ಹಿಂದೂ-ಮುಸ್ಲಿಮರು ಪರಸ್ಪರ ಸೌಹಾರ್ದಯುತ ಜೀವನ ನಡೆಸಿ
ಮಂಡ್ಯ

ಹಿಂದೂ-ಮುಸ್ಲಿಮರು ಪರಸ್ಪರ ಸೌಹಾರ್ದಯುತ ಜೀವನ ನಡೆಸಿ

June 15, 2018

ಕೆ.ಆರ್.ಪೇಟೆ:  ಹಿಂದೂ-ಮುಸ್ಲಿಮರು ಪರಸ್ಪರ ಸೌಹಾರ್ದಯುತ ಜೀವನ ನಡೆಸಬೇಕು. ಯಾವುದೇ ಕಾರಣಕ್ಕೂ ದ್ವೇಷ-ಅಸೂಯೆ ಇಟ್ಟುಕೊಳ್ಳಬಾರದು ಎಂದು ತಹಶೀಲ್ದಾರ್ ಗುರುಸಿದ್ದಯ್ಯ ಹಿರೇಮಠ್ ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣ ದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಕರೆಯ ಲಾಗಿದ್ದ ಮುಸಲ್ಮಾನ್ ಬಾಂಧವರು ಮತ್ತು ವಿವಿಧ ಸಂಘ ಸಂಸ್ಥೆಗಳ ಶಾಂತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರತಿಯೊಬ್ಬ ವ್ಯಕ್ತಿ ತಮ್ಮ ಧರ್ಮ ಪ್ರೀತಿ ಸುವ ರೀತಿ ಅನ್ಯ ಧರ್ಮ ಮತ್ತು ಇತರೆ ಧರ್ಮದ ಬಂಧುಗಳನ್ನು ಗೌರವಿಸುವ ಉದಾರ ಗುಣ ಬೆಳೆಸಿಕೊಳ್ಳಬೇಕು. ಮುಸ್ಲಿಂ ಬಂಧುಗಳು ಕಳೆದ 1ತಿಂಗಳಿಂದ ಉಪವಾಸ ವಿದ್ದು, ಪವಿತ್ರ ರಂಜಾನ್ ಹಬ್ಬ ಆಚರಿಸುತ್ತಿದ್ದು, ಯಾವುದೇ ಅಪಪ್ರಚಾರಕ್ಕೆ ಕಿವಿಗೊಡದೆ ಶಾಂತಿಯುತವಾಗಿ ಸಡಗರದಿಂದ ಹಬ್ಬ ಆಚರಿಸಬೇಕು. ಪವಿತ್ರ ರಂಜಾನ್ ಹಬ್ಬವು ಎಲ್ಲಾ ಮುಸ್ಲಿಂ ಬಾಂಧವರಿಗೆ ಸುಖ ಸಂತೋಷ ನೀಡಲಿ ಎಂದು ತಾಲೂಕು ಆಡಳಿತವು ಹಾರೈಸುತ್ತದೆ. ತಾಲೂಕು ಆಡಳಿತ ಎಲ್ಲಾ ರೀತಿಯಿಂದಲೂ ಶಾಂತಿ ಸುವ್ಯವಸ್ಥೆ ಕಾಪಾ ಡಲು ಪೊಲೀಸ್ ಇಲಾಖೆಯ ಸಹಕಾರ ದೊಂದಿಗೆ ಸಿದ್ಧತೆ ಮಾಡಿಕೊಂಡಿದೆ. ಹಾಗಾಗಿ ತಾಲೂಕಿನಲ್ಲಿ ಯಾವುದೇ ಬಾಂಧವರು ಸಹಕರಿಸಬೇಕು ಎಂದು ತಹಶೀಲ್ದಾರ್ ಮನವಿ ಮಾಡಿದರು.

ಶಾಂತಿ ಸಭೆಯಲ್ಲಿ ಎಸ್‍ಐ ಹೆಚ್.ಎಸ್. ವೆಂಕಟೇಶ್, ಕೆ.ಎನ್.ಸತೀಶ್, ಮುಸ್ಲಿಂ ಸಮಾಜದ ಮುಖಂಡರಾದ ಪುರಸಭೆ ಮಾಜಿ ಅಧ್ಯಕ್ಷ ರಾದ ಕೆ.ಗೌಸ್‍ಖಾನ್, ಉಮರ್‍ಬೇಗ್, ಫಯಾಜ್, ಜಮೀರ್ ಅಹಮದ್, ಕರವೇ ತಾಲೂಕು ಅಧ್ಯಕ್ಷ ಹೊನ್ನೇನಹಳ್ಳಿ ವೇಣು, ಕಸಬಾ ಹೋಬಳಿಯ ರಾಜಸ್ವ ನಿರೀಕ್ಷಕಿ ಚಂದ್ರಕಲಾ, ಕಚೇರಿ ವ್ಯವಸ್ಥಾಪಕ ಹಿರಣ್ಣಯ್ಯ, ತಾಲೂಕು ಪ್ರೆಸ್‍ಕ್ಲಬ್ ಅಧ್ಯಕ್ಷ ಶ್ರೀನಿವಾಸ್.ಆರ್. ಸಜ್ಜನ್, ಪ್ರಭಾರ ಕಾರ್ಯದರ್ಶಿ ಕೆ.ಪಿ. ಮಂಜುನಾಥ್ ಮತ್ತಿತರರಿದ್ದರು.

Translate »