ನಾವ್ಯಾರೂ ರಾಜೀನಾಮೆ ಹಿಂಪಡೆಯಲ್ಲ:  ಅತೃಪ್ತ ಶಾಸಕರ ಘೋಷಣೆ
ಮೈಸೂರು

ನಾವ್ಯಾರೂ ರಾಜೀನಾಮೆ ಹಿಂಪಡೆಯಲ್ಲ: ಅತೃಪ್ತ ಶಾಸಕರ ಘೋಷಣೆ

July 8, 2019

ಮುಂಬೈ: ಮುಂಬೈನಲ್ಲಿ ವಾಸ್ತವ್ಯ ಹೂಡಿರುವ ಅತೃಪ್ತ ಶಾಸಕರು ಒಗ್ಗಟ್ಟು ಪ್ರದರ್ಶಿಸಿದ್ದು, ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯುವುದಿಲ್ಲ ಎಂದು ಘೋಷಿಸಿದ್ದಾರೆ.

ಹೋಟೆಲ್ ಮುಂಭಾಗ ಚುಟುಕು ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್, ಈ ಎಚ್ಚರಿಕೆ ಸಂದೇಶವನ್ನು ನೀಡಿದರು. ರಾಜೀ ನಾಮೆ ಕೊಟ್ಟಿರುವ ನಾವ್ಯಾರೂ ರಾಜೀನಾಮೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ. ನಾವು ಮುಖ್ಯಮಂತ್ರಿ ಬದಲಾವಣೆ ಬೇಡಿಕೆ ಇಟ್ಟಿಲ್ಲ. ಬೇರೆ ಯಾರನ್ನೂ ಮುಖ್ಯಮಂತ್ರಿ ಮಾಡಬೇಕೆಂದು ಕೇಳಲೂ ಇಲ್ಲ ಎಂದರು.

ಅವರ ಮಾತುಗಳನ್ನೇ ಜೆಡಿಎಸ್ ಶಾಸಕ ಗೋಪಾಲಯ್ಯ ಮತ್ತು ಕಾಂಗ್ರೆಸ್ ಶಾಸಕ ಬಿ.ಎಸ್.ಪಾಟೀಲ್ ಪುನರುಚ್ಚರಿಸಿದರು.

Translate »