ಪ್ರಸಾದ ದ್ವೈಮಾಸಿಕ ಲೇಖನ ಸ್ಪರ್ಧೆ
ಮೈಸೂರು

ಪ್ರಸಾದ ದ್ವೈಮಾಸಿಕ ಲೇಖನ ಸ್ಪರ್ಧೆ

June 15, 2018

ಮೈಸೂರು:  ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ ಜಯಂತಿ ಪ್ರಯುಕ್ತ 2018-19ನೇ ಸಾಲಿನ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಹಾಗೂ ಮಡಿಕೇರಿ ಜಿಲ್ಲೆಗಳ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಪ್ರಸ್ತುತ ಶಿಕ್ಷಣ ಪದ್ಧತಿಯಲ್ಲಿ -ನೈತಿಕ ಶಿಕ್ಷಣದ ಅವಶ್ಯಕತೆ’ ಕುರಿತು ಲೇಖನ ಸ್ಪರ್ಧೆ ಏರ್ಪಡಿಸಲಾಗಿದೆ. ಲೇಖನ ಸ್ವಂತದ್ದಾಗಿದ್ದು, 6 ರಿಂದ 8 ಪುಟಗಳಷ್ಟು ವಿಸ್ತಾರವಾಗಿ ರಬೇಕು. ಲೇಖನವನ್ನು ಜುಲೈ 7 ರೊಳಗೆ ನಿರ್ದೇಶಕರು, ಪ್ರಸಾದ ಲೇಖನ ಸ್ಪರ್ಧೆ, ಪ್ರಕಟಣಾ ವಿಭಾಗ, ಜೆಎಸ್‍ಎಸ್ ಮಹಾವಿದ್ಯಾಪೀಠ, ಶ್ರೀ ಶಿವರಾತ್ರಿ ರಾಜೇಂದ್ರ ವೃತ್ತ ಇಲ್ಲಿಗೆ ಕಳುಹಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ದೂ. 0821-2548211, 2548212 ಸಂಪರ್ಕಿಸಬಹುದು.

Translate »