ತನ್ವೀರ್ ಮೇಲಿನ ಹಲ್ಲೆಗೆ ಎಸ್‍ಡಿಪಿಐ ಖಂಡನೆ:  ಸಿದ್ದರಾಮಯ್ಯ ಹೇಳಿಕೆಗೆ ಅಬ್ದುಲ್ ಮಜೀದ್ ಬೇಸರ
ಮೈಸೂರು

ತನ್ವೀರ್ ಮೇಲಿನ ಹಲ್ಲೆಗೆ ಎಸ್‍ಡಿಪಿಐ ಖಂಡನೆ: ಸಿದ್ದರಾಮಯ್ಯ ಹೇಳಿಕೆಗೆ ಅಬ್ದುಲ್ ಮಜೀದ್ ಬೇಸರ

November 19, 2019

ಮೈಸೂರು, ನ.18- ಮಾಜಿ ಸಚಿವ, ಶಾಸಕರಾದ ತನ್ವೀರ್ ಸೇಠ್ ಮೇಲೆ ಮಾರ ಣಾಂತಿಕ ಹಲ್ಲೆ ನಡೆಸಿರುವುದು ಆಘಾತಕಾರಿ ಘಟನೆಯಾಗಿದ್ದು, ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಹೇಳಿದ್ದಾರೆ.

ಒಬ್ಬ ಜನಪ್ರತಿನಿಧಿಯ ಮೇಲೆ ನೂರಾರು ಜನರ ಸಮ್ಮುಖದಲ್ಲೇ ಈ ರೀತಿ ಹಲ್ಲೆ ನಡೆಸಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಹಲ್ಲೆ ನಡೆಸಿರುವ ಆರೋಪಿಯನ್ನು ಈಗಾಗಲೇ ಪೆÇಲೀಸರು ಬಂಧಿಸಿದ್ದು, ಘಟನೆಯ ಹಿಂದಿರುವ ಉದ್ದೇಶವನ್ನು ಬಯಲಿಗೆಳೆದು ಸಮಗ್ರ ತನಿಖೆ ನಡೆಸುವಂತೆ ಪತ್ರಿಕಾ ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.

ಸಿದ್ದರಾಮಯ್ಯ ಹೇಳಿಕೆಗೆ ಬೇಸರ: ಈ ಕೃತ್ಯ ನಡೆಸಿದವನು ಎಸ್‍ಡಿಪಿಐ ಸಂಘಟನೆ ಸದಸ್ಯ ಎಂದು ಹೇಳಲಾಗುತ್ತಿದೆ. ಇದರ ಹಿಂದೆ ಆ ಸಂಘಟನೆ ಇದೆ ಎಂದು ಪೊಲೀ ಸರು ಶಂಕಿಸಿದ್ದಾರೆಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿ ಸಿದ ಅಬ್ದುಲ್ ಮಜೀದ್, ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಬಾರದಿತ್ತು. ಆರೋಪಿ ಸಿಕ್ಕಿದ್ದಾನೆ. ತನಿಖೆ ನಡೆಯುತ್ತಿದೆ. ತಪ್ಪಿತಸ್ಥರು ಯಾರೇ ಆಗಿರಲಿ ಶಿಕ್ಷೆಯಾಗಬೇಕು. ಆರೋಪಿ ಎಸ್‍ಡಿಪಿಐ ಮಾತ್ರವಲ್ಲ ಎಲ್ಲಾ ಪಕ್ಷಗಳಲ್ಲೂ ಕೆಲಸ ಮಾಡಿದ್ದಾನೆ. ಯಾರೋ ಒಬ್ಬ ಇಂದಿರಾ ಗಾಂಧಿ ಅವರನ್ನು ಹತ್ಯೆ ಮಾಡಿದ ಕಾರಣಕ್ಕೆ ಇಡೀ ಸಿಖ್ ಸಮುದಾಯವನ್ನು ದೂಷಿಸಲು ಸಾಧ್ಯವಿಲ್ಲ. ಬಿಜೆಪಿಯ ಓರ್ವ ಅತ್ಯಾಚಾರ ಆರೋಪಿ ಅಂದ ಮಾತ್ರಕ್ಕೆ ಸಿಎಂ ಯಡಿಯೂರಪ್ಪನವರು ಹಾಗೂ ಇಡೀ ಪಕ್ಷ ಸರಿಯಿಲ್ಲ ಎನ್ನಲಾಗದು. ಕಾಂಗ್ರೆಸ್ ನಲ್ಲಿ ಒಬ್ಬ ತಪ್ಪು ಮಾಡಿದ ಎಂದು ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ತಪ್ಪಿತಸ್ಥ ರಾಗುವುದಿಲ್ಲ. ಉಪಚುನಾವಣೆ ಸಂದರ್ಭದಲ್ಲಿ ನಮ್ಮ ವಿರುದ್ಧ ಷಡ್ಯಂತ್ರ ನಡೆಯು ತ್ತಿದೆ ಎಂಬ ಅನುಮಾನವಿದೆ. ಹುಣಸೂರು ಹಾಗೂ ಶಿವಾಜಿನಗರ ಕ್ಷೇತ್ರದಲ್ಲಿ ಎಸ್‍ಡಿಪಿಐ ಸ್ಪರ್ಧಿಸುತ್ತಿದೆ. ಹಾಗಾಗಿ ಸಮರ್ಪಕ ತನಿಖೆ ನಡೆಸಿ, ಕೃತ್ಯದ ಹಿಂದಿರುವವರು ಯಾರೆಂ ಬುದನ್ನು ಬಯಲು ಮಾಡಬೇಕೆಂದು ಒತ್ತಾಯಿಸಿದ್ದೇವೆ ಎಂದು ತಿಳಿಸಿದರು.

Translate »