ಮಳೆನೀರು ಕೊಯ್ಲು ಅಳವಡಿಸಿಕೊಳ್ಳದ ಕಟ್ಟಡಗಳಿಗೆ ಹೆಚ್ಚುವರಿ ನೀರಿನ ಶುಲ್ಕ
ಮೈಸೂರು

ಮಳೆನೀರು ಕೊಯ್ಲು ಅಳವಡಿಸಿಕೊಳ್ಳದ ಕಟ್ಟಡಗಳಿಗೆ ಹೆಚ್ಚುವರಿ ನೀರಿನ ಶುಲ್ಕ

May 18, 2019

ಮೈಸೂರು: ಮೈಸೂರು ನಗರ ಹಾಗೂ ಹೊರ ವಲಯಗಳಲ್ಲಿ ಮಳೆ ನೀರು ಕೊಯ್ಲು ಅಳ ವಡಿಸಿಕೊಳ್ಳದೇ 50*80 ಹಾಗೂ ಅದಕ್ಕೂ ಮೇಲ್ಪಟ್ಟ ಅಳತೆಯಲ್ಲಿ ನಿರ್ಮಿ ಸಿರುವ ಕಟ್ಟಡಗಳಿಗೆ ಹೆಚ್ಚುವರಿ ನೀರಿನ ಶುಲ್ಕ ವಿಧಿಸಲು ಮೈಸೂರು ಮಹಾನಗರಪಾಲಿಕೆ ಆಯುಕ್ತ ರಾದ ಶಿಲ್ಪಾನಾಗ್ ಆದೇಶಿಸಿದ್ದಾರೆ.

ಈ ಅಳತೆಯ ಅಪಾರ್ಟ್‍ಮೆಂಟ್‍ಗಳು, ವಾಣಿಜ್ಯ ಕಟ್ಟಡಗಳು, ಹೋಟೆಲ್‍ಗಳು, ಸರ್ಕಾರಿ ಕಚೇರಿಗಳು, ನಗರಪಾಲಿಕೆ ಉದ್ಯಾ ನವನಗಳು ಹಾಗೂ ಮನೆಗಳಿಗೆ ಈ ಆದೇಶ ಅನ್ವಯವಾಗಲಿದ್ದು, ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳದೇ ಇರುವ ಕಟ್ಟಡಗಳಿಗೆ ಈ ತಿಂಗಳಿನಿಂದ 5 ತಿಂಗಳ ತನಕ ಶೇ.5ರಷ್ಟು ಹೆಚ್ಚುವರಿ ನೀರಿನ ಶುಲ್ಕ ವಿಧಿಸಲಾಗುತ್ತದೆ. ನಂತರವೂ ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳದೇ ಇದ್ದಲ್ಲಿ ಶೇ.25ರಷ್ಟು ಹೆಚ್ಚುವರಿ ನೀರಿನ ಶುಲ್ಕ ವನ್ನು ಮಳೆ ನೀರು ಕೊಯ್ಲು ಅಳವಡಿಸಿ ಕೊಳ್ಳುವವರೆವಿಗೂ ವಿಧಿಸಲು ನಗರ ಪಾಲಿಕೆ ಆಯುಕ್ತರು ಆದೇಶಿಸಿದ್ದಾರೆ.

ಮೈಸೂರು ನಗರಕ್ಕೆ ಕಾವೇರಿ ಮತ್ತು ಕಬಿನಿ ನದಿ ಮೂಲಗಳಿಂದ ವಾಣಿವಿಲಾಸ ನೀರು ಸರಬರಾಜು ವಿಭಾಗದಿಂದ ಸುಮಾರು 250 ಎಂ.ಎಲ್.ಡಿ.ಗಳಷ್ಟು ನೀರು ಪೂರೈಕೆ ಯಾಗುತ್ತಿದ್ದರೂ ದಿನೇ ದಿನೆ ನೀರಿನ ಬೇಡಿಕೆ ಹೆಚ್ಚಾಗುತ್ತಿದೆ. ಮೈಸೂರು ನಗರ ಹಾಗೂ ಹೊರ ವಲಯಗಳಲ್ಲಿ 30*40 ಅಳತೆಗೂ ಮೇಲ್ಪಟ್ಟ ಕಟ್ಟಡಗಳಿಗೆ ನಕ್ಷೆ ಅನುಮೋದನೆ ನೀಡುವಾಗ ಕಡ್ಡಾಯವಾಗಿ ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳಬೇಕು ಎಂದು ಷರತ್ತು ವಿಧಿಸಲಾಗಿದೆ. ಆದರೆ ನಿವೇಶನ ದಾರರು ಮಳೆ ನೀರು ಕೊಯ್ಲು ಅಳ ವಡಿಸಿಕೊಳ್ಳದೇ ಇರುವುದು ಕಂಡುಬರು ತ್ತಿದೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ. ಮಳೆ ನೀರು ಕೊಯ್ಲಿನಿಂದ ನಿವೇಶನ ದಾರರಿಗೆ ನೀರು ಲಭ್ಯವಾಗಲಿದ್ದು, ನೀರಿನ ಅಭಾವ ಕಡಿಮೆಗೊಳಿಸಬಹುದಾಗಿದೆ. ಆದ್ದರಿಂದ ನೀರಿನ ಅಭಾವ ನಿಯಂತ್ರಿಸುವ ನಿಟ್ಟಿನಲ್ಲಿ ಮಳೆ ನೀರು ಕೊಯ್ಲು ಅತ್ಯವಶ್ಯಕವಾಗಿರುವುದರಿಂದ ಅದನ್ನು ಅಳವಡಿಸಿಕೊಳ್ಳಲು ನಿವೇಶನ ದಾರರಿಗೆ ಒತ್ತಾಯಿಸಬೇಕಾಗಿದೆ. ಆದ್ದರಿಂದ ಮಳೆ ನೀರು ಕೊಯ್ಲು ಅಳವಡಿಸಿ ಕೊಳ್ಳದೇ ಇರುವ ಕಟ್ಟಡ ಮಾಲೀಕರಿಗೆ ಮೇಲ್ಕಂಡಂತೆ ಹೆಚ್ಚುವರಿ ನೀರಿನ ಶುಲ್ಕವನ್ನು ದಂಡ ರೂಪದಲ್ಲಿ ವಿಧಿಸಬೇಕು ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿತ್ತು. ಅದರಂತೆ 2018ರ ಜುಲೈ 19ರಂದು ನಡೆದ ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಂಡು ಅದರಂತೆ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.

Translate »