಆರ್.ರಘು ಕೌಟಿಲ್ಯ ಇಂದಿಲ್ಲಿ ಆರೋಪಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, 2009-10ನೇ ಸಾಲಿನಲ್ಲಿ 77.177 ಕೋಟಿಯಷ್ಟಿದ್ದ ರಾಜ್ಯದ ಸಾಲದ ಮೊತ್ತ 2017-18ನೇ ಸಾಲಿಗೆ ಸುಮಾರು ಎರಡೂವರೆ ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ತಮ್ಮ ರಾಜ ಕೀಯ ಮಹತ್ವಾಕಾಂಕ್ಷೆ ಈಡೇರಿಸಿಕೊಳ್ಳಲು, ಸ್ವಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ತಮ್ಮ ಅಧಿಕಾರ ದುರ್ಬಳಕೆ ಮಾಡಿ ಕೊಂಡ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಿಕ್ಕ ಸಿಕ್ಕಲ್ಲೆಲ್ಲಾ ಸಾಲ ಎತ್ತುವ ಮೂಲಕ ಕರ್ನಾಟಕವನ್ನು ಸಾಲದ ಶೂಲಕ್ಕೆ ಸಿಲುಕಿಸಿದ್ದಲ್ಲದೆ ರಾಜ್ಯದ ಪ್ರತಿಯೊಬ್ಬ ಪ್ರಜೆಯ ತಲೆಯ ಮೇಲೆ ಅರ್ಧ ಲಕ್ಷದಷ್ಟು ಸಾಲದ ಹೊರೆ ಹೊರಿಸಿರುವ ಮಹಾಕೀರ್ತಿ ಸಿದ್ದರಾಮಯ್ಯರಿಗೆ ಸಲ್ಲುತ್ತದೆ ಎಂದು ಅವರು ಟೀಕಿಸಿದರು.

ರಾಜ್ಯದ ಅಭಿವೃದ್ಧಿಗಾಗಿ, ಜನರ ಜೀವನ ಹಸನು ಮಾಡಲು ಸಾಲ ಮಾಡುವುದು ಸಹಜ. ಆದರೆ ಸಿದ್ದ ರಾಮಯ್ಯ ತಮ್ಮ ರಾಜಕೀಯ ಲಾಭಕ್ಕಾಗಿ ಆರ್ಥಿಕ ಶಿಸ್ತನ್ನು ಉಲ್ಲಂಘಿಸಿ ಸಾಲ ಮಾಡಿ, ರಾಜ್ಯವನ್ನು ಸಾಲದ ಕಡಲಲ್ಲಿ ಮುಳುಗಿಸಿದ್ದಾರೆ. ಅನ್ನಭಾಗ್ಯ, ಶಾದಿ ಭಾಗ್ಯ, ಕ್ಷೀರ ಭಾಗ್ಯ, ಇಂದಿರಾ ಕ್ಯಾಂಟೀನ್ ಇನ್ನಿತರ ಯೋಜನೆಗಳನ್ನು ಸಾಲದ ಹಣದಿಂದ ರೂಪಿಸಿದ ಸಿದ್ದರಾಮಯ್ಯ, ಆ ಯೋಜನೆ ಗಳನ್ನು ತಾವೊಬ್ಬರೇ ರೂಪಿಸಿ ಜಾರಿಗೊಳಿಸಿದ್ದು ಎಂಬಂತೆ ಯಾವ ಮಾಡೆಲ್‍ಗೂ ಕಡಿಮೆ ಇಲ್ಲದಂತೆ ಫೋಸು ಕೊಡುತ್ತಿರುವ ಜಾಹೀರಾತು ಹಾಕಿಸಿ, ವೈಭವೀಕರಿಸಿ ಕೊಳ್ಳಲು ಕೋಟ್ಯಾಂತರ ರೂ. ವೆಚ್ಚ ಮಾಡಿ ಜನರ ತಲೆಯ ಮೇಲೆ ಚಪ್ಪಡಿ ಎಳೆದಿದ್ದಾರೆ ಎಂದು ದೂರಿದರು.

ಹತ್ತು ಬಾರಿ ಬಜೆಟ್ ಮಂಡಿಸಿರುವ ಅವರು ತಮ್ಮ ಆರ್ಥಿಕ ಜ್ಞಾನದ ನೈಪುಣ್ಯವನ್ನೆಲ್ಲ ಜನರ ತಲೆಯ ಮೇಲೆ ಸಾಲದ ಹೊರೆ ಹೊರಿಸಿದ್ದಾರೆ. ಅವರ ಅವಧಿಯಲ್ಲಿ ಭಾರೀ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎನ್ನುವುದಾ ದರೆ ಎಷ್ಟು ಜನರಿಗೆ ಉದ್ಯೋಗ ಸೃಷ್ಟಿಯಾಗಿದೆ? ಎಷ್ಟು ಯುವಜನರ ಕೈಗೆ ಅಧಿಕಾರ ಸಿಕ್ಕಿದೆ? ಉದ್ದಿಮೆಗಳು ಪ್ರಾರಂಭ ವಾದವೇ? ಎಷ್ಟು ಗುಡಿ ಕೈಗಾರಿಕೆಗಳು ಉತ್ತೇಜಿಸಲ್ಪಟ್ಟವು? ಎಷ್ಟು ಸಣ್ಣ ಕೈಗಾರಿಕೆಗಳು ಸ್ಥಾಪನೆಯಾದವು? ಎಂಬ ಮಾಹಿತಿ ಬಿಡುಗಡೆ ಮಾಡುವಂತೆ ರಘು ಸವಾಲು ಹಾಕಿದರು.

ಕಳೆದ 7 ತಿಂಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ನಡೆಯದಿರುವುದು ನೋಡಿದರೆ ಸಮ್ಮಿಶ್ರ ಸರ್ಕಾರವೂ ಸಾಲದ ಮೊರೆ ಹೋಗುವ ಸಂಭವವಿದ್ದು, 2018-19ನೇ ಸಾಲಿಗೆ ಸಾಲದ ಮೊತ್ತ ಅಂದಾಜು ಮೂರೂ ವರೆ ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಲಿದೆ ಎನ್ನಲಾಗು ತ್ತಿದೆ. ಇದರಿಂದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ಆರ್ಥಿಕವಾಗಿ ತೊಳಲಾಡುತ್ತಿದೆ ಎಂದು ಸಮ್ಮಿಶ್ರ ಸರ್ಕಾರದ ಪಾಲುದಾರರಾಗಿರುವ ಕಾಂಗ್ರೆಸ್ ಪಕ್ಷದ ಶಾಸಕರೇ ಬಾಯಿ ಬಿಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಮೈತ್ರಿ ಸರ್ಕಾರ ಸಿದ್ದರಾಮ ಯ್ಯರ ಹಾದಿಯಲ್ಲಿ ನಡೆಯದೆ ಅಭಿವೃದ್ಧಿಗೆ ಆದ್ಯತೆ ನೀಡಬೇಕಾಗಿದೆ. ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ ಎಂದು ಸಲಹೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಕ್ತಾರರಾದ ದತ್ತಾತ್ರೇಯ ಶಿಂಧೆ, ಮಾರ್ಬಳ್ಳಿ ಶಿವ ಕುಮಾರ್, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಗೋಕುಲ್ ಗೋವರ್ಧನ್ ಉಪಸ್ಥಿತರಿದ್ದರು.

Translate »