ದೇವೇಗೌಡರ ಮನೆ ಹೆಣ್ಣು ಮಕ್ಕಳಿಂದ ನಿರಂತರ ಕಿರುಕುಳ
ಮೈಸೂರು

ದೇವೇಗೌಡರ ಮನೆ ಹೆಣ್ಣು ಮಕ್ಕಳಿಂದ ನಿರಂತರ ಕಿರುಕುಳ

July 8, 2019

ಬೆಂಗಳೂರು: ಜೆಡಿಎಸ್ ಹಿರಿಯ ನಾಯಕ ಹೆಚ್.ವಿಶ್ವನಾಥ್ ಅವರ ಜೊತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ, ತಮ್ಮ ರಾಜೀನಾಮೆಗೆ ಪಕ್ಷದ ವರಿಷ್ಠ ಹೆಚ್.ಡಿ. ದೇವೇಗೌಡ ಅವರನ್ನೇ ನೇರ ಹೊಣೆಗಾರ ರನ್ನಾಗಿಸಿರುವ ಅವರು, ಗೌಡರ ಕುಟುಂಬ ರಾಜಕಾರಣದಿಂದ ಬೇಸತ್ತಿರುವುದಾಗಿ ಹೇಳಿ ದ್ದಾರೆ. ದೇವೇಗೌಡರ ಕುಟುಂಬ ರಾಜಕಾರ ಣದ ಕಿರುಕುಳದ ಕಾರಣಕ್ಕಾಗಿ ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವು ದಾಗಿ ಗಂಭೀರ ಆರೋಪ ಮಾಡಿ ರುವ ಅವರು, ದೇವೇಗೌಡರ ಪುತ್ರಿ ಯರಿಂದ ತಮಗೆ ನಿರಂತರ ಕಿರು ಕುಳವಾಗುತ್ತಿದೆ. ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದರೆ, ತಮ್ಮನ್ನು ಚಪ್ಪಲಿ ಬಿಡುವ ಜಾಗದಲ್ಲಿ ನಿಲ್ಲಿಸು ತ್ತಾರೆ ಎಂದು ಶಾಸಕ ನಾರಾಯಣ ಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, ದೇವೇಗೌಡರು ಹಾಗೂ ಅವರ ಕುಟುಂಬ ರಾಜ ಕಾರಣದಿಂದ ತಾವು ಸಾಕಷ್ಟು ನೋವು ಅನುಭವಿಸಿದ್ದು, ತಮ್ಮಂ ತೆಯೇ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಅವರೂ ನೋವನ್ನು ಅನು ಭವಿಸುತ್ತಿದ್ದಾರೆ. ದೇವೇಗೌಡರ ಕುಟುಂಬದ ಕಿರುಕುಳ ತಡೆಯಲು ಪಕ್ಷದಲ್ಲಿ ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಶಾಸಕರ ಜೊತೆ ಪಕ್ಷದ ಮತ್ತಷ್ಟು ಶಾಸಕರು ರಾಜೀನಾಮೆ ನೀಡುವುದು ಖಚಿತ ಎಂದು ಭವಿಷ್ಯ ನುಡಿ ದರು. ಇನ್ನು ಬಿಜೆಪಿ ಸೇರುವ ಕುರಿತು ಅಂತಿಮ ತೀರ್ಮಾನ ಮಾಡಿಲ್ಲ ಎಂದ ನಾರಾಯಣ ಗೌಡ, ರಾಜೀನಾಮೆ ಅಂಗೀ ಕಾರವಾದ ನಂತರ ಬೆಂಬಲಿಗರೊಡನೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವೆ ಎಂದಿದ್ದಾರೆ.

Translate »