ನಿಯಮಾನುಸಾರ ಅಗತ್ಯ ಕ್ರಮಕ್ಕೆ ಡಿಸಿ ಸೂಚನೆ
ಹಾಸನ

ನಿಯಮಾನುಸಾರ ಅಗತ್ಯ ಕ್ರಮಕ್ಕೆ ಡಿಸಿ ಸೂಚನೆ

July 14, 2018

ಅರಕಲಗೂಡು: ಪಟ್ಟಣದಲ್ಲಿಂದು ಸಾರ್ವಜನಿಕರ ಅಹವಾಲು ಆಲಿಸಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು, ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿ ಗಳಿಗೆ ಸೂಚನೆ ನೀಡಿದರು.

ಪಟ್ಟಣದ ಶಿಕ್ಷಕರ ಭವನದಲ್ಲಿ ಸುಮಾರು 4 ಗಂಟೆಗಳಿಗೂ ಅಧಿಕ ಕಾಲ 200ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದ ಜಿಲ್ಲಾಧಿಕಾರಿ, ಸರ್ವೇ, ಪೋಡಿ ದುರಸ್ತಿ, ಭೂ ಮಂಜೂರಾತಿ, ತಿದ್ದುಪಡಿ ಸೇರಿದಂತೆ ಹಲವರು ತಮ್ಮ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಸರಿಪಡಿಸಿಕೊಡುವಂತೆ ಸಲ್ಲಿಸಿದ ವೈಯಕ್ತಕ ಮನವಿಗಳನ್ನು ಆಲಿಸಿದರು.

ಆಶ್ರಯ ಮನೆ ಹಂಚಿಕೆ, ಸರ್ಕಾರಿ ಜಮೀನು ಒತ್ತುವರಿ ತೆರವು, ರಸ್ತೆ ದುರಸ್ತಿ ಸೇರಿದಂತೆ ಅರಕಲಗೂಡಿನಲ್ಲಿ ಪಹಣ ಸ್ವೀಕಾರಕ್ಕೆ ದಿನಗಟ್ಟಲೇ ಕಾಯಬೇಕಾಗಿದ್ದು, ಹೆಚ್ಚುವರಿ ಕೇಂದ್ರ ತೆರೆದು, ಆಧಾರ್ ಕಾರ್ಡ್ ವಿತರಣೆಗೂ ಕೇಂದ್ರ ತೆರೆಯು ವಂತೆ ಜನತೆಗೆ ಮನವಿ ಮಾಡಿದರು.

ಹುಚ್ಚನಕೊಪ್ಪಲು ಏತನೀರಾವರಿ ಯೋಜನೆ ಮತ್ತು ಅಡಿಕೆ ಬೊಮ್ಮನಹಳ್ಳಿ ಏತ ನೀರಾವರಿ ಯೋಜನೆಗಳಿಗೆ ಭೂಮಿ ಪರಿಹಾರ ವಿತರಣೆ ಸಮಸ್ಯೆ ಬಗೆಹರಿಸುವಂತೆ ಜಿಲ್ಲಾ ಪಂಚಾಯತಿ ಸದಸ್ಯೆ ರತ್ನಮ್ಮ ಲೋಕೇಶ್ ಮನವಿ ಸಲ್ಲಿಸಿದರು. ಅಂಗನವಾಡಿ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ದುರಸ್ತಿಪಡಿಸಿ ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸುವಂತೆ ಸಾರ್ವಜನಿಕರು ಒತ್ತಾಯಿಸಿದರು.

ಎಲ್ಲಾ ಮನವಿಗಳನ್ನು ಆಲಿಸಿದ ಜಿಲ್ಲಾಧಿಕಾರಿ, ಬಂದಿರುವ ಅರ್ಜಿಗಳಲ್ಲಿ ವಿವಾದರಹಿತವಾದ ಅರ್ಜಿಗಳನ್ನು ಆದಷ್ಟು ಶೀಘ್ರವೇ ಬಗೆಹರಿಸಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಉಪವಿಭಾಗಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಮಾತನಾಡಿ, ಹೆಚ್ಚಾಗಿ ಸರ್ವೇ ಕಾರ್ಯಕ್ಕೆ ಸಂಬಂಧಿಸಿದಂತೆ ಮನವಿಗಳು ಬಂದಿವೆ. ಏಕವ್ಯಕ್ತಿ ಕೋರಿಕೆ ದುರಸ್ತಿಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಒಂದೇ ಸರ್ವೇ ನಂಬರ್‍ನ ಎಲ್ಲರೂ ಒಟ್ಟಾಗಿ ಅರ್ಜಿ ಸಲ್ಲಿಸಿದಲ್ಲಿ ಸರ್ವೇ ಕಾರ್ಯ ಕೈಗೆತ್ತಿಕೊಳ್ಳ ಲಾಗುವುದು. ಉಳಿದಂತೆ ಸಭೆಯಲ್ಲಿ ಸಲ್ಲಿಕೆ ಯಾಗಿರುವ ಅಂತಹ ಸಮರ್ಪಕವಾದ ಅರ್ಜಿಗಳನ್ನು 7ದಿನಗಳ ಒಳಗಾಗಿ ಇತ್ಯರ್ಥ ಪಡಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಸಭೆಯಲ್ಲಿ ಭೂ ಭೂದಾಖಲೆಗಳ ಉಪ ನಿರ್ದೇಶಕ ಕೃಷ್ಣಕುಮಾರ್, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗಿಯ ನಿಯಂತ್ರಣಾಧಿಕಾರಿ ಯಶ್ವಂತ್ ತಹಶೀಲ್ದಾರ ರಾದ ನಂದೀಶ್, ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ.ಯಶ್ವಂತ್ ಮತ್ತಿತರರಿದ್ದರು.

Translate »