ರೈತರ ಜೀವನಾಡಿ ಮನ್‍ಮುಲ್ ಬಲಪಡಿಸಿ
ಮಂಡ್ಯ

ರೈತರ ಜೀವನಾಡಿ ಮನ್‍ಮುಲ್ ಬಲಪಡಿಸಿ

June 17, 2018

ಕೆ.ಆರ್.ಪೇಟೆ: ತಾಲೂಕಿನ ಅಂಚನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡವನ್ನು ಮನ್‍ಮುಲ್ ನಿರ್ದೇಶಕ ಅಂಬರೀಶ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಗುಣಮಟ್ಟದ ಹಾಲು ಪೂರೈಸುವ ಮೂಲಕ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಗಟ್ಟಿಗೊಳಿಸಿ, ಜಿಲ್ಲೆಯ ರೈತರ ಜೀವನಾಡಿ ಮಂಡ್ಯ ಜಿಲ್ಲಾ ಹಾಲು ಒಕ್ಕೂಟವನ್ನು ಬಲಪಡಿಸಬೇಕು. ಹಾಲು ಉತ್ಪಾದಕರ ಸಂಘಗಳು ಮತ್ತು ಸೊಸೈಟಿಗಳು ರೈತರ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತಿವೆ. ಪ್ರತಿ ವಾರವೂ ರೈತರ ಮನೆ ಬಾಗಿಲಿಗೆ ಹಾಲಿನ ಹಣ ನೀಡುವ ಮೂಲಕ ರೈತರಿಗೆ ಹೆಚ್ಚು ನೆರವಾಗುತ್ತಿರುವ ಹಾಲು ಒಕ್ಕೂಟಕ್ಕೆ ಗುಣಮಟ್ಟದ ಹಾಲು ಪೂರೈಕೆ ಮಾಡಬೇಕೆಂದು ಎಂದು ಮನವಿ ಮಾಡಿದರು.

ಮನ್‍ಮುಲ್ ನಿರ್ದೇಶಕ ಡಾಲು ರವಿ ಸಂಘದ ನಾಮಫಲಕ ಅನಾವರಣಗೊಳಿಸಿ ಮಾತನಾಡಿ, ಸಹಕಾರ ಸಂಘಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ. ಹೀಗಾಗಿ ಸಂಘದಲ್ಲಿ ರಾಜಕೀಯ ಮಾಡದೇ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದರು.
ಅಂಚನಹಳ್ಳಿ ಹಾಲಿನ ಡೈರಿ ಅಧ್ಯಕ್ಷೆ ಮೀನಾಕ್ಷಿ ಅಧ್ಯಕ್ಷತೆ ವಹಿಸಿದ್ದರು. ಉಪ ವ್ಯವಸ್ಥಾಪಕ ಮರಿರಾಚಯ್ಯ, ಮಾರ್ಗದ ವಿಸ್ತರಣಾಧಿಕಾರಿ ಎನ್.ಎಸ್.ಜಗದೀಶ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸಂಯೋಜಕ ಸುಧೀರ್‍ಜೈನ್, ಸಂಘದ ಉಪಾಧ್ಯಕ್ಷೆ ಎಸ್.ಎಂ.ಸುಶೀಲ, ಕಾರ್ಯದರ್ಶಿ ಮಂಜುಳಾ, ನಿರ್ದೇಶಕರಾದ ದೇವೀರಮ್ಮ, ಮಹಾದೇವಮ್ಮ, ಲಲಿತಮ್ಮ, ಚೆನ್ನಮ್ಮ, ಸುಧಾಮಣಿ , ಲೀಲಾವತಿ, ಯೋಗಾಮಣಿ , ಅನಿತಾ, ಹಾಲು ಪರೀಕ್ಷಕಿ ಮಮತಾ, ವಸಂತ ಮತ್ತಿತರರು ಕಾರ್ಯಕ್ರಮದಲ್ಲಿದ್ದರು.

Translate »