ಕೋವಿಡ್ ಸಂಕಷ್ಟ ಪರಿಹಾರ ನಿಧಿಗೆ ಅರ್ಜಿ ಸಲ್ಲಿಸಲು ವಸ್ತುಪ್ರದರ್ಶನ ಆವರಣದಲ್ಲಿ ಸಹಾಯವಾಣಿ ಆರಂಭ
ಮೈಸೂರು

ಕೋವಿಡ್ ಸಂಕಷ್ಟ ಪರಿಹಾರ ನಿಧಿಗೆ ಅರ್ಜಿ ಸಲ್ಲಿಸಲು ವಸ್ತುಪ್ರದರ್ಶನ ಆವರಣದಲ್ಲಿ ಸಹಾಯವಾಣಿ ಆರಂಭ

June 8, 2021

ಮೈಸೂರು,ಜೂ.7-ಕರ್ನಾಟಕದಲ್ಲಿ ಲಾಕ್‍ಡೌನ್‍ನಿಂ ದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದರ ನೆರವಿಗೆಂದು ರಾಜ್ಯ ಸರ್ಕಾರ ಆರ್ಥಿಕ ಪರಿಹಾರ ಪ್ಯಾಕೇಜ್ ಅಡಿಯಲ್ಲಿ ತಲಾ 3000 ರೂ. ಬಿಡುಗಡೆ ಮಾಡಿದ್ದು ಜೀವಧಾರ ಪದ ವೀಧರ ಘಟಕದ ವತಿಯಿಂದ ಅರ್ಹ 50 ಕಲಾವಿದರಿಗೆ ಸವಲತ್ತು ತಲುಪಿಸಲು ಸೇವಾಸಿಂಧು ಮೂಲಕ ಆನ್ ಲೈನ್ ಪ್ರಕ್ರಿಯೆ ಸಹಾಯ ವ್ಯವಸ್ಥೆ ಮಾಡಿಕೊಡಲಾಯಿತು,
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಹೇಮಂತ್ ಕುಮಾರ್‍ಗೌಡ 50 ಕಲಾವಿದರಿಗೆ ವಸ್ತುಪ್ರದರ್ಶನ ಆವರಣ ದಲ್ಲಿರುವ ಪಿ.ಕಾಳಿಂಗರಾವ್ ಗಾನ ಮಂಟಪದಲ್ಲಿ ಸ್ವೀಕೃತಿ ಪತ್ರವನ್ನು ನೀಡಿದರು. ನಂತರ ಮಾತನಾಡಿ, ರಾಜ್ಯ ಸರ್ಕಾರ ದಿಂದ ಕೋವಿಡ್ ಸಂಕಷ್ಟ ಆರ್ಥಿಕ ಪರಿಹಾರ ನಿಧಿ ನೀಡಲಾಗುತ್ತಿದ್ದು, ಕಲಾವಿದರು ಸೇರಿದಂತೆ ಕುಂಬಾರರು, ಅಗಸರು, ಕ್ಷೌರಿಕರು, ದರ್ಜಿಗಳು, ಮೆಕ್ಯಾನಿಕ್ಸ್, ಹಮಾ ಲರು, ಅಲೆಮಾರಿಗಳು, ಭಟ್ಟಿ ಕಾರ್ಮಿಕರು ಅಕ್ಕಸಾಲಿಗರು, ಕಮ್ಮಾರರು, ಆಟೋ ಚಾಲಕರು ಗೃಹ ಕಾರ್ಮಿಕರವ ರೆಗೂ ಅಸಂಘಟಿತ ವಲಯದ ಅಡಿಯಲ್ಲಿ ಶ್ರಮಿಸುವ ವರ್ಗಕ್ಕೆ ಕರ್ನಾಟಕ ಸರ್ಕಾರ 2000ರೂ.ಗಳ ಆರ್ಥಿಕ ಸಂಕಷ್ಟ ಪರಿಹಾರ ನಿಧಿ ನೀಡುತ್ತಿದ್ದು, ಕರ್ನಾಟಕ ವಸ್ತುಪ್ರದ ರ್ಶನ ಆವರಣದಲ್ಲಿ ಜೀವಧಾರ ಪದವೀಧರ ಘಟಕ ಸಹಾಯವಾಣಿ ತೆರೆದಿದ್ದು, ಸೇವಾಸಿಂಧು ಪೆÇೀರ್ಟಲ್ ಆನ್ಲೈನ್ ನೋಂದಣಿ ಪ್ರಕ್ರಿಯೆಯನ್ನು ಉಚಿತವಾಗಿ ಮಾಡಿ ಕೊಡಲಾಗುವುದು ಸೂಕ್ತ ದಾಖಲಾತಿಗಳಾದ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‍ಬುಕ್, ವೃತ್ತಿ ದೃಢೀಕರಣ ಪತ್ರ ಮತ್ತು ಭಾವಚಿತ್ರವನ್ನು ತಂದು ನಾಗರಿಕರು ಇದರ ಸವ ಲತ್ತನ್ನು ಪಡೆಯಬಹುದಾಗಿದೆ ಎಂದರು. ಈ ವೇಳೆ ಬಿಜೆಪಿ ವಕ್ತಾರ ಎಂ.ವಿ.ಮೋಹನ್, ಮುಡಾ ಸದಸ್ಯ ಎಂಎನ್ ನವೀನ್‍ಕುಮಾರ್, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್, ಜೀವಧಾರ ಪದವೀಧರ ಘಟಕದ ಕಾರ್ಯದರ್ಶಿ ವರಲಕ್ಷ್ಮಿ, ಕಲಾವಿದರಾದ ಮೈಕ್ ಚಂದ್ರು, ವಿಶ್ವನಾಥ್, ಗಣೇಶ್, ಅಶ್ವಿನಿ ಶಾಸ್ತ್ರಿ, ಗುರುದತ್, ರವಿಶಂಕರ್, ರಾಜೇಶ್ ಪಡಿಯಾರ್, ಶೇಷಾಚಲ ಬಾಬು, ರಂಗಸ್ವಾಮಿ, ರಂಗಕರ್ಮಿ ರಂಜನ್, ಉದಯ್‍ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.

Translate »