ಮುಂಬೈ: ದೀಪಿಕಾ ಪಡುಕೋಣೆ ಫ್ಲಾಟ್‍ನಲ್ಲಿ ಬೆಂಕಿ: 90 ಮಂದಿ ಪ್ರಾಣಾಪಾಯದಿಂದ ಪಾರು
ದೇಶ-ವಿದೇಶ

ಮುಂಬೈ: ದೀಪಿಕಾ ಪಡುಕೋಣೆ ಫ್ಲಾಟ್‍ನಲ್ಲಿ ಬೆಂಕಿ: 90 ಮಂದಿ ಪ್ರಾಣಾಪಾಯದಿಂದ ಪಾರು

June 14, 2018

ಮುಂಬೈ:  ಬಾಲಿವುಡ್ ನಟಿ, ಕನ್ನಡತಿ ದೀಪಿಕಾ ಪಡುಕೋಣೆ ಅವರು ವಾಸ್ತವ್ಯ ಹೂಡಿದ್ದ ಫ್ಲಾಟ್‍ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಪ್ರಭಾದೇವಿ ನಗರದಲ್ಲಿರುವ 34 ಅಂತಸ್ತಿನ ಬೆಹುಮಂಡೆ ಕಟ್ಟಡದ ಕೊನೆಯ ಅಂತಸ್ತಿನಲ್ಲಿ ಹಠಾತ್ತನೆ ಬೆಂಕಿ ಕಾಣ ಸಿಕೊಂಡಿದ್ದು, ಧಗಧಗನೆ ಹೊತ್ತಿ ಉರಿದಿದೆ. ಈ ಸಂದರ್ಭದಲ್ಲಿ ದೀಪಿಕಾ ಪಡುಕೋಣೆ ಇರಲಿಲ್ಲ ಎಂದು ಅಗ್ನಿಶಾಮಕ ಸಿಬ್ಬಂದಿ ಹಾಗೂ ಅವರ ಆಪ್ತರು ತಿಳಿಸಿದ್ದಾರೆ.

ದೀಪಿಕಾ ಪಡುಕೋಣೆ ಈ ಕಟ್ಟಡದ ಒಂದು ಅಂತಸ್ತಿನಲ್ಲಿ ವಾಸ್ತವ್ಯ ಹೂಡಿದ್ದು, ಮತ್ತೊಂದು ಅಂತಸ್ತಿನಲ್ಲಿ ಕಚೇರಿ ಹೊಂದಿದ್ದಾರೆ. ಬೆಂಕಿಯಿಂದಾಗಿ ಎರಡು ಅಂತಸ್ತಿಗೂ ಯಾವುದೇ ಹಾನಿಯಾಗಿಲ್ಲ ಎಂಬುದು ಮೂಲಗಳಿಂದ ತಿಳಿದುಬಂದಿದೆ. ಮಧ್ಯಾಹ್ನ 2-08 ರ ಸುಮಾರಿನಲ್ಲಿ ಈ ಅಗ್ನಿ ಅವಘಡ ಉಂಟಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ 90 ಮಂದಿಯನ್ನು ಸುರಕ್ಷಿತವಾಗಿ ಪಾರು ಮಾಡಿದ್ದಾರೆ .ಯಾರೊಬ್ಬರೂ ಕೂಡಾ ಗಾಯಗೊಂಡಿಲ್ಲ. ಬೆಂಕಿ ನಂದಿಸಲು 10 ಅಗ್ನಿಶಾಮಕ ವಾಹನ, ಎರಡು ಟ್ರಕ್ , ಐದು ನೀರಿನ ಟ್ಯಾಂಕರ್ ಗಳನ್ನು ಬಳಸಿಕೊಳ್ಳಲಾಗಿತ್ತು, ಕೆಲ ತಾಸುಗಳ ಕಾರ್ಯಾಚರಣೆ ನಂತರ ಬೆಂಕಿ ಹತೋಟಿಗೆ ಬಂದಿದೆ.

Translate »