ಮುನ್ನೆಚ್ಚರಿಕೆ, ಶೀಘ್ರ ಚಿಕಿತ್ಸೆಯಿಂದ ಕೊರೊನಾದಿಂದ ಪಾರಾಗಬಹುದು
ಮೈಸೂರು

ಮುನ್ನೆಚ್ಚರಿಕೆ, ಶೀಘ್ರ ಚಿಕಿತ್ಸೆಯಿಂದ ಕೊರೊನಾದಿಂದ ಪಾರಾಗಬಹುದು

June 8, 2021

ಮೈಸೂರು, ಜೂ.7(ಎಂಕೆ)- ಕೊರೊನಾ ಸೋಂಕಿಗೆ ಕೋಟ್ಯಾಧಿಪತಿ-ಬಡವರೆಂಬ ಬೇದವಿಲ್ಲ. ಮುಂಜಾ ಗ್ರತಾ ಕ್ರಮಗಳ ಪಾಲನೆ, ಸಾಧ್ಯವಾದಷ್ಟು ಬೇಗ ಚಿಕಿತ್ಸೆ ಪಡೆದುಕೊಂಡರಷ್ಟೇ ಬದುಕಬಹುದು ಎಂದು ಟ್ರಾಮ ಕೇರ್ ಸೆಂಟರ್‍ನ ನೋಡಲ್ ಅಧಿಕಾರಿ ಶ್ವಾಸಕೋಶ ತಜ್ಞ ಡಾ.ಸಿ.ಪ್ರಶಾಂತ್ ಎಚ್ಚರಿಸಿದರು.

ಕೊರೊನಾ ಸಂಕಷ್ಟದ ಪರಿಸ್ಥಿತಿಯ ನಿರ್ವಹಣೆ ಕುರಿತು ‘ಮೈಸೂರು ಮಿತ್ರ’ನೊಂದಿಗೆ ತಮ್ಮ ಅನು ಭವ ಹಂಚಿಕೊಂಡ ಅವರು, ಕೊರೊನಾ ಸೋಂಕಿನ ಗುಣಲಕ್ಷಣಗಳು ಕಂಡು ಬಂದ ಕೂಡಲೇ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಅವಶ್ಯ. ಕೊರೊನಾ ಸೋಂಕು ತಗುಲಿರುವುದು ಖಾತರಿಯಾದ ಕೂಡಲೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕು. ಇದ ರಿಂದ ಸೋಂಕಿನಿಂದ ಸಾಯುವವರ ಸಂಖ್ಯೆ ಕಡಿಮೆಯಾಗುತ್ತದೆ ಎಂದರು.

ಟ್ರಾಮಾ ಕೇರ್ ಆರಂಭವಾದಾಗಿನಿಂದ (ಏ.22) ಇಲ್ಲಿಯವರೆಗೆ 800ಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ ನೀಡಲಾಗಿದೆ. ಬಹುತೇಕ ಮಂದಿ ಗುಣಮುಖರಾಗಿದ್ದಾರೆ. 135 ಬೆಡ್ ಗಳಿದ್ದು, ಅವುಗಳಲ್ಲಿ 10 ಐಸಿಯು ಬೆಡ್‍ಗಳಿವೆ. ಇಂದಿಗೂ ಪ್ರತಿನಿತ್ಯ 10ಕ್ಕೂ ಹೆಚ್ಚು ಮಂದಿ ದಾಖಲಾಗುತ್ತಿದ್ದಾರೆ. ಸರ್ಕಾರ, ವೈದ್ಯರು ತಿಳಿಸಿರುವ ಮಾರ್ಗಸೂಚಿಗಳನ್ನು ತಪ್ಪದೆ ಪಾಲಿ ಸಿದರೆ ಮಾತ್ರ ಕೊರೊನಾ ಸೋಂಕಿನಿಂದ ಮುಕ್ತರಾ ಗಲು ಸಾಧ್ಯ ಎಂದು ಹೇಳಿದರು.

ಮಾನಸಿಕ ಸ್ಥೈರ್ಯ ತುಂಬುವ ಕೆಲಸ: ಟ್ರಾಮಾ ಕೇರ್ ಸೆಂಟರ್‍ನಲ್ಲಿ ಮೊದಲು ಸೋಂಕಿ ತರಿಗೆ ಮಾನಸಿಕ ಸ್ಥೈರ್ಯ-ಧೈರ್ಯ ತುಂಬುವ ಕೆಲಸ ಮಾಡಲಾಗುತ್ತಿದ್ದೆ. ಸೋಂಕಿತರಿಗೆ ಆಗಾಗ ಮಾತನಾಡಿಸುವುದು. ಊಟ ಮಾಡಿಸುವುದು. ನಿಮ್ಮ ಕಡೆಯವರು ನಿಮಗಾಗಿ ಕಾಯುತ್ತಿ ದ್ದಾರೆ ಎಂದು ಹೇಳುವ ಮೂಲಕ ಸೋಂಕಿ ತರ ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ. ಇದರಿಂದ ಸೋಂಕಿತರಲ್ಲಿಯೂ ಭಯ ದೂರವಾಗುತ್ತದೆ ಎಂದು ತಿಳಿಸಿದರು.

ಕೊರೊನಾ ಸೋಂಕಿನಿಂದ ಸಾಯುವವರನ್ನು ನೋಡಿದರೆ, ತುಂಬಾ ದುಃಖ ಉಂಟಾಗುತ್ತದೆ. ಅದರಲ್ಲೂ ಚಿಕ್ಕ ವಯಸ್ಸಿನವರು ಮೃತಪಟ್ಟಾಗ ಕೊರೊನಾ ಎಂಬುದು ಯಾಕಾದರೂ ಬಂತೋ ಎಂದೆನಿಸು ತ್ತದೆ. ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಯ್ದುಕೊಳ್ಳವುದರ ಜೊತೆಗೆ ಮುನ್ನೆಚ್ಚರಿಕೆ ಇರದಿ ದ್ದರೆ ಇನ್ನಷ್ಟು ಜನರನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಭಾವುಕರಾದರು. ಮಾಸ್ಕ್ ಹಾಕಿಕೊಳ್ಳುವು ದನ್ನು ಒಳ್ಳೆಯ ಅಭ್ಯಾಸವನ್ನಾಗಿ ಮಾಡಿಕೊಳ್ಳಬೇಕು. ಇದರಿಂದ ಕೊರೊನಾ ಸೋಂಕಷ್ಟೇ ಅಲ್ಲದೆ ಧೂಳಿ ನಿಂದಾಗುವ ತೊಂದರೆಗಳಿಗೂ ಕಡಿವಾಣ ಹಾಕಿದಂ ತಾಗುತ್ತದೆ. ಬಳಸಿದ ಮಾಸ್ಕ್ ಅನ್ನು ಮತ್ತೆ ಮತ್ತೆ ಬಳಸುವುದರಿಂದ ಫಂಗಸ್‍ನಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಬಳಸುವ ಮಾಸ್ಕ್ ಶುಚಿಯಾಗಿರಬೇಕು ಎಂದು ಸಲಹೆ ನೀಡಿದರು.

Translate »