ಮಂಡ್ಯ: ತಾಲೂಕಿನ ಉಮ್ಮಡಹಳ್ಳಿ ಗ್ರಾಮದ ಹಾಲು ಉತ್ಪಾ ದಕರ ಸಹಕಾರ ಸಂಘದಲ್ಲಿ ನಿರ್ಮಿಸಿರುವ ಹಾಲು ಶೀತಲೀಕರಣ ಘಟಕವನ್ನು ಬುಧವಾರ ಮನ್‍ಮುಲ್ ಅಧ್ಯಕ್ಷ ಕದಲೂರು ರಾಮಕೃಷ್ಣ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಈಗಾ ಗಲೇ 190 ಬಿಎಂಸಿ ಕೇಂದ್ರಗಳನ್ನು ಸ್ಥಾಪಿಸ ಲಾಗಿದೆ. ಇನ್ನು 105 ಬಿಎಂಸಿ ಕೇಂದ್ರಗಳು ಆಗಬೇಕಿದ್ದು, ಒಟ್ಟು ಜಿಲ್ಲೆಯಲ್ಲಿ 200 ಬಿಎಂಸಿ ಕೇಂದ್ರಗಳು ಆರಂಭಿಸಲಾಗು ವುದು. ಎಲ್ಲವೂ ಪೂರ್ಣಗೊಂಡಲ್ಲಿ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಕ್ಯಾನ್‍ಮುಕ್ತ ಒಕ್ಕೂಟ ವಾಗಿ ಹೊರಹೊಮ್ಮಲಿದೆ ಎಂದು ಹೇಳಿದರು.
ಮನ್‍ಮುಲ್ ಕೇವಲ 3.50 ಲಕ್ಷ ಲೀಟರ್ ಹಾಲು ಸಂಗ್ರಹಿಸುವ ಸಾಮಥ್ರ್ಯವನ್ನು ಹೊಂದಿರುವ ಡೇರಿಯಾಗಿದೆ. ಜಿಲ್ಲೆಯಲ್ಲಿ ಸುಮಾರು 9 ಲಕ್ಷಕ್ಕೂ ಹೆಚ್ಚು ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಇಷ್ಟು ಪ್ರಮಾಣದ ಹಾಲನ್ನು ಸಂಸ್ಕರಿಸಲು ಸಾಧ್ಯವಾ ಗದ ಕಾರಣ ಹೆಚ್ಚು ಹೆಚ್ಚು ಬಿಎಂಸಿ ಕೇಂದ್ರ ಗಳನ್ನು ಸ್ಥಾಪಿಸಲಾಗುತ್ತಿದೆ. ಬಿಎಂಸಿ ಕೇಂದ್ರದಲ್ಲೇ ಹಾಲನ್ನು ಸಂಸ್ಕರಿಸಿ, ಶೀತಲೀ ಕರಣಗೊಳಿಸಿ ನಂತರ ಒಕ್ಕೂಟಕ್ಕೆ ಹಾಲನ್ನು ಕೊಂಡೊಯ್ಯಲಾಗುತ್ತದೆ ಎಂದು ವಿವರಿ ಸಿದರು. ಜಿಲ್ಲೆಯಲ್ಲಿ ಕಳೆದ ವರ್ಷ 60 ಸಾವಿರ ರಾಸುಗಳಿಗೆ ವಿಮಾ ಸೌಲಭ್ಯವನ್ನು ಒದಗಿಸಲಾಗಿತ್ತು. ಈ ವರ್ಷವೂ 60 ಸಾವಿರ ರಾಸುಗಳಿಗೆ ವಿಮಾ ಸೌಲಭ್ಯ ಒದಗಿಸುವ ಉದ್ದೇಶದಿಂದ ಈಗಾಗಲೇ ಒಕ್ಕೂಟದಿಂದ 6 ಕೋಟಿ ರೂ. ಹಣವನ್ನು ವಿಮಾ ಕಂಪೆನಿಗೆ ಜಮಾ ಮಾಡಲಾಗಿದೆ. ಪ್ರತಿಯೊಬ್ಬ ರೈತರೂ ಕಡ್ಡಾಯವಾಗಿ ತಮ್ಮ ರಾಸುಗಳಿಗೆ ವಿಮೆಯನ್ನು ಮಾಡಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.
ಉಮ್ಮಡಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕೇವಲ 24 ರಾಸು ಗಳಿಗೆ ಮಾತ್ರ ವಿಮೆ ಮಾಡಲಾಗಿದೆ. ಈ ಗ್ರಾಮದಲ್ಲಿ ಸುಮಾರು 535 ರಾಸುಗಳಿವೆ. ಎಲ್ಲ ರಾಸುಗಳಿಗೂ ವಿಮೆ ಮಾಡಿಸಿ, ಕೇವಲ 150 ರಿಂದ 200 ರೂ. ಪಾವತಿ ಮಾಡಿದಲ್ಲಿ ರಾಸುಗಳಿಗೆ ವಿಮಾ ಸೌಲಭ್ಯ ದೊರೆಯುತ್ತದೆ. ಒಕ್ಕೂಟದ ವತಿಯಿಂದ ಶೇ. 70ರಷ್ಟು ಹಣ ನೀಡಲಾಗುವುದು. ಉತ್ಪಾದಕರು ಶೇ. 30ರಷ್ಟು ಹಣ ಪಾವತಿ ಮಾಡಿದಲ್ಲಿ ರಾಸುಗಳಿಗೆ ವಿಮಾ ಸೌಲಭ್ಯ ಸಿಗುತ್ತದೆ. ಒಂದು ವೇಳೆ ಯಾವುದೇ ರಾಸು ಮೃತಪಟ್ಟಲ್ಲಿ ರೈತನ ಮನೆ ಬಾಗಿಲಿಗೆ 40 ರಿಂದ 50 ಸಾವಿರ ಹಣದ ಚೆಕ್ ಬಂದು ಬೀಳುತ್ತದೆ. ಇದನ್ನು ಉತ್ಪಾದಕರು ಸದುಪ ಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಉಮ್ಮಡಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ 25 ಲಕ್ಷಕ್ಕೂ ಹೆಚ್ಚು ಮೌಲ್ಯದ ಯಂತ್ರೋಪಕರಣಗಳನ್ನು ಅಳವಡಿಸಿದ್ದೇವೆ. ಕಟ್ಟಡಕ್ಕೆ ಅಗತ್ಯವಾದ ಅನುದಾನವನ್ನು ಒಕ್ಕೂಟದ ಹಾಗೂ ಹಾಲು ಮಹಾಮಂಡಳಿಯಿಂದ ನೀಡಲಾಗುತ್ತದೆ. ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು. ಉತ್ಪಾದಕರು ಎಲ್ಲ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಶುದ್ಧ ಹಾಲನ್ನು ಸರಬರಾಜು ಮಾಡಬೇಕು ಎಂದು ತಿಳಿಸಿದರು.
ಮನ್‍ಮುಲ್ ನಿರ್ದೇಶಕ ಎಸ್.ಪಿ. ಮಹೇಶ್ ಮಾತನಾಡಿ, ಹೈನುಗಾರಿಕೆ ಯಿಂದ ರೈತರ ಉಳಿವು ಸಾಧ್ಯ. ಉತ್ಪಾದ ಕರು ಗುಣಮಟ್ಟದ ಹಾಲನ್ನು ಡೈರಿಗೆ ಹಾಕುವಂತೆ ಸಲಹೆ ನೀಡಿದರು. ಕಾರ್ಯ ಕ್ರಮದಲ್ಲಿ ಮನ್‍ಮುಲ್ ನಿರ್ದೇಶಕರಾದ ಯು.ಸಿ. ಶಿವಕುಮಾರ್, ಬಿ.ಚಂದ್ರ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಸ್.ಶೇಖರ್, ಉಪಾಧ್ಯಕ್ಷ ಸಿದ್ದಪ್ಪ, ಉಪ ವ್ಯವಸ್ಥಾಪಕ ಎಂ.ಶ್ರೀನಿವಾಸರೆಡ್ಡಿ, ವಿಸ್ತರಣಾಧಿಕಾರಿಗಳಾದ ಅರ್ಚನಾ, ಶರತ್, ಗ್ರಾ.ಪಂ. ಅಧ್ಯಕ್ಷ ಯು.ಸಿ.ಶೇಖರ್ ಇದ್ದರು.