ಕುರಿಗಳ ಕಳವು
ಮೈಸೂರು

ಕುರಿಗಳ ಕಳವು

June 15, 2018

ತಾಂಡವಪುರ: ನಂಜನಗೂಡು ತಾಲೂಕು ಬಂಚಹಳ್ಳಿ ಹುಂಡಿ ಗ್ರಾಮದಲ್ಲಿ ಬುಧವಾರ ಮಧ್ಯರಾತ್ರಿ ಸುಮಾರು 1.30ರ ಸಮಯದಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ 1 ಆಡು ಹಾಗೂ 1 ಕುರಿ ಕಳವಾಗಿರುವ ಘಟನೆ ವರದಿಯಾಗಿದೆ.

ಗ್ರಾಮದ ಅಕ್ಕಿ ಮಹದೇವ ಎಂಬುವರ ದನದ ಕೊಟ್ಟಿಗೆ ಯಲ್ಲಿ ಕಟ್ಟಿಹಾಕಿದ್ದ 2 ಕುರಿಗಳನ್ನು ಕಳ್ಳರು ಹೊತ್ತೊಯ್ದಿ ದ್ದಾರೆ. ಕಳವು ಮಾಡುವ ಮುಂಚೆ ಪಕ್ಕದ ಮನೆಯ ಮತ್ತು ಕುರಿ ಮಾಲೀಕನ ಮನೆಯ ಬಾಗಿಲ ಚಿಲಕವನ್ನು ಹಾಕಿ ಕುರಿಗಳನ್ನು ಹೊತ್ತೊಯ್ದಿದ್ದಾರೆ. ಇದೇ ರೀತಿ ಕಳೆದ 3 ತಿಂಗಳಿಂದ ಹಿಂದೆ ಇದೇ ಗ್ರಾಮದ ಪೈ||ಮರಿಗೌಡ ಎಂಬುವರ ಕುರಿಯನ್ನು ಸಹ ಕದ್ದೊಯ್ದಿದ್ದರು. ಇದರಿಂದ ಗ್ರಾಮದಲ್ಲಿ ಕುರಿ ಕಳ್ಳರ ಹಾವಳಿ ಹೆಚ್ಚಾಗಿರುವುದರಿಂದ ಗ್ರಾಮಸ್ಥರು, ಆತಂಕದಲ್ಲಿ ದ್ದಾರೆ.ಆದ್ದರಿಂದ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು, ರಾತ್ರಿ ಪಾಳಿಯಲ್ಲಿ ಪೊಲೀಸರನ್ನು ನಿಯೋಜಿಸಿ ಈ ಕುರಿ ಕಳ್ಳರನ್ನು ಹಿಡಿಯುವಂತೆ ಮನವಿ ಮಾಡಿದ್ದಾರೆ.

Translate »