Tag: Narayana Gowda

ನಾಗಮಂಗಲ ಬಳಿ ಕಲ್ಲು ಬಂಡೆ ಸ್ಫೋಟ
ಮೈಸೂರು

ನಾಗಮಂಗಲ ಬಳಿ ಕಲ್ಲು ಬಂಡೆ ಸ್ಫೋಟ

June 8, 2020

ಮಂಡ್ಯ, ಜೂ.7- ಕೂದಲೆಳೆ ಅಂತರದಲ್ಲಿ ಸಚಿವ ಕೆ.ಸಿ.ನಾರಾಯಣಗೌಡ ಭಾರೀ ಅಪಾಯದಿಂದ ಪಾರಾಗಿದ್ದಾರೆ. ನಾಗಮಂಗಲದ ಬಂಕಾಪುರದ ಬಳಿ ಸಚಿವರು ಕಾರಿನಲ್ಲಿ ಬರುತ್ತಿದ್ದ ವೇಳೆ ರಸ್ತೆ ಬದಿ ಕಲ್ಲುಬಂಡೆ ಸ್ಫೋಟ ಗೊಳಿಸಿದ್ದು, ಸ್ವಲ್ಪದರಲ್ಲಿಯೇ ಅಪಾಯ ತಪ್ಪಿದೆ. ನಾಗಮಂಗಲದ ಬಂಕಾಪುರ ಬಳಿ ಬೆಂಗಳೂರು ಜಲಸೂರು ರಸ್ತೆಗಾಗಿ ಕಾಮಗಾರಿ ನಡೆಯುತ್ತಿತ್ತು. ಕಾಮಗಾರಿ ಸ್ಥಳದಲ್ಲಿ ಅಡ್ಡಬಂದ ಕಲ್ಲು ಬಂಡೆಯನ್ನು ಹಗಲು ವೇಳೆಯೇ ಸ್ಫೋಟಗೊಳಿಸಲಾಗಿದೆ. ಸಚಿವರು ಕೆ.ಆರ್.ಪೇಟೆಗೆ ಬರುತ್ತಿದ್ದ ಸಮಯದಲ್ಲಿಯೇ ಕಲ್ಲು ಬಂಡೆಯನ್ನು ಗುತ್ತಿಗೆದಾರ ಸ್ಫೋಟಗೊಳಿಸಿದ್ದಾನೆ. ಕಲ್ಲು ಬಂಡೆ ಸ್ಫೋಟಗೊಳಿಸುವಾಗ ರಸ್ತೆ ಸಂಚಾರವನ್ನು ಬಂದ್ ಮಾಡಿಸಿಲ್ಲ….

ಕೊರೊನಾ ಜಾಗೃತಿ ಸಭೆಯಲ್ಲೇ ಮಾಸ್ಕ್,ಧರಿಸದ ಸಚಿವ ಕೆ.ಸಿ.ನಾರಾಯಣ್ ಗೌಡ. ಸಾಮಾನ್ಯರಿಗೆ ಪಾಠ ಹೇಳುವ ಅಧಿಕಾರಿಳಿಂದಲೂ ಲೋಪ.!
ಮಂಡ್ಯ

ಕೊರೊನಾ ಜಾಗೃತಿ ಸಭೆಯಲ್ಲೇ ಮಾಸ್ಕ್,ಧರಿಸದ ಸಚಿವ ಕೆ.ಸಿ.ನಾರಾಯಣ್ ಗೌಡ. ಸಾಮಾನ್ಯರಿಗೆ ಪಾಠ ಹೇಳುವ ಅಧಿಕಾರಿಳಿಂದಲೂ ಲೋಪ.!

March 28, 2020

ಮಂಡ್ಯ,ಮಾ.28(ನಾಗಯ್ಯ); ಕೊರೊನಾ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾದ ಪೌರಾಡಳಿತ ಸಚಿವ ಕೆ.ಸಿ.ನಾರಾಯಣಗೌಡರೇ , ಮಾಸ್ಕ್ ಧರಿಸದೆ ಅಧಿಕಾರಿಗಳೊಂದಿಗೆ ಕೊರೊನಾ ವೈರಸ್ ತಡೆ ಕುರಿತು ಜಾಗೃತಿ ಸಭೆ ನಡೆಸಿದ ಘಟನೆ ಮಂಡ್ಯದಲ್ಲಿಂದು ನಡೆಯಿತು. ಮಂಡ್ಯನಗರದ ಪ್ರವಾಸಿ ಮಂದಿರದಲ್ಲಿಂದು ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮತ್ತುಸುದ್ದಿಗೋಷ್ಠಿಯಲ್ಲಿಯೂ ಕೂಡ ಮಾಸ್ಕ್ ಧರಿಸದೆ ಸಚಿವ ಕೆ,ಸಿ.ನಾರಾಯಣಗೌಡ ಮಾತನಾಡಿದರು. ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ವೈರಸ್ ತಡೆಗೆ ಎಲ್ಲರೂ ಮಾಸ್ಕ್ ಧರಿಸುವಂತೆ ಸರ್ಕಾರವೇ ಆದೇಶ ಮಾಡುತ್ತಿದೆ,ಜನಪ್ರತಿನಿಧಿಗಳೂ ಕೂಡ ಉದ್ದುದ್ದ ಭಾಷಣ ಮಾಡುತ್ತಿದ್ದಾರೆ,ಆದರೆ ಇಂದಿನ ಸಭೆಯಲ್ಲಿ ಸಚಿವ…

ದೇವೇಗೌಡರ ಮನೆ ಹೆಣ್ಣು ಮಕ್ಕಳಿಂದ ನಿರಂತರ ಕಿರುಕುಳ
ಮೈಸೂರು

ದೇವೇಗೌಡರ ಮನೆ ಹೆಣ್ಣು ಮಕ್ಕಳಿಂದ ನಿರಂತರ ಕಿರುಕುಳ

July 8, 2019

ಬೆಂಗಳೂರು: ಜೆಡಿಎಸ್ ಹಿರಿಯ ನಾಯಕ ಹೆಚ್.ವಿಶ್ವನಾಥ್ ಅವರ ಜೊತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ, ತಮ್ಮ ರಾಜೀನಾಮೆಗೆ ಪಕ್ಷದ ವರಿಷ್ಠ ಹೆಚ್.ಡಿ. ದೇವೇಗೌಡ ಅವರನ್ನೇ ನೇರ ಹೊಣೆಗಾರ ರನ್ನಾಗಿಸಿರುವ ಅವರು, ಗೌಡರ ಕುಟುಂಬ ರಾಜಕಾರಣದಿಂದ ಬೇಸತ್ತಿರುವುದಾಗಿ ಹೇಳಿ ದ್ದಾರೆ. ದೇವೇಗೌಡರ ಕುಟುಂಬ ರಾಜಕಾರ ಣದ ಕಿರುಕುಳದ ಕಾರಣಕ್ಕಾಗಿ ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವು ದಾಗಿ ಗಂಭೀರ ಆರೋಪ ಮಾಡಿ ರುವ ಅವರು, ದೇವೇಗೌಡರ ಪುತ್ರಿ ಯರಿಂದ ತಮಗೆ ನಿರಂತರ ಕಿರು ಕುಳವಾಗುತ್ತಿದೆ….

ಬೂಕನಕೆರೆ ಹೋಬಳಿಯಲ್ಲಿ ಜನಸ್ಪಂದನಾ ಸಭೆ: ಹಂತ ಹಂತವಾಗಿ ರೈತರ ಎಲ್ಲಾ ಸಾಲ ಮನ್ನಾ: ಶಾಸಕ ಕೆಸಿಎನ್
ಮಂಡ್ಯ

ಬೂಕನಕೆರೆ ಹೋಬಳಿಯಲ್ಲಿ ಜನಸ್ಪಂದನಾ ಸಭೆ: ಹಂತ ಹಂತವಾಗಿ ರೈತರ ಎಲ್ಲಾ ಸಾಲ ಮನ್ನಾ: ಶಾಸಕ ಕೆಸಿಎನ್

August 8, 2018

ಕೆ.ಆರ್.ಪೇಟೆ:  ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ 48 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದ್ದಾರೆ. ಮುಂದೆ ಹಂತ ಹಂತವಾಗಿ ರೈತರ ಎಲ್ಲಾ ಬಗೆಯ ಸಾಲಮನ್ನಾ ಮಾಡಲಿದ್ದಾರೆ ಎಂದು ಶಾಸಕ ಡಾ.ಕೆ.ಸಿ.ನಾರಾಯಣಗೌಡ ತಿಳಿಸಿದರು. ತಾಲೂಕು ಆಡಳಿತದ ವತಿಯಿಂದ ತಾಲೂಕಿನ ಬೂಕನಕೆರೆ ಹೋಬಳಿಯ ಮೋದೂರು, ಬೊಮ್ಮೇಗೌಡನಕೊಪ್ಪಲು, ಕೀಳನಕೊಪ್ಪಲು, ರಂಗನಾಥಪುರ, ಬೂಕನ ಕೆರೆ, ಹೊಸೂರು, ಬಣ್ಣನಕೆರೆ, ಐಚನಹಳ್ಳಿ ಗ್ರಾಮಗಳಲ್ಲಿ ಆಯೋಜಿಸಿದ್ದ ಜನಸ್ಪಂದನಾ ಸಭೆಗಳಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಫಲಾನುಭವಿಗಳಿಗೆ ಸ್ಥಳದಲ್ಲೇ ಸವಲತ್ತುಗಳನ್ನು ವಿತರಿಸಿ ಅವರು ಮಾತನಾಡಿದರು. ಅಧಿಕಾರಿಗಳು ತಮ್ಮ ಇಲಾಖೆಯ ಸೌಲಭ್ಯಗಳನ್ನು ಅರ್ಹ…

ಮಕ್ಕಳ ಪ್ರತಿಭೆ ಅನಾವರಣಕ್ಕೆ ಸಾಂಸ್ಕೃತಿಕ ವೇದಿಕೆ ಅಗತ್ಯ
ಮಂಡ್ಯ

ಮಕ್ಕಳ ಪ್ರತಿಭೆ ಅನಾವರಣಕ್ಕೆ ಸಾಂಸ್ಕೃತಿಕ ವೇದಿಕೆ ಅಗತ್ಯ

August 7, 2018

ಕೆ.ಆರ್.ಪೇಟೆ:  ವಿದ್ಯಾರ್ಥಿಗಳ ಪ್ರತಿಭೆ ಗುರ್ತಿಸಿ ಪ್ರತಿಭಾ ಕಾರಂಜಿ, ಕ್ರೀಡಾ ಕೂಟ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಸೂಕ್ತ ವೇದಿಕೆ ಕಲ್ಪಿಸಬೇಕಾದುದು ಶಾಲೆಯ ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ಶಾಸಕ ಡಾ.ಕೆ.ಸಿ.ನಾರಾಯಣಗೌಡ ಹೇಳಿದರು. ತಾಲೂಕಿನ ಮುರುಕನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸೋಮವಾರ ನಡೆದ ಕಸಬಾ ಸಿಆರ್‌ಸಿ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಂದು ಮಗುವಿನಲ್ಲೂ ಒಂದಲ್ಲ ಒಂದು ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಗಮನಿಸಿ ಆ ಮಗುವಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಡುವ ಕೆಲಸವನ್ನು ಶಿಕ್ಷಕರು ಮಾಡಬೇಕು….

ತ್ರಿವೇಣ ಸಂಗಮದಲ್ಲಿ ಎರಡನೇ ಕುಂಭಮೇಳಕ್ಕೆ ಸಿದ್ಧತೆ ಶಾಸಕ ಕೆಸಿಎನ್ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ
ಮಂಡ್ಯ

ತ್ರಿವೇಣ ಸಂಗಮದಲ್ಲಿ ಎರಡನೇ ಕುಂಭಮೇಳಕ್ಕೆ ಸಿದ್ಧತೆ ಶಾಸಕ ಕೆಸಿಎನ್ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ

June 23, 2018

ಕೆ.ಆರ್.ಪೇಟೆ:  ತಾಲೂಕಿನ ತ್ರಿವೇಣ ಸಂಗಮದಲ್ಲಿ ನನ್ನ ನೇತೃತ್ವದಲ್ಲಿ ಎರಡನೇ ಕುಂಭಮೇಳ ನಡೆಯುತ್ತಿರುವುದು ಸಂತಸವನ್ನುಂಟು ಮಾಡಿದೆ ಎಂದು ಶಾಸಕ ಕೆ.ಸಿ.ನಾರಾಯಣಗೌಡ ತಿಳಿಸಿದರು. ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿ ಪುರ, ಸಂಗಾಪುರ, ಅಂಬಿಗರಹಳ್ಳಿ ಗ್ರಾಮ ಗಳ ಸಮೀಪ ಕಾವೇರಿ, ಹೇಮಾವತಿ ಹಾಗೂ ಲಕ್ಷ್ಮಣತೀರ್ಥ ನದಿಗಳ ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದ ಯಾತ್ರಿ ನಿವಾಸ್ ಆವರಣದಲ್ಲಿ ನಡೆದ ಕುಂಭಮೇಳ ಪೂರ್ವ ಭಾವಿ ಸಭೆ ಮತ್ತು ತ್ರೈಮಾಸಿಕ ಪ್ರಗತಿ ಪರಿ ಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಎರಡನೇ…

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವಿಪ್ರ ಬಂಧುಗಳ ಕೊಡುಗೆ ಅಪಾರ
ಮಂಡ್ಯ

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವಿಪ್ರ ಬಂಧುಗಳ ಕೊಡುಗೆ ಅಪಾರ

June 16, 2018

ಕೆ.ಆರ್.ಪೇಟೆ: ವಿಪ್ರ ಬಾಂಧವರು ಭಾರತೀಯ ಸಂಸ್ಕೃತಿ, ಪರಂಪರೆ ಹಾಗೂ ಧರ್ಮ ಉಳಿಸುವ ಕಾಯಕವನ್ನು ಶ್ರದ್ಧಾ ಭಕ್ತಿಯಿಂದ ಮಾಡುವ ಮೂಲಕ ಧಾರ್ಮಿಕ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಶಾಸಕ ನಾರಾಯಣಗೌಡ ಹೇಳಿದರು. ಪಟ್ಟಣದ ನಾಗಮಂಗಲ ರಸ್ತೆಯಲ್ಲಿ ರುವ ರಾಮ ಮಂದಿರದಲ್ಲಿ ತಾಲೂಕು ಬ್ರಾಹ್ಮಣ ಮಹಾಸಭಾದ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭ, ಶ್ರೀ ರಾಘವೇಂದ್ರಸ್ವಾಮಿ ಧ್ಯಾನ ಮಂದಿರ ಹಾಗೂ ವಿಪ್ರ ವಿದ್ಯಾರ್ಥಿಗಳ ಹಾಸ್ಟೆಲ್ ಕಟ್ಟಡದ ನಿರ್ಮಾಣಕ್ಕೆ ಆಯೋಜಿಸಿದ್ದ ಸಂಕಲ್ಪ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಆಚಾರ…

Translate »