ತಿಂಗಳು ಕಳೆದರೂ ಮುಗಿಯದ ಚರಂಡಿ ಕಾಮಗಾರಿ
ಮೈಸೂರು

ತಿಂಗಳು ಕಳೆದರೂ ಮುಗಿಯದ ಚರಂಡಿ ಕಾಮಗಾರಿ

June 8, 2021

ಮೈಸೂರು, ಜೂ.7(ಎಸ್‍ಪಿಎನ್)- ತಿಂಗಳು ಕಳೆದರೂ ಮುಗಿಯದ ಚರಂಡಿ ಕಾಮಗಾರಿಯನ್ನು ಆದಷ್ಟು ಬೇಗನೇ ಮುಗಿಸುವಂತೆ ವಾಹನ ಸವಾರರು ಮೈಸೂರು ನಗರ ಪಾಲಿಕೆ ಅಧಿಕಾರಿ ಗಳನ್ನು ಒತ್ತಾಯಿಸಿದ್ದಾರೆ.

ಮೈಸೂರು ದೇವರಾಜ ಅರಸು ರಸ್ತೆಯಿಂದ ಸಂತೆಪೇಟೆಗೆ ತೆರಳುವ ಮಾರ್ಗದಲ್ಲಿ ಚರಂಡಿ ಯಲ್ಲಿ ನೀರು ಸರಾಗವಾಗಿ ಹೋಗುವು ದಿಲ್ಲ ಎಂಬ ದೂರಿನ ಮೇರೆಗೆ ಪಾಲಿಕೆ ವತಿಯಿಂದ ಕಳೆದೊಂದು ತಿಂಗಳ ಹಿಂದೆ ಚರಂಡಿ ದುರಸ್ತಿಗೊಳಿಸುವ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಈ ಕಾಮಗಾರಿ ಪೂರ್ಣಗೊಳ್ಳದೆ, ಈ ಮಾರ್ಗದ ವಾಹನ ಸವಾರರ ಓಡಾಟಕ್ಕೆ ತೊಂದರೆಯಾಗು ತ್ತಿದೆ ಎಂದು ವಾಹನ ಸವಾರ ಅರುಣ್ ಎಂಬುವರು `ಮೈಸೂರು ಮಿತ್ರ’ನಿಗೆ ತಿಳಿಸಿದರು.

ದೇವರಾಜ ಅರಸು ರಸ್ತೆಯಲ್ಲಿ ವಾಣಿಜ್ಯ ಚಟುವಟಿಕೆ ಪ್ರಮುಖ ಸ್ಥಳವಾಗಿರುವುದ ರಿಂದ ಈ ರಸ್ತೆಯಲ್ಲಿ ಸದಾಕಾಲ ವಾಹನ ಗಳ ಓಡಾಟ ಹೆಚ್ಚಾಗಿರುತ್ತದೆ. ಕೊರೊನಾ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿನ ವಾಣಿಜ್ಯ ಚಟು ವಟಿಕೆ ಹಾಗೂ ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿರುವ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿನ ವಾಹನ ಓಡಾಟ ಕಡಿಮೆ ಇದೆ. ಹಾಗಾಗಿ ಕೊರೊನಾ ನಿರ್ಬಂಧ ತೆರವು ಗೊಳಿಸುವ ಮುನ್ನವೇ ಚರಂಡಿ ಕಾಮಗಾರಿ ಮುಗಿಸುವಂತೆ ಅರುಣ್ ಒತ್ತಾಯಿಸಿದ್ದಾರೆ.

ಕೆಲವು ದಿನಗಳಿಂದ ಮೈಸೂರು ಜಿಲ್ಲಾಧಿ ಕಾರಿ ಮತ್ತು ಪಾಲಿಕೆ ಆಯುಕ್ತರ ಜಗಳ ದಿಂದಾಗಿ ಈ ಕಾಮಗಾರಿ ಪರಿಶೀಲಿಸುವ ಗೋಜಿಗೆ ಕೆಳ ಹಂತದ ಅಧಿಕಾರಿಗಳು ಹೋಗಿಲ್ಲ. ಹಾಗಾಗಿ ಈ ಕಾಮಗಾರಿ ಆಮೆ ಗತಿಯಲ್ಲಿ ಸಾಗುತ್ತಿದೆ. ವಾಣಿಜ್ಯ ಚಟು ವಣಿಕೆ ನಡೆಯುವ ಸ್ಥಳದಲ್ಲಿ ರಸ್ತೆಗಳನ್ನು ತಿಂಗಳುಗಟ್ಟಲೇ ಬ್ಲಾಕ್ ಮಾಡಿದರೆ, ವಾಹನ ಸವಾರರ ಓಡಾಟಕ್ಕೆ ತೊಂದರೆಯಾಗು ತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

Translate »