ಮದುವೆಯಾಗಬೇಕಿದ್ದ ಮಗ ಮಸಣ ಸೇರಿದ!
ಮೈಸೂರು

ಮದುವೆಯಾಗಬೇಕಿದ್ದ ಮಗ ಮಸಣ ಸೇರಿದ!

June 8, 2021

ಮೈಸೂರು, ಜೂ.7(ಎಂಕೆ)- ಇನ್ನೇನು ಮನೆ ಯಲ್ಲಿ ಮದುವೆ ಕಾರ್ಯ ಆರಂಭವಾಗಬೇಕು ಎನ್ನುವ ಹೊತ್ತಿನಲ್ಲಿ ಇದ್ದೊಬ್ಬ ಮಗನನ್ನು ಕೊರೊನಾ ನುಂಗಿತು…!

ಕೊರೊನಾ ಮಹಾಮಾರಿಗೆ ಇದ್ದ ಒಬ್ಬನೆ ಮಗನನ್ನು ಕಳೆದುಕೊಂಡ ತಂದೆ-ತಾಯಿಯ ನೋವಿನ ನುಡಿಗಳಿವು. ಮೈಸೂರಿನ ಮಂಚೇಗೌಡ ಕೊಪ್ಪಲಿನ ಎಸ್.ರಜನಿಕಾಂತ್(30) ಕೊರೊನಾ ಸೋಂಕಿಗೆ ಬಲಿಯಾದರೆ, ಮಗನ ಮದುವೆ ಯನ್ನು ಕಣ್ತುಂಬ ನೋಡಬೇಕೆನ್ನುವ ತಂದೆ-ತಾಯಿ ಆಸೆ ಕಡೆಗೂ ಆಸೆಯಾಗಿಯೆ ಉಳಿಯಿತು.

ಟಾಟಾ ಏಸ್ ಓಡಿಸಿಕೊಂಡು ಮನೆಯ ನಿರ್ವ ಹಣೆ ಜವಾಬ್ದಾರಿ ಹೊತ್ತಿದ್ದ ಎಸ್.ರಜನಿಕಾಂತ್ ನೆರೆ-ಹೊರೆಯವರ ಪ್ರೀತಿಗೆ ಪಾತ್ರನಾಗಿದ್ದ. ಕೊರೊನಾ ಸೋಂಕು ಹೆಚ್ಚಾಗುತ್ತಿದ್ದ ಹೊತ್ತಿನಲ್ಲೆ ಹೊರಗಡೆ ತಿರುಗಾಡುವುದು ಸರಿಯಲ್ಲ ಎಂದು ಸಣ್ಣ ದಿನಸಿ ಅಂಗಡಿಯೊಂದನ್ನು ತೆರೆದು ವ್ಯಾಪಾರ ಮಾಡು ತ್ತಿದ್ದ. ಯಾರಿಗೂ ಕೊರೊನಾ ಬರಬಾರದು ಎಂದು ಹೇಳುತ್ತಿದ್ದವನನ್ನೇ ಕೊರೊನಾ ಸೋಂಕು ಬಲಿ ಪಡೆದಿದೆ ಎಂದು ರಜನಿಕಾಂತ್ ತಂದೆ-ತಾಯಿ ‘ಮೈಸೂರು ಮಿತ್ರ’ನಲ್ಲಿ ತಮ್ಮ ನೋವನ್ನು ತೋಡಿಕೊಂಡರು.

ಮೂರು ದಿನ ಕಾಡಿದ ಜ್ವರ: ರಜನಿಕಾಂತ್‍ಗೆ ಮೊದಲು ಸಣ್ಣದಾಗಿ ಜ್ವರ ಮತ್ತು ತಲೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ವೈದ್ಯರನ್ನು ಸಂಪ ರ್ಕಿಸಿ ಮಾತ್ರೆಗಳನ್ನು ತೆಗೆದು ಕೊಂಡಿದ್ದ. ಮತ್ತೆ ಎರಡನೇ ದಿನ ಜ್ವರ ಕಡಿಮೆಯಾಗ ದಿದ್ದಾಗ ಬೇರೆ ವೈದ್ಯರ ಬಳಿ ಹೋಗಿ ತೊರಿಸಲಾಗಿತ್ತು. ಆದರೂ ಮೂರನೇ ದಿನವೂ ಜ್ವರ ಕಡಿಮೆಯಾಗಲೇ ಇಲ್ಲ. ನಂತರ ವೈದ್ಯರ ಸಲಹೆ ಪಡೆದು ಕೊರೊನಾ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ಬಂತು. ತಕ್ಷಣವೇ ತಾನೇ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಕೊಳ್ಳುತ್ತಿದ್ದ. ಸತತ 15 ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡರು ಬದುಕಿ ಬರಲಿಲ್ಲ. ಮೇ 17 ರಂದು ಮಧ್ಯಾಹ್ನ ನಮ್ನನ್ನು ಅಗಲಿದ ಎಂದು ರಜನಿಕಾಂತ್ ಬಾವ ಕಣ್ಣೀರಾದರು.

ಮೊದಲೇ ಕೆಆರ್ ಆಸ್ಪತ್ರೆಗೆ ಹೋಗಬೇಕಿತ್ತು: ಕೊರೊನಾ ಪಾಸಿಟಿವ್ ಬಂದಾಗ ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾಗಿ ಬೆಡ್‍ಗಳು ಸಿಗುತ್ತಿಲ್ಲ ವೆಂದು ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಖಾಸಗಿ ಆಸ್ಪತ್ರೆಯಲ್ಲಿ ನಮ್ಮಿಂದ ಹಣ ಕಿತ್ತರೇ ಹೊರತು ಸರಿಯಾದ ಚಿಕಿತ್ಸೆ ನೀಡಲಿಲ್ಲ. ಕಡೆಗೆ ಕೆಆರ್ ಆಸ್ಪತ್ರೆಗೆ ಬರಬೇಕಾಯಿತು.

ಕೆಆರ್ ಆಸ್ಪತ್ರೆಯಲ್ಲಿ ತುಂಬಾ ಚೆನ್ನಾಗಿ ಚಿಕಿತ್ಸೆ ನೀಡಿದರು. ಚಿಕ್ಕ ವಯಸ್ಸಿನ ಹುಡುಗ ಎಂದು ಎಲ್ಲರೂ ಮರುಗುತ್ತಿದ್ದರು. ಗಂಭೀರ ಪರಿಸ್ಥಿತಿ ಯಲ್ಲಿದ್ದರೂ ಸತತ 15 ದಿನ ರಜಿನಿಕಾಂತ್ ಉಳಿಸುವ ಕೆಲಸವನ್ನು ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ಮಾಡಿದರು. ಉಸಿರಾಟ ಸಮಸ್ಯೆ ಹೆಚ್ಚಾ ಗುವುದಕ್ಕೂ ಮೊದಲೇ ಕೆಆರ್ ಆಸ್ಪತ್ರೆಗೆ ಬಂದಿ ದ್ದರೆ ಉಳಿಸಿಕೊಳ್ಳಬಹುದಾಗಿತ್ತು ಎಂದರು.

ಮದುವೆ ಮಾತುಕತೆ: ಇನ್ನೇನು ಮನೆಯಲ್ಲಿ ಮದುವೆ ಕಾರ್ಯಗಳು ನಡೆಯಬೇಕಿತ್ತು. ರಜನಿ ಕಾಂತ್‍ಗೆ ಮದುವೆ ಮಾಡಲು ಹುಡುಗಿಯನ್ನು ನೋಡಿಕೊಂಡು ಬರಲಾಗಿತ್ತು. ನಿಶ್ಚಿತಾರ್ಥ ಮಾಡುವ ಕುರಿತು ಮನೆಯಲ್ಲಿ ಚರ್ಚೆಯಾಗಿತ್ತು. ಇಬ್ಬರು ಮಾಡುವ ಕೆಲಸವನ್ನು ಒಬ್ಬನೆ ಮಾಡು ತ್ತಿದ್ದ ಮಗ ನನ್ನೆದುರೇ ಕೊನೆಯುಸಿರೆಳೆದ ಎಂದು ರಜನಿಕಾಂತ್ ತಂದೆ ಭಾವುಕರಾದರು.

Translate »