ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವಿಪ್ರ ಬಂಧುಗಳ ಕೊಡುಗೆ ಅಪಾರ
ಮಂಡ್ಯ

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವಿಪ್ರ ಬಂಧುಗಳ ಕೊಡುಗೆ ಅಪಾರ

June 16, 2018

ಕೆ.ಆರ್.ಪೇಟೆ: ವಿಪ್ರ ಬಾಂಧವರು ಭಾರತೀಯ ಸಂಸ್ಕೃತಿ, ಪರಂಪರೆ ಹಾಗೂ ಧರ್ಮ ಉಳಿಸುವ ಕಾಯಕವನ್ನು ಶ್ರದ್ಧಾ ಭಕ್ತಿಯಿಂದ ಮಾಡುವ ಮೂಲಕ ಧಾರ್ಮಿಕ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಶಾಸಕ ನಾರಾಯಣಗೌಡ ಹೇಳಿದರು.

ಪಟ್ಟಣದ ನಾಗಮಂಗಲ ರಸ್ತೆಯಲ್ಲಿ ರುವ ರಾಮ ಮಂದಿರದಲ್ಲಿ ತಾಲೂಕು ಬ್ರಾಹ್ಮಣ ಮಹಾಸಭಾದ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭ, ಶ್ರೀ ರಾಘವೇಂದ್ರಸ್ವಾಮಿ ಧ್ಯಾನ ಮಂದಿರ ಹಾಗೂ ವಿಪ್ರ ವಿದ್ಯಾರ್ಥಿಗಳ ಹಾಸ್ಟೆಲ್ ಕಟ್ಟಡದ ನಿರ್ಮಾಣಕ್ಕೆ ಆಯೋಜಿಸಿದ್ದ ಸಂಕಲ್ಪ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಆಚಾರ ವಿಚಾರಗಳ ಪಾಲನೆ, ನ್ಯಾಯ ನೀತಿ, ಧರ್ಮ ಮತ್ತು ಸತ್ಯದ ಹಾದಿಯಲ್ಲಿ ಎಲ್ಲಾ ಜಾತಿಗಳು ಹಾಗೂ ವರ್ಗಗಳ ಜನರು ಸಾಗಿ ಗುರಿ ಮುಟ್ಟುವಂತೆ ವಿಪ್ರ ಬಾಂಧವರು ಮಾರ್ಗದರ್ಶನ ನೀಡುತ್ತಿ ದ್ದಾರೆ. ಆರೋಗ್ಯಯುತ ಸಮಾಜ ನಿರ್ಮಾಣದಲ್ಲಿ ವಿಪ್ರ ಭಾಂದವರ ಕೊಡುಗೆ ಅಪಾರ ಎಂದರು.

ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಉದ್ಯಮಿ ಅರವಿಂದ ಕಾರಂತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸೋಮಶೇಖರ್, ತಾಲೂಕು ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ರಘುರಾಂ ನಾಡಿಗ್, ಕಾರ್ಯದರ್ಶಿ ಸುಬ್ಬನರ ಸಿಂಹಪ್ಪ, ಸಮಾಜದ ಮುಖಂಡರಾದ ಹರೀಶ್ ಕುಮಾರ್, ಸುಬ್ರಹ್ಮಣ್ಯ, ಶೇಷಾದ್ರಿ, ದೇವಾನಂದ್, ನಾಗರಾಜು, ಪುರಸಭೆ ಮಾಜಿ ಅಧ್ಯಕ್ಷ ಕೆ.ಟಿ. ಗಂಗಾಧರ್, ಎಪಿಎಂಸಿ ಅಧ್ಯಕ್ಷ ಲೋಕೇಶ್, ಉಪಾಧ್ಯಕ್ಷೆ ಮಹೇಶ್ವರಿ ಮತ್ತಿತರರಿದ್ದರು.

Translate »