ಭೂ ಕುಸಿತ; ಅಪಾಯದ ಅಂಚಿನಲ್ಲಿ ಸೆಸ್ಕ್ ಕಚೇರಿ
ಕೊಡಗು

ಭೂ ಕುಸಿತ; ಅಪಾಯದ ಅಂಚಿನಲ್ಲಿ ಸೆಸ್ಕ್ ಕಚೇರಿ

June 15, 2018

ಸೋಮವಾರಪೇಟೆ: ಭಾರಿ ಮಳೆಯಿಂದ ಭೂ ಕುಸಿತ ಉಂಟಾಗಿದ್ದು, ಸೆಸ್ಕ್ ಕಛೇರಿ ಅಪಾಯದ ಸ್ಥಿತಿಯಲ್ಲಿದೆ.

ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ನಿಗಮದ ಕಛೇರಿಯ ಹಿಂಬಾಗದಲ್ಲಿ ಭಾರಿ ಭೂ ಕುಸಿತವಾಗುತ್ತಿದ್ದು, ಕಛೇರಿಯ ಕಟ್ಟಡವೇ ಕುಸಿಯುವ ಹಂತದಲ್ಲಿದೆ. ಕಛೇರಿ ಕಟ್ಟಡದ ಹಿಂಬಾಗದಲ್ಲಿ ತಡೆಗೋಡೆ ನಿರ್ಮಿಸಲೆಂದು ಸ್ವಲ್ಪ ಮಣ್ಣನ್ನು ಅಗೆದು ತೆಗೆಯಲಾಗಿತ್ತು. ಆದರೆ ಮಳೆ ಆರಂಭವಾದ ಹಿನ್ನಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು.

ಮಳೆಯ ರಭಸಕ್ಕೆ ಮಣ್ಣು ಕುಸಿಯಲಾರಂಭಿಸಿದ್ದು, ಶೌಚಾಲಯದ ಗುಂಡಿ ಬೀಳಲಾರಂಭಿಸಿದೆ. ಕಛೇರಿ ಕಟ್ಟಡ ಕೇವಲ 2 ಅಡಿ ಅಂತರದಲ್ಲಿದ್ದು ಮುಂದಿನ ಎರಡು ದಿನಗಳಲ್ಲಿ ಧಾರಾಕಾರ ಮಳೆ ಸುರಿದರೆ ಕಟ್ಟಡ ಕುಸಿಯುವುದು ಖಚಿತ.

ಜಿಲ್ಲಾಡಳಿತ ಹಾಗೂ ಸಂಬಂದಿಸಿದ ಇಲಾಖೆ ತಕ್ಷಣ ತುರ್ತು ಕ್ರಮ ಕೈಗೊಳ್ಳದಿದ್ದಿಲ್ಲಿ ಅಪಾಯಕ್ಕೆ ಆಹ್ವಾನ ನೀಡಿದಂತಾಗುತ್ತದೆ.

Translate »