ಮಹಿಳಾ ಅಧಿಕಾರಿಗಳ ಜಗಳದಲ್ಲಿ ಮೈಸೂರು ಬಡವಾಯ್ತು… ರಾಜಕಾರಣ ಗಳಿಗೆ ಖುಷಿಯಾಯ್ತು…
ಬಿಚ್ಚು ನುಡಿ, ಮೈಸೂರು

ಮಹಿಳಾ ಅಧಿಕಾರಿಗಳ ಜಗಳದಲ್ಲಿ ಮೈಸೂರು ಬಡವಾಯ್ತು… ರಾಜಕಾರಣ ಗಳಿಗೆ ಖುಷಿಯಾಯ್ತು…

June 8, 2021

ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶಿಲ್ಪಾ ನಾಗ್ ಅವರು ಕಳೆದ ಗುರುವಾರ ಪತ್ರಿಕಾಗೋಷ್ಠಿಯೊಂದನ್ನು ಕರೆದು ಪಾಲಿಕೆಯ ಆಯುಕ್ತ ಸ್ಥಾನವಷ್ಟೇ ಅಲ್ಲದೆ ಐಎಎಸ್ ಹುದ್ದೆಗೂ ತಾವು ರಾಜೀನಾಮೆ ನೀಡುತ್ತಿರುವುದಾಗಿ ಘೋಷಿಸಿದರು! ಈ ಘಟನಾವಳಿಗಳು ತೀರಾ ನಾಟಕೀಯ ವೆಂದೆನಿಸಿದ್ದರಲ್ಲಿ ಯಾವ ಅಚ್ಚರಿಯೂ ಇಲ್ಲ.

ಮೈಸೂರು ಜಿಲ್ಲಾಧಿಕಾರಿ ರೋಹಿಣ ಸಿಂಧೂರಿ ಹಾಗೂ ಸ್ಥಳೀಯ ರಾಜಕೀಯ ಮುಖಂಡರುಗಳ ನಡುವೆ ಹಲವಾರು ದಿನಗಳಿಂದಲೂ ನಡೆಯುತ್ತಿದ್ದ ಕಿತ್ತಾಟ ಕೊನೆಗೂ ಈ ಅನಿರೀಕ್ಷಿತ ಬೆಳವಣ ಗೆಗೆ ಕಾರಣವಾಗುವಂತಾಗಿದೆ. ಅದೇನೇ ಇದ್ದರೂ ಪಾಲಿಕೆಯ ಆಯುಕ್ತೆ ಶಿಲ್ಪಾ ನಾಗ್ ಅವರು ಪೆÇ್ರೀಟೋ ಕಾಲಿನಂತೆ (ಶಿಷ್ಟಾಚಾರದಂತೆ) ಮುಖ್ಯ ಕಾರ್ಯದರ್ಶಿಗಳಿಗೆ ತಮ್ಮ ರಾಜೀ ನಾಮೆ ಪತ್ರ ನೀಡದೆ ಪತ್ರಿಕಾಗೋಷ್ಠಿ ಕರೆದು, ಘೋಷಿಸಿದ್ದೇಕೆ?

ಜಿಲ್ಲಾಧಿಕಾರಿಯಿಂದ ಅವರಿಗೆ ಕಿರುಕುಳ ಉಂಟಾಗಿದ್ದು ನಿಜವಾಗಿದ್ದೇ ಆದಲ್ಲಿ ಅವರು ಮೇಲಧಿಕಾರಿಗಳ ಗಮನಕ್ಕೆ ತಂದು ದೂರನ್ನೇಕೆ ದಾಖಲಿಸಲಿಲ್ಲ? 18-ಪುಟಗಳಷ್ಟು ದೀರ್ಘ ವಾದ “ಕೈಬರಹದ” ರಾಜೀನಾಮೆ ಪತ್ರ ಬರೆಯುವ ಅಗತ್ಯವೇ ನಿತ್ತು? ವೃತ್ತಿಪರ ಐಎಎಸ್ ಅಧಿಕಾರಿಯೊಬ್ಬರು ತಮ್ಮ ರಾಜೀ ನಾಮೆ ಪತ್ರದಲ್ಲಿ ಕೆಲವೊಂದೆಡೆ ಪದಗಳನ್ನು ಹೊಡೆದುಹಾಕಿ ತಿದ್ದುಪಡಿ ಮಾಡಿರುವುದು ಅಚ್ಚರಿ ತರುವ ಸಂಗತಿಯಲ್ಲವೇ? ಇದಿಷ್ಟೇ ಸಾಲದೆಂಬಂತೆ ಅವರ `ಅಧಿಕೃತ’ ರಾಜೀನಾಮೆ ಪತ್ರ ಇನ್ನೂ ಮುಖ್ಯ ಕಾರ್ಯದರ್ಶಿಯವರಿಗೆ ತಲುಪಿಯೇ ಇಲ್ಲ ಎಂಬ ಅಂಶ ನಿಜಕ್ಕೂ ಅಚ್ಚರಿ ತರುವಂತಿದೆ!

ಶಿಲ್ಪಾನಾಗ್ ರಾಜೀನಾಮೆ ನೀಡಬೇಕೆಂದು ನಿಜವಾಗಿಯೂ ಗಂಭೀರವಾಗಿ ಯೋಚಿಸಿ, ತೀರ್ಮಾನಿಸಿಬಿಟ್ಟಿದ್ದರೇ? ಅಥವಾ ಅದು ಕೇವಲ ಕ್ಷಣ ಕ ಭಾವನಾತ್ಮಕ ನಿರ್ಣಯವಷ್ಟೇ ಆಗಿತ್ತೇ? ಎಲ್ಲಕ್ಕಿಂತ ಮುಖ್ಯವಾಗಿ ಅವರು ರಾಜೀನಾಮೆ ನೀಡಲು ಜಿಲ್ಲಾಧಿಕಾರಿ ವರ್ತನೆಯೊಂದೇ ಕಾರಣವೇ?

ಪ್ರತಿಯೊಬ್ಬ ವ್ಯಕ್ತಿಗೂ ಸ್ವಾಭಿಮಾನ ಎಂಬುದೊಂದು ಇದ್ದೇ ಇರುತ್ತದೆ. ಅಲ್ಲದೆ ತಾಳ್ಮೆಗೂ ಒಂದು ಮಿತಿ ಇರುವುದು ಸಹಜವೂ ಹೌದು. ಆದರೆ ಅವರು ರಾಜೀನಾಮೆ ನೀಡುವಷ್ಟು ಮಟ್ಟಕ್ಕೆ ಪರಿಸ್ಥಿತಿ ಬಿಗಡಾಯಿಸಲು ರೋಹಿಣ ಸಿಂಧೂರಿಯೊಬ್ಬರೇ ಕಾರಣರಾದರೇ? ಅಥವಾ ಶಿಲ್ಪಾನಾಗ್ ಅವರನ್ನು ರಾಜಕೀಯ ಮುಖಂಡರುಗಳು `ದಾಳ’ವಾಗಿ ಬಳಸಿಕೊಂಡು ಅವರು ಈ ಭಾವೋದ್ವೇಗದ ನಿರ್ಣಯ ತೆಗೆದುಕೊಳ್ಳುವಂತೆ ಮಾಡಿಬಿಟ್ಟರೇ?

ರೋಹಿಣ ಸಿಂಧೂರಿ ಮೈಸೂರಿಗೆ ವರ್ಗವಾಗಿ ಬಂದಾಗಿ ನಿಂದಲೂ ರಾಜಕೀಯ ಮುಖಂಡರು ಅವರ ಬಗ್ಗೆ ಆಗಾಗ್ಗೆ ಒಂದಿಲ್ಲೊಂದು ರೀತಿಯಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದಾರೆ. ಅವರುಗಳೆಷ್ಟೇ ಕಿಡಿಕಾರುತ್ತಿದ್ದರೂ ರೋಹಿಣ ಸಿಂಧೂರಿ ತಮ್ಮ ಈ ಹುದ್ದೆಯಲ್ಲೇ ಮುಂದುವರಿಯುವಲ್ಲಿ ಯಶಸ್ಸು ಕಂಡಿದ್ದರು. ಬಹುಶಃ ಈ ಕಾರಣಕ್ಕಾಗಿಯೇ ರಾಜ ಕೀಯ ಮುಖಂಡರು ಸಂಚು ಹೂಡಿ ಅವರಿಗಿಂತ ಕಿರಿಯ ಐಎಎಸ್ ಅಧಿಕಾರಿಯಾದ ಶಿಲ್ಪಾನಾಗ್ ಅವರನ್ನು ನೆಪವೊಂದನ್ನಿಟ್ಟು ಕೊಂಡು ದಾಳವಾಗಿ ಬಳಸಿಕೊಂಡಿರಬಹುದೆಂಬ ಅನು ಮಾನ ಸಾರ್ವಜನಿಕ ವಲಯದಲ್ಲೇ ವ್ಯಕ್ತವಾಗುತ್ತಿದೆ.

ಕಳೆದ ತಿಂಗಳು ಜಿಲ್ಲೆಯಲ್ಲಿ ನಡೆದ ಹಲವು ಪ್ರಮುಖ ಕಾರ್ಯಕ್ರಮಗಳು ಹಾಗೂ ಕೋವಿಡ್ ಸಭೆಗಳಲ್ಲಿ ಜಿಲ್ಲಾಧಿ ಕಾರಿ ಗೈರುಹಾಜರಿ ಎದ್ದು ಕಾಣುವಂತಿತ್ತು. ಬದಲಿಗೆ ಪಾಲಿಕೆ ಆಯುಕ್ತೆಯನ್ನಷ್ಟೇ ಆಹ್ವಾನಿಸಲಾಗುತ್ತಿತ್ತು. ಆ ಬಳಿಕ ರಾಜ ಕೀಯ ಮುಖಂಡರು ಟಾಸ್ಕ್‍ಫೆÇೀರ್ಸ್ ರಚಿಸಿದಾಗಲೂ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರನ್ನಷ್ಟೇ ಆಹ್ವಾನಿಸಿ, ಜಿಲ್ಲಾಧಿಕಾರಿಯನ್ನು ದೂರವಿಟ್ಟಿದ್ದು ಕೂಡ ಎದ್ದು ಕಾಣುವಂತಿತ್ತು.
ಕಿರಿಯ ಅಧಿಕಾರಿ ಶಿಲ್ಪಾನಾಗ್ ಹಾಗೂ ಜಿಲ್ಲಾಧಿಕಾರಿ ರೋಹಿಣ ಸಿಂಧೂರಿ ನಡುವೆ ಏನೋ ಜಟಾಪಟಿ ನಡೆದಿರ ಬೇಕು. ಈ ಕಾರಣದಿಂದಲೇ ಈ ಇಬ್ಬರೂ ಐಎಎಸ್ ಅಧಿಕಾರಿಗಳ ನಡುವೆ ಅಪನಂಬಿಕೆಯುಂಟಾಗಿ ಈ ನಾಟಕೀಯ ಬೆಳವಣ ಗೆಗೆ ಕಾರಣವಾಯಿತು ಎಂದೆನಿಸುತ್ತದೆ.

ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ಈ ಇಬ್ಬರು ಐಎಎಸ್ ಅಧಿಕಾರಿಗಳನ್ನು ತಮ್ಮ `ರಾಜಕೀಯ ಚದುರಂಗ ದಾಟ’ದಲ್ಲಿ ದಾಳವಾಗಿಸಿಕೊಂಡ ನಮ್ಮ ರಾಜಕಾರಣ ಗಳನ್ನು ಎಷ್ಟು ಅಭಿನಂದಿಸಿದರೂ ಸಾಲದು. ಕಳೆದ ತಿಂಗಳವರೆಗೂ ಪರಸ್ಪರ ಸಾಮರಸ್ಯದಿಂದಲೇ ಕೆಲಸ ಮಾಡುತ್ತಾ ಬಂದಿದ್ದ ರೋಹಿಣ ಹಾಗೂ ಶಿಲ್ಪಾ ಅವರ ನಡುವೆ ಈಗ ದೊಡ್ಡ ಕಂದಕ ಉಂಟಾಗಿದೆ. ಜಿಲ್ಲಾಧಿಕಾರಿ ವರ್ಗಾವಣೆ ಮಾಡಿಸಲು ರಾಜಕಾರಣ ಗಳೀಗ ತೆರೆಮರೆ ಹರಸಾಹಸ ಮಾಡುತ್ತಿದ್ದಾರೆ.

ರೋಹಿಣ ಸಿಂಧೂರಿ ವರ್ಗವಾಗಿ ಹೋಗಲಿ ಎಂದು ಹಲವು ರಾಜಕೀಯ ಮುಖಂಡರು ಆಶಿಸುತ್ತಿದ್ದಾರೆ ನಿಜ. ಆದರೆ ಏಕೆ? ಯಾವ ಕಾರಣಕ್ಕೆ? ಇದನ್ನು ಯಾರೂ ಬಾಯಿ ಬಿಟ್ಟು ಹೇಳುತ್ತಿಲ್ಲ.

ಕುತೂಹಲಕಾರಿ ಸಂಗತಿಯೆಂದರೆ, ಚಾಮರಾಜನಗರದಲ್ಲಿ ಕೋವಿಡ್-19 ಸೋಂಕಿತರಲ್ಲಿ 24 ಮಂದಿ ಆಮ್ಲಜನಕ ಕೊರತೆ ಯಿಂದ ಸಾವನ್ನಪ್ಪಿದರೂ ಅಲ್ಲಿನ ಯಾವುದೇ ಅಧಿಕಾರಿ ಯನ್ನು ಅಮಾನತು ಮಾಡುವುದಿರಲಿ, ಎತ್ತಂಗಡಿ ಮಾಡು ವಂತೆಯೂ ಈ ಯಾವ ರಾಜಕೀಯ ನಾಯಕರುಗಳೂ ಒತ್ತಾಯಿಸಲಿಲ್ಲ. ಆದರೆ ಮೈಸೂರಿನ ಜಿಲ್ಲಾಧಿಕಾರಿಯವರು ಮಾತ್ರ ಹೊರಹೋದರೆ ಸಾಕು ಎಂಬಂತೆ ನಡೆದು ಕೊಳ್ಳುತ್ತಿದ್ದಾರೆ. ಯಾಕಿರಬಹುದು?ಈ ಕೋವಿಡ್ ಪಿಡುಗಿನ ಭೀಕರ 2ನೇ ಅಲೆಯಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ಇಂಥ ಸಂಕಷ್ಟದ ಸಂದರ್ಭ ದಲ್ಲೇ ಮೈಸೂರು ಜಿಲ್ಲಾಧಿಕಾರಿ ವರ್ಗಾವಣೆ ಏಕಾಗಬೇಕು? ಭ್ರಷ್ಟಾಚಾರ ನಡೆದಿದೆಯೇ? ಈಜುಕೊಳ ಪ್ರಕರಣವೇ? ಆ ಕುರಿತು ತನಿಖೆ ಪ್ರಾರಂಭವಾಗಿದೆಯಲ್ಲ. ಅದು ಕೆಲವೇ ವಾರಗಳಲ್ಲಿ ಪೂರ್ಣಗೊಂಡು ಜಿಲ್ಲಾಧಿಕಾರಿ ತಪ್ಪಿತಸ್ಥರೆಂದು ಸಾಬೀತಾದರೆ ಆಗ ಸೂಕ್ತ ಕ್ರಮ ಕೈಗೊಳ್ಳಬಹುದಲ್ಲ. ಅಲ್ಲಿಯವರೆಗೂ ಕಾಯಲು ಏಕೆ ಸಾಧ್ಯವಿಲ್ಲ?

ಕರ್ತವ್ಯಲೋಪ ಎಸಗಿದರೇ? ಚಾಮರಾಜನಗರ ದುರಂತ ಪ್ರಕರಣವೇ? ಅದು ಬಿಡಿ, ಅದರಲ್ಲಿ ಪ್ರಾಥಮಿಕ ತನಿಖೆ ನಡೆಸಿದ ನ್ಯಾಯಾಧೀಶರೇ ಕ್ಲೀನ್ ಚಿಟ್ ನೀಡಿದ್ದಾರೆ. ಅದರ ತನಿಖೆ ಮುಂದುವರೆದಿದೆ. ಮುಂದೆ ಏನಾಗುತ್ತೋ ಕಾಯೋಣ. ಇನ್ನಾವ ತಪ್ಪನ್ನೆಸಗಿದರು? ಆ ವಿವರವನ್ನಾದರೂ ಸಾರ್ವ ಜನಿಕರ ಮುಂದೆ ಇಡಬಹುದಲ್ಲವೇ? ತಪ್ಪಾಗಿದ್ದಲ್ಲಿ ಸೂಕ್ತ ಕ್ರಮ ಕೈಗೊಂಡರಾಯಿತು. ಅಲ್ಲಿಯವರೆಗೂ ಅವರು ತಮ್ಮ ಹುದ್ದೆಯಲ್ಲಿ ಮುಂದುವರಿಯಲಿ ಬಿಡಿ.

ದುರದೃಷ್ಟವಶಾತ್, ಜಿಲ್ಲಾಧಿಕಾರಿ ರೋಹಿಣ ಅವರ ವಿರುದ್ಧ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಮಾಡಿರುವ ಆರೋಪಗಳು ಕೂಡ ಭಾವನಾತ್ಮಕ ಮಾತುಗಳಂತಿವೆಯೇ ಹೊರತು, ಅವರ ಪತ್ರದಲ್ಲಿ ಯಾವುದೇ ನಿರ್ದಿಷ್ಟ ಕಾರಣಗಳ ಪ್ರಸ್ತಾಪವೇ ಇಲ್ಲ.

`ಮೈಸೂರಿನವರ ಬಗ್ಗೆ ಹೆಮ್ಮೆಪಡುತ್ತೇನೆ’ ಎಂದು ಶಿಲ್ಪಾ ನಾಗ್ ಹೇಳಿಕೆ ನೀಡಿದ್ದಾರಾದರೂ ನಮ್ಮನ್ನು ಈಗ ನಡು ನೀರಿನಲ್ಲಿ ಕೈಬಿಟ್ಟು ಹೋಗುತ್ತಿದ್ದಾರೆ ಎಂದೆನಿಸುತ್ತದೆ. ಮುಂಬ ರಲಿರುವ ಈ ಸಾಂಕ್ರಾಮಿಕದ 3ನೆಯ ಅಲೆ ಮಕ್ಕಳಿಗೆ ಸಾಕಷ್ಟು ಅಪಾಯಕಾರಿಯಾಗಿರಲಿದೆ ಎಂದು ತಜ್ಞರು ಮುನ್ನೆಚ್ಚರಿಕೆ ನೀಡಿದ್ದಾರೆ. ಇಂತಹ ಸಂಕಷ್ಟ ಸಂದರ್ಭದಲ್ಲಿ ರಾಜೀನಾಮೆ ನೀಡಿ ಹೊರ ಹೋಗಲು ಮುಂದಾಗಿದ್ದಾರೆ ಎಂಬುದೇ ಬೇಸರದ ಸಂಗತಿ.

ರೋಹಿಣ ಸಿಂಧೂರಿ ಅವರನ್ನಂತೂ “ಮಹಾರಾಣ ,” “ಮಾಡೆಲ್” ಮುಂತಾದ ಪದಗಳನ್ನು ಬಳಸಿ ಪದೇ ಪದೆ ಸಾರ್ವಜನಿಕವಾಗಿ ಅಪಹಾಸ್ಯ ಮಾಡಲಾಯಿತು. ಪಾರಂಪ ರಿಕ ಕಟ್ಟಡ ಹಾಳು ಮಾಡಿದರು ಎಂದು ಆರೋಪಿಸಿದರು. ಸಭೆ-ಸಮಾರಂಭಗಳಲ್ಲಿ ಏರುದನಿಯಲ್ಲಿ ಅವರ ವಿರುದ್ಧ ಬೊಬ್ಬಿರಿದರು. ಕರ್ತವ್ಯಲೋಪ ಎಸಗಿದ್ದಾರೆಂದು ಪತ್ರಿಕಾ ಗೋಷ್ಠಿ ಕರೆದು ಆರೋಪ ಮಾಡಿದ್ದಷ್ಟೇ ಅಲ್ಲದೆ ಮುಖ್ಯ ಮಂತ್ರಿಗೂ ದೂರು ನೀಡಲಾಯಿತು. ಇಷ್ಟೆಲ್ಲಾ ಆದರೂ ರೋಹಿಣ ಸಿಂಧೂರಿಯವರು ಹೆದರಿ ಪಲಾಯನ ಮಾಡ ಲಿಲ್ಲ, ರಾಜೀನಾಮೆ ನೀಡಲಿಲ್ಲ.

ತಮ್ಮ ವಿರುದ್ಧದ ಆರೋಪಗಳಿಗೆ ಪ್ರತಿಯಾಗಿ ಪತ್ರಿಕಾ ಗೋಷ್ಠಿ ಕರೆದು ರಾಜಕಾರಣ ಗಳ ವಿರುದ್ಧ ಪ್ರತಿ ಆರೋಪ ಮಾಡಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ರಾಜಕೀಯ ಹಸ್ತಕ್ಷೇಪದ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆಯುವ ಗೋಜಿಗೂ ಹೋಗಲಿಲ್ಲ, ರಾಜೀನಾಮೆಯನ್ನೂ ನೀಡಲಿಲ್ಲ. ಬದಲಿಗೆ `ಜುಲೈ 1 ರೊಳಗೆ ಮೈಸೂರನ್ನು ಕೋವಿಡ್-ಮುಕ್ತ ಜಿಲ್ಲೆಯನ್ನಾಗಿ ಮಾಡೋಣ, ಎಲ್ಲರೂ ಕೈಜೋಡಿಸಿ’ ಎಂದು ಮನವಿ ಮಾಡಿ, ಕರ್ತವ್ಯನಿರತರಾದರು.

ಅದೇ ಇವರ ಸ್ಥಾನದಲ್ಲಿ ಶಿಲ್ಪಾನಾಗ್ ಇದ್ದಿದ್ದರೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದರು ಎಂದು ಯೋಚಿಸಿದರೇ ಅಚ್ಚರಿಯಾಗುತ್ತದೆ!

ಈ ಇಬ್ಬರೂ ಅಧಿಕಾರಿಗಳೊಂದಿಗೆ ಕೆಲಸ ಮಾಡಿದ ವ್ಯಕ್ತಿಗಳನ್ನು ಮಾತನಾಡಿಸಿದಾಗ `ಶಿಲ್ಪಾನಾಗ್ ಅವರನ್ನು ಕಾಣಲು ಏನೂ ಕಷ್ಟವಾಗದು, ಆದರೆ ರೋಹಿಣ ಅವರ ಬಗ್ಗೆ ಇದೇ ಮಾತನ್ನು ಹೇಳಲಾಗದು’ ಎಂದು ಅಭಿಪ್ರಾಯ ತಿಳಿಸಿದರು. ಆದರೆ ಪ್ರತಿ ಯೊಬ್ಬ ಅಧಿಕಾರಿಯೂ ತಮ್ಮದೇ ಆದ ಶೈಲಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ ಎಂಬುದನ್ನು ನಾವು ಗಮನಿಸಬೇಕಿದೆ.

ನಿಜ, ಐಎಎಸ್ ಅಧಿಕಾರಿಗಳು ಎಲ್ಲರೊಂದಿಗೂ ಹೊಂದಿ ಕೊಂಡು ತಮ್ಮ ಕೆಲಸ ನಿರ್ವಹಿಸಬೇಕು. ಯಾವುದೇ ಸಹಜ, ಸಾಮಾನ್ಯ ಸನ್ನಿವೇಶವಾದರೆ ಈ ಮಾತು ಸಲ್ಲುತ್ತದೆ. ಆದರೆ ನಮಗೀಗ ಎದುರಾಗಿರುವುದು ಇಂತಹ ಸರ್ವೇ ಸಾಮಾನ್ಯ ವಾದ ಸನ್ನಿವೇಶವೇನಲ್ಲ. ಈ ಭೀಕರ ಕೋವಿಡ್ ಸಾಂಕ್ರಾಮಿಕ ವನ್ನು ಸಮರ್ಪಕವಾಗಿ ಎದುರಿಸಲು ದೃಢವಾಗಿ ಮುಂದೆ ನಿಂತು ಸಮರ್ಥವಾಗಿ ಹೋರಾಡಿ ಪರಿಸ್ಥಿತಿಯನ್ನು ನಿಭಾ ಯಿಸಬಲ್ಲಂತಹವರ ಅಗತ್ಯ. ಪ್ರತಿಕೂಲ ಸಂದರ್ಭವೆಂದು ಓಡಿಹೋಗುವವರಲ್ಲ.ಹೀಗಾಗಿ ರಾಜಕಾರಣ ಗಳ ದಾಳವಾಗದೆ ಶಿಲ್ಪಾ ನಾಗ್ ಹಾಗೂ ರೋಹಿಣ ಸಿಂಧೂರಿ ಈ ಇಬ್ಬರೂ ತಮ್ಮ ತಮ್ಮ ಭಿನ್ನಾಭಿಪ್ರಾಯಗಳನ್ನು ತೊಡೆದು ಹಾಕಿ ತಮ್ಮ ಕರ್ತವ್ಯದತ್ತ ಕೂಡಲೇ ಗಮನಹರಿಸಲಿ ಎಂದು ಆಶಿಸೋಣ.

ಕೊರೊನಾ 3ನೆಯ ಅಲೆ ಮಕ್ಕಳ ಮೇಲೆ ಭೀಕರ ಪರಿಣಾಮ ಬೀರಲಿದೆ ಎಂಬುದು ನಿಜವೇ ಆದಲ್ಲಿ ಅಂತಹ ಸನ್ನಿವೇಶವನ್ನು ಎದುರಿ ಸಲು ನಮಗೆ ಸಂವೇದನಾಶೀಲ, ಸಾಧಿಸುವ ಛಲವುಳ್ಳ ಇಂತಹ ದಕ್ಷ ಮಹಿಳಾ ಅಧಿಕಾರಿಗಳೇ ಅತ್ಯಂತ ಅಗತ್ಯವಾಗಿ ಬೇಕಿದೆ.

ಸದ್ಯಕ್ಕೆ ಮೈಸೂರಿನಲ್ಲಿ ಆಗುತ್ತಿರುವ ಈ ಎಲ್ಲ ಘಟನೆಗಳೂ ನಮ್ಮೀ ನಗರದ ಮೇಲೆ ದೀರ್ಘಕಾಲೀನ ಪರಿಣಾಮ ಬೀರಲಿವೆ. ಹೊಸ ಜಿಲ್ಲಾಧಿಕಾರಿ ಬಂದರೂ ಅವರು ಇಲ್ಲಿನ `ಹಿತಾಸಕ್ತಿ’ಯ ರಾಜಕಾರಣ ಗಳನ್ನು ನಿಭಾಯಿಸಲು ಸಾಧ್ಯ ವಾಗಲಿದೆಯೇ? ಎಂದು ಅನುಮಾನ ಮೂಡುವಂತಾಗಿದೆ. ಮೇಲಾಗಿ ಈ ರಾಜಕಾರಣ ಗಳೂ ಕೂಡ ತಮ್ಮ ತಾಳಕ್ಕೆ ತಕ್ಕಂತೆ ಕುಣ ಯುವಂಥ ಅಧಿಕಾರಿಗಳೇ ಇರಲಿ ಎಂದು ಬಯಸುತ್ತಾರೆ. ಏಕೆಂದು ಎಲ್ಲರಿಗೂ ಗೊತ್ತೇ ಇದೆ.

ಹತ್ತು ಪಥದ ಮೈಸೂರು-ಬೆಂಗಳೂರು ವಿಶ್ವದರ್ಜೆಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸದ್ಯದಲ್ಲೇ ಮುಗಿಯಲಿದೆ. ಐದು ಹೊಸ ಬೃಹತ್ ಕೈಗಾರಿಕೆಗಳು ಜಿಲ್ಲೆಯಲ್ಲಿ ಆರಂಭ ಗೊಳ್ಳಲಿದ್ದು, ಐಟಿ ಕ್ಷೇತ್ರದ ವೃತ್ತಿಪರರು ಹೆಚ್ಚಿನ ಸಂಖ್ಯೆಯಲ್ಲಿ ಮೈಸೂರಿನಲ್ಲಿ ನೆಲೆ ನಿಲ್ಲಲು ಮುಂದಾಗಲಿದ್ದಾರೆ. ಕೋವಿಡ್ ಸಾಂಕ್ರಾಮಿಕ ತಹಬಂದಿಗೆ ಬಂದ ಕೂಡಲೇ ಈ ಎಲ್ಲ ಕಾರಣಗಳಿಂದಾಗಿ ಮೈಸೂರು ನಗರ-ಜಿಲ್ಲೆಯ ರಿಯಲ್ ಎಸ್ಟೇಟ್ ವಹಿವಾಟೂ ಉತ್ತುಂಗಕ್ಕೇರಲಿದೆ.

ಈ ಪರಿಸ್ಥಿತಿಯ `ಸಂಪೂರ್ಣ ಲಾಭ’ ಪಡೆಯಲು ಭೂ ಮಾಫಿಯಾ ಈಗಾಗಲೇ ಸಾಕಷ್ಟು ಸಜ್ಜಾಗಿದ್ದು, ರಿಂಗ್ ರಸ್ತೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಹೊಂಚುಹಾಕಿ ನಿಂತಿದೆ. ಸ್ಥಳ ಸಮೀಕ್ಷೆಯಿಂದ ಮೊದಲ್ಗೊಂಡು ಖಾತೆ ಪರಿವರ್ತನೆಯವರೆಗಿನ ಎಲ್ಲ ಕಡತಗಳನ್ನೂ ನಿಭಾಯಿಸುವ ಛಾತಿ ಇರುವವರೇ ಆ ಸ್ಥಾನಕ್ಕೆ ಅಗತ್ಯ. ಮುಂಬರುವ ಹೊಸ ಜಿಲ್ಲಾಧಿಕಾರಿಗೆ ಇಲ್ಲಿನ ತಿಮಿಂಗಿಲಗಳನ್ನು ಕಟ್ಟಿ ಹಾಕಬಲ್ಲ ಶಕ್ತಿ ಇರಲಿದೆಯೇ? ಆ ಭಗವಂತ ಅವರಿಗೆ ಅಂತಹ ಶಕ್ತಿಯನ್ನು ನೀಡಲೆಂದು ನಾವೆಲ್ಲರೂ ಪ್ರಾರ್ಥಿಸೋಣ.

ಅಡಿ ಟಿಪ್ಪಣ : ಸಿದ್ಧರಾಮಯ್ಯ ಅವರು ಈಗ ಮುಖ್ಯ ಮಂತ್ರಿಗಳಾಗಿ ಇದ್ದಿದ್ದರೆ ಈ ಸಂದರ್ಭವನ್ನು ಇನ್ನಷ್ಟು ಸಮರ್ಥ ವಾಗಿ ನಿಭಾಯಿಸುತ್ತಿದ್ದರೇನೋ ಎಂದು ನನಗೆ ಅನ್ನಿಸುತ್ತಿದೆ.

ಸಿದ್ಧರಾಮಯ್ಯನವರನ್ನೇ ನಮ್ಮ ಸಿಎಂ ಆಗಿ ಮಾಡಿದಲ್ಲಿ ಆಗುವ ಪ್ರಯೋಜನಗಳೇನು ಎಂದು ನಾನು ಇದೇ ಅಂಕಣ ದಲ್ಲಿ 2013 ರಲ್ಲಿ ಬರೆದಿದ್ದು ನಿಮಗೆ ನೆನಪಿರಬಹುದು. ಆಗ ನಾನು ಬರೆದಿದ್ದ ಪ್ರಮುಖ ಅಂಶಗಳಿವು. “ಮೊದಲನೆಯದಾಗಿ ಅಧಿಕಾರಶಾಹಿಯನ್ನು ಸಮರ್ಥವಾಗಿ ನಿಭಾಯಿಸುವ ಛಾತಿ ಸಿದ್ಧರಾಮಯ್ಯ ಅವರಿಗಿದೆ. ಅಧಿಕಾರಿ ವರ್ಗದ ಕೆಲ ಮಂದಿಯಂತೂ ಅವರನ್ನು ಕಂಡರೆ ನಡುಗಿ ಹೋಗುತ್ತಾರೆಂಬ ಮಾತಿದೆ. ಹಾಗಾಗಿಯೇ ಹಲವಾರು ಅಧಿಕಾರಿಗಳು ಕಳೆದ ಚುನಾವಣೆಯ ಸಮಯದಲ್ಲಿ ಸಿದ್ಧರಾಮಯ್ಯ ಅವರನ್ನು ಸೋಲಿಸಲೇಬೇಕೆಂದು ಪಣ ತೊಟ್ಟು ವಿರೋಧ ಪಕ್ಷಕ್ಕೆ ಅಪಾರ ಪ್ರಮಾಣದ ಹಣ ನೀಡಿದ್ದ ರೆಂಬ ವದಂತಿಯೂ ಆಗ ಸಾಕಷ್ಟು ಹರಿದಾಡಿತ್ತು. ಮತ್ತೊಮ್ಮೆ ಅವರೇ ಅಧಿಕಾರಕ್ಕೆ ಬಂದರೆ ಸಮರ್ಥ ಅಧಿಕಾರಿಗಳಿಗೆ ಕೆಲಸ ಮಾಡಲು ಸಾಕಷ್ಟು ಅವಕಾಶ ದೊರೆಯಲಿದೆ.’’

ಈಗಲೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಗಳಾಗಿದ್ದಿದ್ದರೆ ನಮ್ಮೀ ಸ್ಥಳೀಯ ರಾಜಕಾರಣ ಗಳು ಯಾವುದೇ ಆಟವಾಡದಂತೆ ನೋಡಿಕೊಳ್ಳುತ್ತಿದ್ದರೆಂದು ನನಗನಿಸುತ್ತದೆ. ತಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ತಾವೇ ಪರಿಹರಿಸಿಕೊಂಡು ಕೆಲಸ ಮಾಡುವಂತೆ ಈ ಇಬ್ಬರೂ ಮಹಿಳಾ ಅಧಿಕಾರಿಗಳಿಗೂ ಅವರು ತಾಕೀತು ಮಾಡುತ್ತಿದ್ದರು. ಇಂತಹ ಸನ್ನಿವೇಶಗಳನ್ನು ನಿಭಾಯಿಸುವ ಜವಾಬ್ದಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ನೀಡಿರುತ್ತಿದ್ದರು. ಅಗತ್ಯ ಕಂಡು ಬಂದರೆ ಅಧಿಕಾರಿಗಳನ್ನು ವರ್ಗಾವಣೆ ಮಾಡದೆ ಜಿಲ್ಲಾ ಉಸ್ತುವಾರಿ ಸಚಿವರನ್ನೇ ಬದಲಾಯಿಸಿರುತ್ತಿದ್ದರು.ಯಡಿಯೂರಪ್ಪನವರೂ ಇಂಥ ಗಟ್ಟಿ ನಿರ್ಧಾರ ಕೈಗೊಳ್ಳ ಬಲ್ಲರೇ? ಕಾಲವೇ ನಿರ್ಧರಿಸಿ ಹೇಳಬೇಕಿದೆ.

E-mail:[email protected]

Translate »