ಕಾರ್ಮಿಕರ ಸಹಾಯಧನಕ್ಕೆ ಅರ್ಜಿ ಸಲ್ಲಿಕೆ
ಮೈಸೂರು

ಕಾರ್ಮಿಕರ ಸಹಾಯಧನಕ್ಕೆ ಅರ್ಜಿ ಸಲ್ಲಿಕೆ

June 8, 2021

ಮೈಸೂರು, ಜೂ.7(ಎಂಕೆ)- ಮೈಸೂರು ಬಿಜೆಪಿ ಯುವಮೋರ್ಚಾ ಉಪಾದ್ಯಕ್ಷ ಕೆ.ಎಂ.ನಿಶಾಂತ್ ನೇತೃತ್ವದಲ್ಲಿ 11 ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ರಾಜ್ಯ ಸರ್ಕಾರ ಘೋಷಿಸಿರುವ 2000 ರೂ. ಸಹಾಯ ಧನಕ್ಕೆ ಸೋಮವಾರ ಅರ್ಜಿ ಸಲ್ಲಿಸಲಾಯಿತು.

ನಗರದ ರಾಮಾನುಜ ರಸ್ತೆಯಲ್ಲಿರುವ ಬೆಳಕು ಚಾರಿಟೇಬಲ್ ಟ್ರಷ್ಟ್‍ನ ಜನಸೇವಾ ಕೇಂದ್ರ ದಲ್ಲಿ ನೂರಕ್ಕೂ ಹೆಚ್ಚು ಫಲಾನುಭವಿಗಳಿಗೆ ಸಹಾಯ ಧನಕ್ಕೆ ಉಚಿತವಾಗಿ ಅರ್ಜಿ ಸಲ್ಲಿಸಿಕೊಟ್ಟು ಅದರ ಸ್ವೀಕೃತಿ ಪತ್ರವನ್ನು ಹಸ್ತಾಂತರಿಸಲಾಯಿತು. ಟೈಲರ್, ಮೆಕ್ಯಾನಿಕ್ ಸೇರಿದಂತೆ 11 ವರ್ಗಗಳ ಅಸಂಘಟಿತ ಕಾರ್ಮಿಕರು ಸಹಾಯ ಧನಕ್ಕೆ ಅರ್ಜಿಸಲ್ಲಿಸ ಬಹುದಾಗಿದೆ ಅರ್ಜಿದಾರರು ಸೂಕ್ತ ದಾಖಲೆಗಳ ಜೊತೆಗೆ ಉದ್ಯೋಗ ಧೃಡೀಕರಣ ಪತ್ರ ನೀಡಬೇಕಾಗಿದೆ ಎಂದು ಟ್ರಸ್ಟ್‍ನ ಕೆ.ಎಂ.ನಿಶಾಂತ್ ತಿಳಿಸಿದರು.

ಉದ್ಯೋಗ ಧೃಡೀಕರಣ ಪ್ರತಿ ಜನಸೇವಾ ಕೇಂದ್ರದಲ್ಲೇ ಸಿಗಲಿದ್ದು, ವಿಳಾಸಕ್ಕೆ ಅನುಗುಣ ವಾಗಿ ಸಂಬಂದಪಟ್ಟ ಪಾಲಿಕೆಯ ಕಂದಾಯ ನಿರೀಕ್ಷಕರು ಅಥವಾ ಅಧಿಕಾರಿಗಳು ಪ್ರಮಾಣಿಸಬೇಕಿದೆ. ಇದಕ್ಕೆ ಪಾಲಿಕೆಯ 9 ವಲಯಗಳ ಕಂದಾಯ ಅಧಿಕಾರಿಗಳೂ ಸಹಕರಿಸುತ್ತಿದ್ದಾರೆ. ಮುಂದಿನ 1 ತಿಂಗಳ ಕಾಲ ಸೇವಾಕೇಂದ್ರ ಕಾರ್ಯನಿರ್ವಹಿಸಲಿದ್ದು, ಇಲ್ಲಿಯವರೆಗೆ ಆಟೋ, ಟ್ಯಾಕ್ಸಿ ಚಾಲಕರು, ಕಲಾವಿದರೂ ಸೇರಿದಂತೆ 600ಕ್ಕೂ ಹೆಚ್ಚು ಫಲಾನುಭವಿಗಳು ಇದರ ಉಪಯೋಗ ಪಡೆದಿದ್ದಾರೆ ಎಂದರು. ಪಾಲಿಕೆ ಕಂದಾಯ ನಿರೀಕ್ಷಕ ನಾಗೇಶ್, ಬಿಜೆಪಿ ಮುಖಂಡರಾದ ಕೆ.ಪಿ.ಮಧುಸೂಧನ್, ಸೋಮಶೇಕರ್, ಗುರುದತ್, ಶಂಕರ್ ಇನ್ನಿತರರು ಉಪಸ್ಥಿತರಿದ್ದರು.

Translate »