ಕೊರೊನಾ ಜಾಗೃತಿ ಸಭೆಯಲ್ಲೇ ಮಾಸ್ಕ್,ಧರಿಸದ ಸಚಿವ ಕೆ.ಸಿ.ನಾರಾಯಣ್ ಗೌಡ. ಸಾಮಾನ್ಯರಿಗೆ ಪಾಠ ಹೇಳುವ ಅಧಿಕಾರಿಳಿಂದಲೂ ಲೋಪ.!
ಮಂಡ್ಯ

ಕೊರೊನಾ ಜಾಗೃತಿ ಸಭೆಯಲ್ಲೇ ಮಾಸ್ಕ್,ಧರಿಸದ ಸಚಿವ ಕೆ.ಸಿ.ನಾರಾಯಣ್ ಗೌಡ. ಸಾಮಾನ್ಯರಿಗೆ ಪಾಠ ಹೇಳುವ ಅಧಿಕಾರಿಳಿಂದಲೂ ಲೋಪ.!

March 28, 2020

ಮಂಡ್ಯ,ಮಾ.28(ನಾಗಯ್ಯ); ಕೊರೊನಾ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾದ ಪೌರಾಡಳಿತ ಸಚಿವ ಕೆ.ಸಿ.ನಾರಾಯಣಗೌಡರೇ , ಮಾಸ್ಕ್ ಧರಿಸದೆ ಅಧಿಕಾರಿಗಳೊಂದಿಗೆ ಕೊರೊನಾ ವೈರಸ್ ತಡೆ ಕುರಿತು ಜಾಗೃತಿ ಸಭೆ ನಡೆಸಿದ ಘಟನೆ ಮಂಡ್ಯದಲ್ಲಿಂದು ನಡೆಯಿತು.

ಮಂಡ್ಯನಗರದ ಪ್ರವಾಸಿ ಮಂದಿರದಲ್ಲಿಂದು ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮತ್ತುಸುದ್ದಿಗೋಷ್ಠಿಯಲ್ಲಿಯೂ ಕೂಡ ಮಾಸ್ಕ್ ಧರಿಸದೆ ಸಚಿವ ಕೆ,ಸಿ.ನಾರಾಯಣಗೌಡ ಮಾತನಾಡಿದರು.

ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ವೈರಸ್ ತಡೆಗೆ ಎಲ್ಲರೂ ಮಾಸ್ಕ್ ಧರಿಸುವಂತೆ ಸರ್ಕಾರವೇ ಆದೇಶ ಮಾಡುತ್ತಿದೆ,ಜನಪ್ರತಿನಿಧಿಗಳೂ ಕೂಡ ಉದ್ದುದ್ದ ಭಾಷಣ ಮಾಡುತ್ತಿದ್ದಾರೆ,ಆದರೆ ಇಂದಿನ ಸಭೆಯಲ್ಲಿ ಸಚಿವ ಕೆ.ಸಿ.ನಾರಾಯಣಗೌಡ ಮಾಸ್ಕ್ ಧರಿಸದೆ ಮಾತನಾಡಿದ್ದುದು ಚರ್ಚೆಗೆ ಗ್ರಾಸವಾಗಿದೆ.

ಇಂದಿನ ಸಭೆಯಲ್ಲಿ ಸಚಿವರು ಬಾಯಿಗೆ ಮಾಸ್ಕ್ ಧರಿಸದಿರುವುದರ ಜೊತೆಗೆ ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳದೆ ಅಧಿಕಾರಿಗಳೊಂದಿಗೆ ಮುಕ್ತವಾಗಿ ಮಾತನಾಡಿದರು.

ಸಚಿವರೊಟ್ಟಿಗೆ ಕುಳಿತಿದ್ದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಚೇಗೌಡ ,ಜಿಪಂ ಸಿಇಓ ಯಾಲಕ್ಕಿಗೌಡ,ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್, ಬಿಜೆಪಿ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ಕೂಡ ಬಾಯಿಗೆ ಮಾಸ್ಕನ್ನೂ ಧರಿಸಿರಲಿಲ್ಲ, ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳದೆ ಕುಳಿತಿದ್ದುದು ಕಂಡು ಬಂತು.

ಸಭೆ ಬಳಿಕ ಸಚಿವರೊಟ್ಟಿಗೆ ಬಂದ ಅವರ ಹಿಂಬಾಲಕರೂ ಸಹ ಗುಂಪು ಗುಂಪಾಗಿಯೇ ಸಚಿವರೊಟ್ಟಿಗೆ ಇದ್ದುದು ಕಂಡು ಬಂತು.ಸಚಿವರು ಮತ್ತು ಅಧಿಕಾರಿಗಳ ಈ ನಡೆ ಸಹಜವಾಗಿಯೇ ಸಾಮಾನ್ಯ ಜನರಲ್ಲಿ ಅರಿವು ಮೂಡಿಸುವವರ ಮಾದರಿ ವರ್ತನೆ ಇದೇಯೇನು ಎಂದು ಪ್ರಶ್ನಿವಂತಾಗಿತ್ತು.

Translate »