ಮದ್ಯಪಾನದಿಂದ ಸಂಸಾರದ ನೆಮ್ಮದಿ ಹಾಳು
ಮಂಡ್ಯ

ಮದ್ಯಪಾನದಿಂದ ಸಂಸಾರದ ನೆಮ್ಮದಿ ಹಾಳು

July 14, 2018

ಕೆ.ಆರ್.ಪೇಟೆ: ಮದ್ಯಪಾನದಿಂದ ಸಂಸಾರದ ನೆಮ್ಮದಿ ಹಾಳಾಗಲಿದ್ದು, ಹಣವೂ ವ್ಯರ್ಥವಾಗಲಿದೆ ಎಂದು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅಭಿಪ್ರಾಯಪಟ್ಟರು.

ತಾಲೂಕಿನ ಸಿಂಧುಘಟ್ಟ ಗ್ರಾಮದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಶ್ರೀಕ್ಷೇತ್ರ ಧರ್ಮ ಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಾಗೂ ಪ್ರಗತಿ ಬಂಧು ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಹಮ್ಮಿ ಕೊಂಡಿದ್ದ ರಾಜ್ಯಮಟ್ಟದ 1223ನೇ ಮದ್ಯವರ್ಜನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮದ್ಯಪಾನ, ಬೀಡಿ-ಸಿಗರೇಟು, ಗುಟ್ಕಾ, ಗಾಂಜಾ ಸೇರಿದಂತೆ ಮಾದಕ ವಸ್ತುಗಳಿಂದ ಪ್ರತಿಯೊಬ್ಬರೂ ದೂರವಿರಬೇಕು. ಸಮಾಜದಲ್ಲಿ ನಡೆಯುವ ಎಲ್ಲಾ ರೀತಿಯ ಸಮಾಜಘಾತುಕ ಕೃತ್ಯಗಳಿಗೆ ಮದ್ಯ ಸೇವನೆಯೇ ಮೂಲ ಕಾರಣ. ಧರ್ಮಸ್ಥಳ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ಅವರು ಅತ್ಯಂತ ಸರ್ವಶ್ರೇಷ್ಠ ಸೇವೆಯನ್ನು ನಾಡಿನಲ್ಲಿ ಕೈಗೊಂಡಿ ದ್ದಾರೆ. ಇಂತಹ ಶಿಬಿರ ಗಳಿಂದ ಅವರಿಗೆ ಯಾವುದೇ ಲಾಭವಿಲ್ಲ. ಆದರೆ ಸಮಾಜದ ಉದ್ಧಾರಕ್ಕಾಗಿ, ಬಡವರ ಕಲ್ಯಾಣಕ್ಕಾಗಿ ಮದ್ಯವರ್ಜನ ಶಿಬಿರಗಳನ್ನು ರಾಜ್ಯದಾದ್ಯಂತ ನಡೆಸುವ ಮೂಲಕ ಸಾವಿರಾರು ಕುಟುಂಬಗಳ ಕಣ್ಣೀರು ಒರೆಸುವ ಕೆಲಸ ಮಾಡುತ್ತಿರುವ ಶ್ರೀಗಳ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹೀಗಾಗಿ ಕುಡಿತಕ್ಕೆ ದಾಸರಾಗಿರುವವರು, ಮದ್ಯ ವ್ಯಸನಿಗಳು ಶಿಬಿರದ ಪ್ರಯೋಜನ ಪಡೆದು ಸಮಾಜದ ಮುಖ್ಯವಾಹಿನಿಗೆ ಬಂದು ಜೀವನ ನಡೆಸಬೇಕು. ಎಲ್ಲರೂ ಇಂದಿನಿಂದ ಒಂದು ವಾರ ಕಾಲ ನಡೆಯುವ ಶಿಬಿರದ ಸದುಪಯೋಗ ಪಡೆದು ಮದ್ಯಪಾನ ತ್ಯಜಿಸಿ ಉತ್ತಮ ಬದುಕು ಕಟ್ಟಿಕೊಳ್ಳಬೇಕು. ಅಲ್ಲದೇ ಮದ್ಯಪಾನದಿಂದ ವ್ಯಕ್ತಿಯ ಆರೋಗ್ಯ ಬಹುಬೇಗ ಕೆಡಲಿದ್ದು, ಪ್ರತಿಯೊಬ್ಬರೂ ಮದ್ಯ ಪಾನದಿಂದ ದೂರವಿದ್ದು, ಮದ್ಯ ಸೇವನೆಗೆ ಬಳಸುವ ಹಣವನ್ನು ತಮ್ಮ ಮಕ್ಕಳ ವಿದ್ಯಾ ಭ್ಯಾಸಕ್ಕೆ, ಕುಟುಂಬ ನಿರ್ವಹಣೆಗೆ ಬಳ ಸುವ ಮೂಲಕ ತಮ್ಮ ಕುಟುಂಬದ ನೆಮ್ಮದಿಗೆ ಕಾರಣರಾಗಬೇಕು ಎಂದರು.

ಸಿಂಧುಘಟ್ಟ ಗ್ರಾಪಂ ಅಧ್ಯಕ್ಷ ಚಿದಂಬರ್ ಕಾರ್ಯಕ್ರಮ ವನ್ನು ಜ್ಯೋತಿ ಬೆಳೆಗಿಸುವ ಮೂಲಕ ಉದ್ಘಾಟಿಸಿದರು. ಶಿಬಿರದ ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷ ಎಸ್.ಜಿ.ಕುಮಾರ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ವಿನಯ ಕುಮಾರ್ ಪ್ರಾಸ್ತಾ ವಿಕ ನುಡಿಗಳನ್ನಾಡಿದರು. ಮನ್‍ಮುಲ್ ನಿರ್ದೇಶಕ ಡಾಲು ರವಿ, ಮಂಡ್ಯ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಕೆ.ಎಸ್.ರಾಜೇಶ್, ಯೋಗಗುರು ಗೋಪಾಲ ಕೃಷ್ಣ ಅವದಾನಿ, ತಾಪಂ ಸದಸ್ಯ ಖಲೀಲ್‍ಬಾಬು, ಧರ್ಮ ಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ತಾಲೂಕು ಸಂಯೋಜಕ ಸುಧೀರ್‍ಜೈನ್, ಸಿಂಧುಘಟ್ಟ ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಎನ್.ರವಿ ಕುಮಾರ್, ರೈತ ಮುಖಂಡ ಮುದ್ದು ಕುಮಾರ್, ಕೃಷಿ ಅಧಿಕಾರಿ ನಿಂಗಪ್ಪ ಅಗಸರ್, ಮೇಲ್ವಿಚಾರಕರಾದ ರಾಜಪ್ಪ, ಗಿರೀಶ್, ಪ್ರಸಾದ್ ಕುಮಾರ್, ಸೇವಾ ಪ್ರತಿನಿಧಿಗಳಾದ ಪುಷ್ಪ, ಭಾಗ್ಯಮ್ಮ, ಲತಾ, ಮಣಿಯಮ್ಮ, ಸವಿತ, ರೂಪ, ಸುಧಾರಾಣಿ , ಮಂಜುಳ ಮತ್ತಿತರರಿದ್ದರು.

Translate »