ಅಗತ್ಯವಿದ್ದರೆ ಏರ್ ಲಿಫ್ಟ್ ವ್ಯವಸ್ಥೆಗೆ ಸಿದ್ಧ: ಸಚಿವ ಸೋಮಣ್ಣ
ಮೈಸೂರು

ಅಗತ್ಯವಿದ್ದರೆ ಏರ್ ಲಿಫ್ಟ್ ವ್ಯವಸ್ಥೆಗೆ ಸಿದ್ಧ: ಸಚಿವ ಸೋಮಣ್ಣ

November 19, 2019

ತನ್ವೀರ್ ಸೇಠ್ ಅವರನ್ನು ಏರ್ ಲಿಫ್ಟ್ ಮೂಲಕ ದೇಶದ ಯಾವುದೇ ಆಸ್ಪ ತ್ರೆಗೆ ಬೇಕಾದರೂ ದಾಖಲಿ ಸಲು ಸರ್ಕಾರ ಸಿದ್ಧವಿದೆ. ಚಿಕಿತ್ಸಾ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರ ಭರಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ತಿಳಿಸಿದರು.

ಆಸ್ಪತ್ರೆಯ ವೈದ್ಯಕೀಯ ಸೇವೆ ಗಳ ಮುಖ್ಯಸ್ಥ ಡಾ.ಉಪೇಂದ್ರ ಶೆಣೈ, ತಜ್ಞ ವೈದ್ಯರಾದ ಮಕ್ಸೂದ್ ಹಾಗೂ ದತ್ತಾತ್ರಿ ಅವರು ಸಕಾಲದಲ್ಲಿ ಶಸ್ತ್ರಚಿಕಿತ್ಸೆ ನಡೆಸದೇ ಇದ್ದಿದ್ದರೆ ತನ್ವೀರ್‍ಸೇಠ್ ಬದುಕುಳಿಯುವುದು ಕಷ್ಟವಾಗು ತ್ತಿತ್ತು. ದೇವರ ದಯೆ ಯಾವುದೇ ಅಪಾಯವಿಲ್ಲ ಎಂದು ಸೋಮಣ್ಣ ತಿಳಿಸಿದರು.

ಆರೋಪಿಗಳು ಎಷ್ಟೇ ದೊಡ್ಡವರಾದರೂ ಬಿಡುವುದಿಲ್ಲ. ಪೆÇಲೀಸರಿಗೆ ಎಲ್ಲಾ ಅಧಿಕಾರ ನೀಡಲಾಗಿದೆ. ಪೊಲೀಸ್ ಆಯುಕ್ತರ ಬಗ್ಗೆ ಚರ್ಚೆ ಮಾಡಿದ್ದೇನೆ. ಆರೋಪಿ ಯನ್ನು ಬಂಧಿಸಲಾಗಿದ್ದು, ಉಳಿದವರ ಪತ್ತೆ ಹಚ್ಚಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಕಾನೂನು ಚೌಕಟ್ಟಿನಲ್ಲಿ ತನಿಖೆ ನಡೆಸಿ, ಮುಂದಿನ ದಿನಗಳಲ್ಲಿ ಇಂತಹ ದಮನಕಾರಿ ಕೃತ್ಯ ನಡೆಯದಂತೆ ಎಚ್ಚರ ವಹಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು. ಅವರ ಅಭಿಮಾನಿಗಳು, ಹಿತೈಷಿಗಳಲ್ಲಿ ನನ್ನದೊಂದು ವಿನಂತಿ, ತನ್ವೀರ್ ಅವರು ಆರೋಗ್ಯವಾಗಿದ್ದು ಯಾರೂ ಚಿಂತೆ ಮಾಡಬಾರದು, ಯಾರು ಸಹ ಹೋಗಿ ತೊಂದರೆ ಕೊಡ ಬಾರದು. ಹೆಚ್ಚಿನ ಚಿಕಿತ್ಸೆ ಬೇಕಾದರೆ, ನುರಿತ ವೈದ್ಯರನ್ನು ಕರೆಸಿಕೊಳ್ಳಲು ಅಥವಾ ಬೇರೆ ಆಸ್ಪತ್ರೆಗಳಿಗೆ ಸೇರಿಸಲು ಸರ್ಕಾರ ಸಿದ್ಧವಿದೆ ಎಂದರು.

 

Translate »