ಮೈಸೂರು ಜಿಪಂ ಫೋನ್ ಇನ್ ಕಾರ್ಯಕ್ರಮಕ್ಕೆ 12 ಕರೆ
ಮೈಸೂರು

ಮೈಸೂರು ಜಿಪಂ ಫೋನ್ ಇನ್ ಕಾರ್ಯಕ್ರಮಕ್ಕೆ 12 ಕರೆ

June 8, 2021

ಮೈಸೂರು,ಜೂ.7(ಎಂಟಿವೈ)- ಗ್ರಾಮೀಣ ಪ್ರದೇಶದ ಕುಂದು ಕೊರತೆ ಆಲಿಸಿ, ಅಲ್ಲಿನ ಜನರ ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮ ಕೈಗೊ ಳ್ಳುವ ನಿಟ್ಟಿನಲ್ಲಿ ಮೈಸೂರು ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲಿ ಸೋಮವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿ ಧೆಡೆಯಿಂದ 12 ಮಂದಿಯಷ್ಟೇ ಕರೆ ಮಾಡಿ ಕೃಷಿ ಹೊಂಡ ಮಂಜೂರಾತಿಯ ಅಕ್ರಮ, ಕೆರೆ ಒತ್ತುವರಿ, ಚರಂಡಿ ವ್ಯವಸ್ಥೆ ಹಾಗೂ ಜಾಬ್ ಕಾರ್ಡ್ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ದೂರು ದಾಖಲಿಸಿದರು.

ಜಿ.ಪಂ ಉಪಕಾರ್ಯದರ್ಶಿ ಡಾ.ಎಸ್. ಪ್ರೇಮ್‍ಕುಮಾರ್, ಅಭಿವೃದ್ಧಿ ವಿಭಾಗ ಉಪ ಕಾರ್ಯದರ್ಶಿ ಡಾ.ಕೃಷ್ಣರಾಜ್, ಮುಖ್ಯ ಯೋಜನಾಧಿಕಾರಿ ಧನುಷ್ ಇನ್ನಿತರರು ಉಪಸ್ಥಿತರಿದ್ದ ಫೋನ್ ಇನ್ ಕಾರ್ಯಕ್ರಮ ದಲ್ಲಿ ಮೈಸೂರು ಹಾಗೂ ಕೆ.ಆರ್.ನಗರ ತಾಲೂಕಿನಿಂದ 12 ಮಂದಿ ತಮ್ಮ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿದರು.

ಕೆರೆ ಒತ್ತುವರಿ ತೆರವುಗೊಳಿಸಿ: ಮೈಸೂ ರಿನ ಹಿನಕಲ್ ನಿವಾಸಿ ಸಂತೋಷ್, ಹಿನ ಕಲ್‍ನಲ್ಲಿರುವ ಕಾಕನರ್ ಕಟ್ಟೆಗೆ ಸೇರಿದ 2 ಎಕರೆ ಜಾಗವಿದ್ದು, ಅದರಲ್ಲಿ ಸ್ಥಳೀಯರು ದೇವಾಲಯವೊಂದನ್ನು 3 ವರ್ಷದ ಹಿಂದೆ ನಿರ್ಮಿಸಿದ್ದಾರೆ. ಅಲ್ಲದೆ ಸಮೀಪದಲ್ಲಿಯೇ ದಿವಾನಕೆರೆಗೆ ಸೇರಿದ 8 ಎಕರೆ ಜಾಗವೂ ಒತ್ತುವರಿಯಾಗಿದೆ. ಕೆಲವರು ಕೆರೆ ಜಾಗಕ್ಕೆ ಕಸ ಸುರಿಯುತ್ತಿದ್ದಾರೆ. ಇದನ್ನು ಗಂಭೀರ ವಾಗಿ ಪರಿಗಣಿಸಿ ಕೆರೆಗೆ ಸೇರಿದ ಜಾಗ ವನ್ನು ರಕ್ಷಿಸಲು ಬೌಂಡರಿ ಗುರುತಿಸಿ, ಬೇಲಿ ಹಾಕುವಂತೆ ಮನವಿ ಮಾಡಿದರು.

ಇದಕ್ಕೆ ಉಪಕಾರ್ಯದರ್ಶಿ ಡಾ. ಎಸ್.ಪ್ರೇಮ್‍ಕುಮಾರ್, ಸಂಬಂಧಪಟ್ಟ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿ ಪರಿ ಶೀಲಿಸಿದ ನಂತರ ಅಗತ್ಯ ಕ್ರಮ ಕೈಗೊಳ್ಳು ವುದಾಗಿ ಭರವಸೆ ನೀಡಿದರು.

ಕೃಷಿ ಹೊಂಡ ಮಂಜೂರಾತಿಯಲ್ಲಿ ಭ್ರಷ್ಟಾ ಚಾರ: ಕೆ.ಆರ್.ನಗರ ತಾಲೂಕಿನ ಸಿದ್ದಾಪುರ ದಿಂದ ಸುರೇಶ್ ಎಂಬುವರು ಕರೆ ಮಾಡಿ, ನಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಕೃಷಿ ಹೊಂಡ ಮಂಜೂರಾತಿಯಲ್ಲಿ ಅಕ್ರಮ ನಡೆಯು ತ್ತಿದೆ. ಪ್ರತಿ ವರ್ಷವೂ ಒಬ್ಬನಿಗೆ ಕೃಷಿ ಹೊಂಡ ಮಂಜೂರು ಮಾಡಲಾಗುತ್ತಿದೆ. ಆತ ಪ್ರೆತಿ ವರ್ಷವೂ ಹಣ ಪಡೆದ ನಂತರ ಮರು ವರ್ಷ ಹೊಂಡಕ್ಕೆ ಮಣ್ಣು ತುಂಬಿ, ಮತ್ತೆ ಮತ್ತೆ ಮಂಜೂರು ಮಾಡಿಸಿಕೊಳ್ಳುತ್ತಿ ದ್ದಾರೆ. ಕೂಡಲೇ ಗಮನ ಹರಿಸಬೇಕು. ಅಲ್ಲದೆ ಹಲವು ಮಂದಿ ಅರ್ಜಿ ಸಲ್ಲಿಸಿ ದ್ದರೂ ಯಾರಿಗೂ ಕೃಷಿ ಹೊಂಡ ಮಂಜೂರು ಮಾಡುತ್ತಿಲ್ಲ ಎಂದು ದೂರಿದರು.
ನರೇಗಾ ಯೋಜನೆಯ ಕಾರ್ಯಕ್ರಮ ವನ್ನು ಜೆಸಿಬಿ ಮೂಲಕ ಮಾಡಿಸಲಾಗಿದೆ. ಯಂತ್ರದ ಮೂಲಕ ಮಾಡಿದರೆ ದುಡಿಯುವ ಕೈಗಳಿಗೆ ಕೆಲಸ ಎಲ್ಲಿ ಸಿಗುತ್ತದೆ. ಅಧಿಕಾರಿ ಗಳು ನರೇಗಾ ಯೋಜನೆಯ ಕಾಮಗಾರಿ ಯನ್ನು ಕೂಲಿ ಕಾರ್ಮಿಕರು, ಬಡರೈತ ರಿಂದಲೇ ಮಾಡಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕೋರಿದರು.

ಜಾಬ್ ಕಾರ್ಡ್ ಕೊಡಿ: ಹಂಚ್ಯಾ ನಿವಾಸಿ ಕುಮಾರಸ್ವಾಮಿ ಕರೆ ಮಾಡಿ, ಜಾಬ್ ಕಾರ್ಡ್‍ಗಾಗಿ ಅರ್ಜಿ ಸಲ್ಲಿಸಲಾಗಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಬಹುತೇಕ ಮಂದಿ ಕೆಲಸವಿಲ್ಲದೆ ಸಂಕಷ್ಟಕ್ಕೀಡಾಗಿದ್ದಾರೆ. ಗ್ರಾಮೀಣ ಪ್ರದೇಶ ನಿರುದ್ಯೋಗಿ ಯುವ ಜನರಿಗೆ ಜಾಬ್ ಕಾರ್ಡ್ ಮಾಡಿಕೊಟ್ಟರೆ ಜೀವನ ನಿರ್ವಹಿಸಲು ನೆರವಾಗುತ್ತದೆ ಎಂದು ಮನವಿ ಮಾಡಿದರು.

ಫೋನ್‍ಇನ್ ಕಾರ್ಯಕ್ರಮದಲ್ಲಿ ಕರೆ ಮಾಡಿದ ಎಲ್ಲರಿಗೂ ಜಿ.ಪಂ ಅಧಿಕಾರಿ ಗಳು ಸಮಸ್ಯೆ ಇತ್ಯರ್ಥ ಮಾಡುವ ಭರ ವಸೆ ನೀಡಿದರು. ಅಲ್ಲದೆ ಫೋನ್ ಇನ್ ಕಾರ್ಯಕ್ರಮದಲ್ಲಿ ವ್ಯಕ್ತವಾದ ದೂರುಗಳ ಪಟ್ಟಿಯನ್ನು ತಯಾರಿಸಿ, ಆಯಾ ತಾ.ಪಂ ಅಧಿಕಾರಿಗಳಿಗೆ ರವಾನಿಸಿ ಮುಂದಿನ ಫೋನ್ ಇನ್ ಕಾರ್ಯಕ್ರಮದೊಳಗೆ ಇತ್ಯರ್ಥ ಮಾಡುವಂತೆ ಸಲಹೆ ಪತ್ರ ಬರೆಯಲು ನಿರ್ಧರಿಸಲಾಯಿತು.

Translate »