Tag: Mumbai

ನಾವ್ಯಾರೂ ರಾಜೀನಾಮೆ ಹಿಂಪಡೆಯಲ್ಲ:  ಅತೃಪ್ತ ಶಾಸಕರ ಘೋಷಣೆ
ಮೈಸೂರು

ನಾವ್ಯಾರೂ ರಾಜೀನಾಮೆ ಹಿಂಪಡೆಯಲ್ಲ: ಅತೃಪ್ತ ಶಾಸಕರ ಘೋಷಣೆ

July 8, 2019

ಮುಂಬೈ: ಮುಂಬೈನಲ್ಲಿ ವಾಸ್ತವ್ಯ ಹೂಡಿರುವ ಅತೃಪ್ತ ಶಾಸಕರು ಒಗ್ಗಟ್ಟು ಪ್ರದರ್ಶಿಸಿದ್ದು, ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯುವುದಿಲ್ಲ ಎಂದು ಘೋಷಿಸಿದ್ದಾರೆ. ಹೋಟೆಲ್ ಮುಂಭಾಗ ಚುಟುಕು ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್, ಈ ಎಚ್ಚರಿಕೆ ಸಂದೇಶವನ್ನು ನೀಡಿದರು. ರಾಜೀ ನಾಮೆ ಕೊಟ್ಟಿರುವ ನಾವ್ಯಾರೂ ರಾಜೀನಾಮೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ. ನಾವು ಮುಖ್ಯಮಂತ್ರಿ ಬದಲಾವಣೆ ಬೇಡಿಕೆ ಇಟ್ಟಿಲ್ಲ. ಬೇರೆ ಯಾರನ್ನೂ ಮುಖ್ಯಮಂತ್ರಿ ಮಾಡಬೇಕೆಂದು ಕೇಳಲೂ ಇಲ್ಲ ಎಂದರು. ಅವರ ಮಾತುಗಳನ್ನೇ ಜೆಡಿಎಸ್ ಶಾಸಕ ಗೋಪಾಲಯ್ಯ ಮತ್ತು ಕಾಂಗ್ರೆಸ್ ಶಾಸಕ ಬಿ.ಎಸ್.ಪಾಟೀಲ್…

ದೇಶ ಬಿಟ್ಟು ಹೋಗುತ್ತಿದ್ದ ಜೆಟ್ ಏರ್ ವೇಸ್ ಮಾಜಿ ಮುಖ್ಯಸ್ಥ ನರೇಶ್ ಗೋಯಲ್, ಪತ್ನಿಯನ್ನು ತಡೆದ ಅಧಿಕಾರಿಗಳು
ಮೈಸೂರು

ದೇಶ ಬಿಟ್ಟು ಹೋಗುತ್ತಿದ್ದ ಜೆಟ್ ಏರ್ ವೇಸ್ ಮಾಜಿ ಮುಖ್ಯಸ್ಥ ನರೇಶ್ ಗೋಯಲ್, ಪತ್ನಿಯನ್ನು ತಡೆದ ಅಧಿಕಾರಿಗಳು

May 26, 2019

ಮುಂಬೈ: ತೀವ್ರ ಆರ್ಥಿಕ ಸಂಕಷ್ಟ ಹಾಗೂ ಸಾಲದಿಂದಾಗಿ ಹಾರಾಟ ಸ್ಥಗಿತಗೊಳಿಸಿರುವ ಜೆಟ್ ಏರ್ ವೇಸ್ ಮಾಜಿ ಮುಖ್ಯಸ್ಥ ನರೇಶ್ ಗೋಯಲ್ ಮತ್ತು ಅವರ ಪತ್ನಿ ಅನಿತಾ ಗೋಯಲ್ ಅವರ ವಿದೇಶ ಪ್ರವಾಸಕ್ಕೆ ಅನುಮತಿ ನೀಡಲು ವಲಸೆ ಪ್ರಾಧಿಕಾರಿದ ಅಧಿಕಾರಿಗಳು ನಿರಾಕರಿಸಿದ್ದಾರೆ. ಇಂದು ದೇಶ ಬಿಟ್ಟು ಹೊರಡಲು ಅಣಿಯಾಗಿ ವಿಮಾನ ಏರಲು ಬಂದಿದ್ದ ನರೇಶ್ ಗೋಯಲ್ ಮತ್ತು ಅವರ ಪತ್ನಿ ಅನಿತಾ ಅವರನ್ನು ವಿಮಾನ ನಿಲ್ದಾಣ ಅಧಿಕಾರಿ ಗಳು ತಡೆದಿದ್ದಾರೆ. ನರೇಶ್ ಗೋಯಲ್ ಅವರು ತಮ್ಮ ಪತ್ನಿಯೊಂದಿಗೆ ಇಂದು…

ಕಚ್ಚಾಡಿಕೊಳ್ಳುತ್ತಿದ್ದ ಬಿಜೆಪಿ-ಶಿವಸೇನೆ ಮತ್ತೆ ಮೈತ್ರಿ
ಮೈಸೂರು

ಕಚ್ಚಾಡಿಕೊಳ್ಳುತ್ತಿದ್ದ ಬಿಜೆಪಿ-ಶಿವಸೇನೆ ಮತ್ತೆ ಮೈತ್ರಿ

February 19, 2019

ಮುಂಬೈ:ಈವರೆಗೂ ಪರಸ್ಪರ ಕಚ್ಚಾಡಿಕೊಳ್ಳುತ್ತಿದ್ದ ಬಿಜೆಪಿ-ಶಿವಸೇನೆ ಲೋಕ ಸಭಾ ಚುನಾವಣೆಗೆ ಮತ್ತೆ ಮೈತ್ರಿ ಮಾಡಿಕೊಂಡಿದ್ದು, ಸ್ಥಾನ ಹಂಚಿಕೆಯನ್ನೂ ಘೋಷಣೆ ಮಾಡಿವೆ. ಫೆ.18ರಂದು ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಲೋಕಸಭಾ ಚುನಾವಣೆ ಸಂಬಂಧ ನಡೆಸಿರುವ ಮಾತುಕತೆ ಯಶಸ್ವಿಯಾಗಿದ್ದು, ಬಿಜೆಪಿ ಮಹಾರಾಷ್ಟ್ರದಲ್ಲಿ 25 ಸ್ಥಾನಗಳಲ್ಲಿ ಸ್ಪರ್ಧಿಸಿದರೆ ಶಿವಸೇನೆ 23 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಬಿಜೆಪಿ ಹಾಗೂ ಶಿವಸೇನೆಯ ಕೋಟ್ಯಂತರ ಕಾರ್ಯಕರ್ತರು ಉಭಯ ಪಕ್ಷಗಳ ನಡುವೆ ಮೈತ್ರಿಯನ್ನು ಬಯಸುತ್ತಿದ್ದರು. ಶಿವಸೇನೆ ಬಿಜೆಪಿಯ ಅತಿ ಹಳೆಯ…

ಮುಂಬೈನಲ್ಲಿ ಮನೆ ಕೆಲಸಕ್ಕೆ ಸೇರಿ ಮಾಲೀಕರ ಚಿನ್ನಾಭರಣ ಕದ್ದ ಹೆಚ್.ಡಿ.ಕೋಟೆ ಕಳ್ಳಿ
ಮೈಸೂರು

ಮುಂಬೈನಲ್ಲಿ ಮನೆ ಕೆಲಸಕ್ಕೆ ಸೇರಿ ಮಾಲೀಕರ ಚಿನ್ನಾಭರಣ ಕದ್ದ ಹೆಚ್.ಡಿ.ಕೋಟೆ ಕಳ್ಳಿ

July 31, 2018

ಸ್ಥಳೀಯ ಪೊಲೀಸರ ನೆರವಿನಿಂದ ಮುಂಬೈ ಪೊಲೀಸರ ವಶಕ್ಕೆ ಹ್ಯಾಂಡ್‍ಪೋಸ್ಟ್‍ನಲ್ಲಿ ಗಿರವಿ ಇಟ್ಟಿದ್ದ ಬಹುತೇಕ ಚಿನ್ನಾಭರಣಗಳ ಜಪ್ತಿ 30 ಲಕ್ಷದ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಖತರ್ನಾಕ್ ಮಹಿಳೆ ಮೈಸೂರು:  ಮುಂಬೈನಲ್ಲಿ ಕೆಲಸ ಮಾಡಿಕೊಂಡಿದ್ದ ಮನೆಯಲ್ಲೇ ಲಕ್ಷಾಂತರ ರೂ. ಮೌಲ್ಯದ ವಜ್ರ ಹಾಗೂ ಚಿನ್ನದ ಆಭರಣಗಳನ್ನು ದೋಚಿಕೊಂಡು ಬಂದಿದ್ದ ಹೆಚ್.ಡಿ.ಕೋಟೆ ಮೂಲದ ಮಹಿಳೆ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ. ತಾಲೂಕಿನ ಹಾದನೂರು ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಕಳ್ಳಿ ತುಳಸಿ(30)ಯನ್ನು ಸ್ಥಳೀಯ ಪೊಲೀಸರ ನೆರವಿನೊಂದಿಗೆ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬಳಿಕ ವಿಚಾರಣೆಗೊಳಪಡಿಸಿ,…

ಮುಂಬೈ: ದೀಪಿಕಾ ಪಡುಕೋಣೆ ಫ್ಲಾಟ್‍ನಲ್ಲಿ ಬೆಂಕಿ: 90 ಮಂದಿ ಪ್ರಾಣಾಪಾಯದಿಂದ ಪಾರು
ದೇಶ-ವಿದೇಶ

ಮುಂಬೈ: ದೀಪಿಕಾ ಪಡುಕೋಣೆ ಫ್ಲಾಟ್‍ನಲ್ಲಿ ಬೆಂಕಿ: 90 ಮಂದಿ ಪ್ರಾಣಾಪಾಯದಿಂದ ಪಾರು

June 14, 2018

ಮುಂಬೈ:  ಬಾಲಿವುಡ್ ನಟಿ, ಕನ್ನಡತಿ ದೀಪಿಕಾ ಪಡುಕೋಣೆ ಅವರು ವಾಸ್ತವ್ಯ ಹೂಡಿದ್ದ ಫ್ಲಾಟ್‍ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಪ್ರಭಾದೇವಿ ನಗರದಲ್ಲಿರುವ 34 ಅಂತಸ್ತಿನ ಬೆಹುಮಂಡೆ ಕಟ್ಟಡದ ಕೊನೆಯ ಅಂತಸ್ತಿನಲ್ಲಿ ಹಠಾತ್ತನೆ ಬೆಂಕಿ ಕಾಣ ಸಿಕೊಂಡಿದ್ದು, ಧಗಧಗನೆ ಹೊತ್ತಿ ಉರಿದಿದೆ. ಈ ಸಂದರ್ಭದಲ್ಲಿ ದೀಪಿಕಾ ಪಡುಕೋಣೆ ಇರಲಿಲ್ಲ ಎಂದು ಅಗ್ನಿಶಾಮಕ ಸಿಬ್ಬಂದಿ ಹಾಗೂ ಅವರ ಆಪ್ತರು ತಿಳಿಸಿದ್ದಾರೆ. ದೀಪಿಕಾ ಪಡುಕೋಣೆ ಈ ಕಟ್ಟಡದ ಒಂದು ಅಂತಸ್ತಿನಲ್ಲಿ ವಾಸ್ತವ್ಯ ಹೂಡಿದ್ದು, ಮತ್ತೊಂದು ಅಂತಸ್ತಿನಲ್ಲಿ ಕಚೇರಿ ಹೊಂದಿದ್ದಾರೆ. ಬೆಂಕಿಯಿಂದಾಗಿ ಎರಡು ಅಂತಸ್ತಿಗೂ…

ಮುಂಬಯಿಯಲ್ಲಿ ಭಾರೀ ಮಳೆ: ಮಹೀಮ್, ವರ್ಲಿ, ಹಿಂದ್ಮಾತಾ ಜಲಾವೃತ
ದೇಶ-ವಿದೇಶ

ಮುಂಬಯಿಯಲ್ಲಿ ಭಾರೀ ಮಳೆ: ಮಹೀಮ್, ವರ್ಲಿ, ಹಿಂದ್ಮಾತಾ ಜಲಾವೃತ

June 10, 2018

ಮುಂಬಯಿ: ಇಂದು ಕೂಡ ಮುಂಬಯಿಯಲ್ಲಿ ಧಾರಾಕಾರ ಮಳೆ ಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಮಹಿಮ್, ವೊರ್ಲಿ, ಹಿಂದ್ಮಾತಾ ನಗರದ ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಶನಿವಾರ ಮತ್ತು ಭಾನುವಾರ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸಬೇಕೆಂದು ಹವಾಮಾನ ಇಲಾಖೆ ಸೂಚಿಸಿದೆ. ಸ್ಥಳೀಯ ರೈಲುಗಳ ಸಂಚಾರ ವೇಳೆಯಲ್ಲೂ ವಿಳಂಬವಾಗಿದೆ, ಸುಮಾರು 10ರಿಂದ 12 ನಿಮಿಷ ತಡವಾಗಿ ರೈಲುಗಳು ಆಗಮಿಸುತ್ತಿವೆ, ಸುಮಾರು 32 ವಿಮಾನಗಳ…

Translate »