ಕೊರೋನಾ ಭೀತಿಯಿಂದ ಲಾಕ್ ಡೌನ್ : ಸಚಿವ ಶ್ರೀರಾಮುಲು
ಮಂಡ್ಯ, ಮೈಸೂರು

ಕೊರೋನಾ ಭೀತಿಯಿಂದ ಲಾಕ್ ಡೌನ್ : ಸಚಿವ ಶ್ರೀರಾಮುಲು

March 28, 2020

ಎಷ್ಟೇ ಹೇಳಿದ್ರು ಜನ ಬೀದಿಗೆ ಬರೋದನ್ನನಿಲ್ಲಿಸ್ತಿಲ್ಲ ಯಾಕಂತ ಅರ್ಥವಾಗ್ತಿಲ್ಲ.? ನಿಮ್ಮ ರಕ್ಷಣೆಗಾಗಿ ಕೆಲಸ ಮಾಡೋರ್ ಮೇಲೆ ದೌರ್ಜನ್ಯ ನಡೆಸೋದು ಸರಿಯೇ.: ಸಚಿವ ಶ್ರೀರಾಮುಲು ಪ್ರಶ್ನೆ.

  • ಮಂಡ್ಯದಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ 650 ಬೆಡ್ ಆಸ್ಪತ್ರೆ
  • ಈವರೆಗೆ ರಾಜ್ಯದಲ್ಲಿ 74 ಕೊರೊನಾವೈರಸ್ ಪಾಸಿಟಿವ್ ಕೇಸುಗಳು ಪತ್ತೆ
  • ಕೊರೊನಾ ಸೋಂಕು ಪೀಡಿತರ ತಪಾಸಣಾ ಕೇಂದ್ರಕ್ಕೆ ಭೇಟಿ,ಪರಿಶೀಲನೆ

ಮಂಡ್ಯ,ಮಾ.28(ನಾಗಯ್ಯ);ಇಡೀ ದೇಶವನ್ನೇ ಆವರಿಸುತ್ತಿರುವ ಕೊರೋನಾ ಭೀತಿಯಿಂದ ಲಾಕ್ ಡೌನ್ ಆರ್ಡ್ ಮಾಡಲಾಗಿದೆ,ಆದರೆ ಎಷ್ಟೇ ಹೇಳಿದ್ರು ಜನ ಬೀದಿಗೆ ಬರೋದನ್ನ ನಿಲ್ಲಿಸ್ತಿಲ್ಲ,ಯಾಕೆ ಅಂತ ನನಗೂ ಅರ್ಥವಾಗ್ತಿಲ್ಲ ಅಂತ ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದರು.

ಮಂಡ್ಯನಗರದ ಜಿಲ್ಲಾಧಿಕಾರಿಗಳ ಸಭಾಂಗಣದ ಲ್ಲಿಂದು ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು , ಪ್ರಾಣ ಉಳಿದ್ರೆ ಏನು ಬೇಕಾದರೂ ಮಾಡಬಹುದು,ಮಹಾ ಮಾರಿ ಕೊರೊನಾದಿಂದ ಜನರ ಪ್ರಾಣ ಉಳಿಸಲು ವೈದ್ಯರು, ನರ್ಸ್ ಗಳು, ಪೊಲೀಸರು ಹೋರಾಟ ಮಾಡ್ತಿದ್ದಾರೆ, ಅವರುಗಳಿಗೇನು ಫ್ಯಾಮಿಲಿ ಇಲ್ವಾ…? ನೀವ್ಯಾಕೆ ಹೊರ ಬರ್ತಿದ್ದೀರಿ ಅನ್ನೋದು ನನಗೆ ಅರ್ಥ ಆಗ್ತಿಲ್ಲ ಎಂದು ಪ್ರಶ್ನಿಸಿದರು.

ಜನರ ಜೀವ ರಕ್ಷಣೆಗಾಗಿ ಪ್ರಾಣದ ಹಂಗು ತೊರೆದು ವೈದ್ಯರು,ಸಿಬ್ಬಂದಿಗಳು ಮತ್ತು ಪೊಲೀಸರು ಹಗಲಿರುಳು ಶ್ರಮಿಸುತ್ತಿದ್ದಾರೆ,ಆದರೆ ಅಂತಹವರ ಮೇಲೆಯೇ ಕಿಡಿಗೇಡಿಗಳು ಹಲ್ಲೆ,ದೌರ್ಜನ್ಯ,ದಬ್ಬಾಳಿಕೆಯಂತಹ ಕೃತ್ಯವೆಸಗುತ್ತಿರುವುದು ನೋವಿನ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಹೊರ ಬನ್ನಿ, ಬಳಿಕ ಬೇಗ ಮನೆ ಸೇರಿಕೊಳ್ಳಿ,ಅದುಬಿಟ್ಟು ಬೇಕಾಬಿಟ್ಟಿ ಎಲ್ಲಾ ಕಡೆ ಓಡಾಡೊದ್ರಿಂದ ಸಿಗೋದಾದ್ರೂ ಏನು,? ನಾನು ಇಲ್ಲಿ ಸಭೆ ಮಾಡೋದ್ರಿಂದ ಸಮಸ್ಯೆ ಬಗೆ ಹರಿಯಲ್ಲ.? ನಾನೇನು ಡಾಕ್ಟರಾ…? ನಾನು ಕೂಡ ವಿಡಿಯೋ ಕಾನ್ಫರೆನ್ಸ್ ಮುಖಾಂತರ ಸಭೆ ನಡೆಸಬಹುದಿತ್ತು ಆದರೆ ಅಧಿಕಾರಿಗಳಿಗೆ ಆತ್ಮಸ್ಥೈರ್ಯ ತುಂಬಲು ಸಭೆ ಮಾಡ್ತಿದ್ದೀನಿ ಅಷ್ಟೇ,ಜನ ಸಹಕಾರ ಕೊಡದಿದ್ರೆ ಏನೂ ಪ್ರಯೋಜವಾಗೊದಿಲ್ಲ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು.

ಕೊರೋನಾ ಮೂರನೇ ಹಂತಕ್ಕೆ ತಲುಪ ಬಾರದು ಅಂತ ದೇವರನ್ನು ಬೇಡಿಕೊಳ್ಳಿ,ಮೂರನೇ ಹಂತಕ್ಕೆ ತಲುಪಬಾರದೆಂದರೆ ಜನ ಜಾಗೃತ ರಾಗಬೇಕು ಎಂದು ಅವರು ಮನವಿ ಮಾಡಿದರು.

ಈವರೆಗೆ ರಾಜ್ಯದಲ್ಲಿ 74 ಪಾಸಿಟಿವ್ ಕೇಸುಗಳು ಪತ್ತೆ

ಶಿರಾದಲ್ಲಿ ಸಾವನ್ನಪ್ಪಿದ ಸೋಂಕಿತ ವ್ಯಕ್ತಿ ಜೊತೆ ಸ್ಥಳೀಯರು ಸಂಪರ್ಕದಲ್ಲಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು,ಈವರೆಗೆ ರಾಜ್ಯದಲ್ಲಿ 74 ಪಾಸಿಟಿವ್ ಕೇಸುಗಳು ಪತ್ತೆಯಾಗಿವೆ,ಸಾವನ್ನಪ್ಪಿದ ಸೋಂಕಿತ ವ್ಯಕ್ತಿ ಯಾರ್ಯಾರ ಜೊತೆ ಸಂಪರ್ಕದಲ್ಲಿದ್ದನೋ ಅವರನ್ನು ತಪಾಸಣೆ ಮಾಡಲಾಗಿದೆ,ಆ ಪೈಕಿ ಹಲವರನ್ನು ಹೋಂ ಕ್ವಾರಿಂಟೈನ್ ದಾಖಲು ಮಾಡಲಾಗಿದೆ,ಸಂಪರ್ಕದಲ್ಲಿದ್ದ ಮತ್ತಷ್ಟು ಮಂದಿಯನ್ನು ಪತ್ತೆ ಹಚ್ಚುವ ಕೆಲಸವನ್ನು ಅಲ್ಲಿನ ಜಿಲ್ಲಾಡಳಿತ ಮಾಡುತ್ತಿದೆ,ಸಾವನ್ನಪ್ಪಿದ ಶಿರಾ ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದ ಯಾವ ವೈದ್ಯರಿಗೂ ಸಮಸ್ಯೆ ಆಗಿಲ್ಲ,ವೈದ್ಯರಿಗೆ ಸೋಂಕಿನ ಶಂಕೆ ವ್ಯಕ್ತವಾಗಿದೆ ಎಂಬ ಬಗ್ಗೆ ಈ ವರೆಗೂ ಯಾವುದೇ ಮಾಹಿತಿ ಇಲ್ಲ ಎಂದರು.

ಮಂಡ್ಯಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಎಲ್ಲಾರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ,ಈಗಾಗಲೆ ಜಿಲ್ಲಾಡಳಿತ 650 ಬೆಡ್ ಗಳ ಆಸ್ಪತ್ರೆವ್ಯವಸ್ಥೆಮಾಡಿಕೊಂಡಿದೆ,ಇದರಲ್ಲಿ 350 ಆಕ್ಸಿಜನ್ ಬೆಡ್ ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ,ತಾಲ್ಲೂಕು ಆಸ್ಪತ್ರೆಗಳಲ್ಲಿಯೂ ಕೊರೊನಾ ತಡೆಗೆ ಕ್ರಮಕೈಗೊಳ್ಳಲಾಗಿದೆ ಎಂದರು.

ಈಗಾಗಲೆ ಜಿಲ್ಲೆಯಲ್ಲಿ ತಪಾಸಣೆಗೊಳಪಡಿಸಿರುವ ಶಂಕಿತ 5 ಮಂದಿಗೂ ಕೊರೊನಾ ನೆಗೆಟಿವ್ ಬಂದಿದೆ,ಹೀಗಾಗಿ ಜನರು ಆತಂಕಪಡುವ ಅಗತ್ಯವಿಲ್ಲ,ಮುನ್ನೆಚ್ಚರಿಕೆ ವಹಿಸಬೇಕಷ್ಟೆ ಎಂದು ಅವರು ತಿಳಿಸಿದರು.

ಖಾಸಗಿ ವೈದ್ಯರು ಬಾಗಿಲು ಓಪನ್ ಮಾಡಿ

ಬಹುತೇಕ ಕಡೆಗಳಲ್ಲಿ ಖಾಸಗಿ ಮೆಡಿಕಲ್ ಗಳನ್ನು ಬಂದ್ ಮಾಡಿರುವ ಬಗ್ಗೆ ಮಾಹಿತಿ ಬಂದಿದೆ,ಇನ್ನು ಮುಂದಾದರೂ ಕ್ಲಿನಿಕ್ ಗಳನ್ನು ತೆರೆದು ರೋಗಿಗಳಿಗೆ ಚಿಕಿತ್ಸೆ ನೀಡಿ,ಒಂದು ವೇಳೆ ಕೊರೊನ ಶಂಕೆ ವ್ಯಕ್ತವಾದರೆ ಮಿಮ್ಸ್ ಗೆ ಕಳುಹಿಸಿಕೊಡಿ ಎಂದು ಅವರು ಮನವಿ ಮಾಡಿದರು.

ಈ ವೇಳೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಚೇಗೌಡ,ಜಿಲ್ಲಾಪೊಲಿಸ್ ವರಿಷ್ಠಾಧಿಕಾರಿ ಪರಶುರಾಮ್ ಮತ್ತಿತರರು ಇದ್ದರು.

ಜಿಲ್ಲಾಸ್ಪತ್ರೆಗೆ ಭೇಟಿ

ಸುದ್ದಿಗೋಷ್ಠಿಯ ಬಳಿಕ ಸಚಿವ ಶ್ರೀರಾಮುಲು ಅಧಿಕಾರಿಗಳೊಂದಿಗೆ ಕೊರೊನಾ ವೈರಸ್ ಸೋಂಕು ಪೀಡಿತರಿಗಾಗಿ ಸಿದ್ದಗೊಳಿಸಿರುವ ತಪಾಸಣಾ ಕೇಂದ್ರಕ್ಕೆ ಭೇಟಿನೀಡಿ ಪರಿಶೀಲಿಸಿದರು.ಅಧಿಕಾರಿಗಳಿಂದ ಚಿಕಿತ್ಸೆ ಕುರಿತಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

Translate »