ಪಟ್ಟು ಸಡಿಲಿಸದ ರಾಮಲಿಂಗಾ ರೆಡ್ಡಿ
Uncategorized, ಮೈಸೂರು

ಪಟ್ಟು ಸಡಿಲಿಸದ ರಾಮಲಿಂಗಾ ರೆಡ್ಡಿ

July 8, 2019

ಬೆಂಗಳೂರು: ರಾಜೀನಾಮೆ ಹಿಂಪಡೆಯುವಂತೆ ರಾಮಲಿಂಗಾ ರೆಡ್ಡಿ ಅವರನ್ನು ಮನವೊಲಿ ಸಲು ಮಲ್ಲಿಕಾರ್ಜುನ ಖರ್ಗೆ ನಡೆಸಿದ ಸಂಧಾನ ವಿಫಲವಾಗಿದೆ.

ರಾಮಲಿಂಗಾ ರೆಡ್ಡಿ ಅವರ ಜೊತೆ ಮಲ್ಲಿಕಾರ್ಜುನ ಖರ್ಗೆ ದೂರವಾಣಿ ಮೂಲಕ ಮಾತನಾಡಿ ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ ರೆಡ್ಡಿ ಅವರು ನಾನು ಈಗಾಗಲೇ ರಾಜೀ ನಾಮೆ ಕೊಟ್ಟಾಗಿದೆ. ಅದರಿಂದ ನಾನಾಗಲೀ, ನನ್ನ ಪುತ್ರಿಯಾಗಲೀ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನನಗೆ ನಿಮ್ಮ ಅಧಿಕಾರವೂ ಬೇಡ, ಸಹವಾಸವೂ ಬೇಡ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ ಎಂದು ಹೇಳಲಾಗಿದೆ.

ಇದಾದ ನಂತರ ಡಿ.ಕೆ.ಶಿವಕುಮಾರ್ ಮತ್ತು ಅವರ ಸಹೋದರ ಡಿ.ಕೆ.ಸುರೇಶ್ ಅವರು ಖುದ್ದಾಗಿ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿ ಮಾಡಿ ಕಾಂಗ್ರೆಸ್ ಹೈಕಮಾಂಡ್‍ನ ಸಂಧಾನ ಸೂತ್ರವನ್ನು ವಿವರಿಸಿದ ರಾದರೂ ರೆಡ್ಡಿಯವರು ತಮ್ಮ ಪಟ್ಟು ಸಡಿಲಿಸಲಿಲ್ಲ ಎನ್ನಲಾಗಿದೆ.

Translate »