ಮಹಿಳೆಯ ಚಿನ್ನದ ಸರ ಕಳ್ಳತನ
ಮಂಡ್ಯ

ಮಹಿಳೆಯ ಚಿನ್ನದ ಸರ ಕಳ್ಳತನ

July 12, 2018

ಕೆ.ಆರ್.ಪೇಟೆ:  ಸಿಗರೇಟ್ ಕೊಳ್ಳುವ ನೆಪದಲ್ಲಿ ಅಂಗಡಿಗೆ ಬಂದ ದುಷ್ಕರ್ಮಿಗಳು ಮಹಿಳೆಯೊಬ್ಬರ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಪಟ್ಟಣದ ಮುತ್ತುರಾಯಸ್ವಾಮಿ ಬಡಾವಣೆ ಯಲ್ಲಿ ಬುಧವಾರ ರಾತ್ರಿ ಸುಮಾರು 8.45ರ ಸಮಯದಲ್ಲಿ ನಡೆದಿದೆ.

ಬಡಾವಣೆಯ ಹೇಮಗಿರಿ ರಸ್ತೆ ಯಲ್ಲಿ ಅಂಗಡಿ ನಡೆಸುತ್ತಿದ್ದ ಶಿಕ್ಷಕ ಎಂ.ಎಸ್. ಮಹದೇವಪ್ಪ ಅವರ ಪತ್ನಿ ಜಗದಾಂಬ ಎಂಬುವರು ಚಿನ್ನದ ಸರ ಕಳೆದುಕೊಂಡ ವರಾಗಿದ್ದಾರೆ.

ಘಟನೆ ವಿವರ: ದುಷ್ಕರ್ಮಿಗಳಿಬ್ಬರ ಪೈಕಿ ಒಬ್ಬ ಸಿಗರೇಟ್ ಕೊಂಡು ಅಲ್ಲಿಯೇ ಸೇದುತ್ತಾ ಬೈಕ್ ಪಕ್ಕದಲ್ಲಿ ಮಾತಾಡುತ್ತಾ ನಿಂತಿದ್ದರು. ರಾತ್ರಿಯಾಯಿತೆಂದು ಜಗದಾಂಬ ಅವರು ಅಂಗಡಿಯ ಹೊರಗೆ ಇದ್ದ ಸಾಮಾನುಗಳನ್ನು ಒಳಗಡೆಗೆ ಜೋಡಿಸುತ್ತಿರುವ ಸಂದರ್ಭದಲ್ಲಿ ಅವರ ಕತ್ತಿನಲ್ಲಿದ್ದ ಸುಮಾರು 35 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಬೈಕ್ ಮೂಲಕ ಸಾದುಗೋನಹಳ್ಳಿ ಮಾರ್ಗವಾಗಿ ಪರಾರಿ ಯಾಗಿದ್ದಾರೆ.

ಘಟನೆಯ ವಿಷಯ ತಿಳಿ ಯುತ್ತಿದ್ದಂತೆಯೇ ಪಟ್ಟಣ ಪೊಲೀಸ್ ಠಾಣೆಯ ಸಬ್ ಇನ್‍ಸ್ಪೆಕ್ಟರ್ ಎಚ್.ಎಸ್. ವೆಂಕಟೇಶ್ ಭೇಟಿ ನೀಡಿ ಆರೋಪಿಗಳ ಚಹರೆಯನ್ನು ಪಡೆದು ತನಿಖೆ ಆರಂಭಿಸಿ ದ್ದಾರೆ. ಘಟನೆಯ ಸಂಬಂಧ ಸರ ಕಳೆದು ಕೊಂಡಿರುವ ಜಗದಾಂಬ ಮಹ ದೇವಪ್ಪ ಅವರು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Translate »