ಜಿಲ್ಲಾಧಿಕಾರಿ ಸ್ಪಂದನೆ; ಧರಣಿ ಕೈಬಿಟ್ಟ ಗ್ರೀನ್ ಬಡ್ಸ್ ಆಗ್ರೋ ಠೇವಣಿದಾರರು
ಮೈಸೂರು

ಜಿಲ್ಲಾಧಿಕಾರಿ ಸ್ಪಂದನೆ; ಧರಣಿ ಕೈಬಿಟ್ಟ ಗ್ರೀನ್ ಬಡ್ಸ್ ಆಗ್ರೋ ಠೇವಣಿದಾರರು

February 11, 2021

ಮೈಸೂರು, ಫೆ.10(ಪಿಎಂ, ಎಂಕೆ)- ಗ್ರೀನ್ ಬಡ್ಸ್ ಆಗ್ರೋ ಕಂಪನಿಯಿಂದ ವಂಚನೆಗೊಳಗಾದ ಠೇವಣಿದಾರರಿಗೆ ಕಂಪನಿಯ ಆಸ್ತಿ ಮುಟ್ಟುಗೋಲು ಹಾಕಿ ಕೊಂಡು ಮಾರಾಟ ಮಾಡಿ ಠೇವಣಿ ಹಣ ವಾಪಸ್ ಮಾಡಬೇಕೆಂದು ಒತ್ತಾ ಯಿಸಿ ಕಳೆದ 3 ದಿನಗಳಿಂದ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋ ರಾತ್ರಿ ಧರಣಿ ನಡೆಸುತ್ತಿದ್ದ ಗ್ರೀನ್ ಬಡ್ಸ್ ಆಗ್ರೋ ಕಂಪನಿ ಠೇವಣಿದಾರರು ಬುಧವಾರ ರಾತ್ರಿ ತಾತ್ಕಾಲಿಕವಾಗಿ ಧರಣಿ ಕೈಬಿಟ್ಟರು.

ಬುಧವಾರ ಸಂಜೆ 7.30ಕ್ಕೆ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು, ಒಂದೂ ವರೆ ತಿಂಗಳಲ್ಲಿ ಸಮಸ್ಯೆ ಬಗೆಹರಿಸಲಾಗು ವುದು ಎಂದು ಭರವಸೆ ನೀಡಿದ್ದರಿಂದ ಠೇವಣಿದಾರರು ಧರಣಿ ಕೈಬಿಡಲು ಒಪ್ಪಿ ದರು. ಗ್ರೀನ್ ಬಡ್ಸ್ ಆಗ್ರೋ ಕಂಪನಿಗೆ ಸೇರಿದ ಇನ್ನೂ ಹಲವು ಆಸ್ತಿಗಳಿದ್ದು, ಅವನ್ನೂ ಜಪ್ತಿ ಮಾಡಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಗ್ರೀನ್ ಬಡ್ಸ್ ಆಗ್ರೋ ಕಂಪನಿಯಿಂದ ವಂಚನೆಗೆ ಒಳಗಾದ ಠೇವಣಿದಾರರ ಮಾಹಿತಿ ಒದಗಿ ಸುವಂತೆ ನ್ಯಾಯಾಲಯ ಸೂಚಿಸಿದೆ. ಒಂದೂವರೆ ತಿಂಗಳಲ್ಲಿ ಎಲ್ಲಾ ಮಾಹಿತಿ ಸಂಗ್ರಹಿಸಿ ನ್ಯಾಯಾಲಯಕ್ಕೆ ಸಲ್ಲಿಸ ಲಾಗುವುದು ಎಂದರು.

ಕೊರೊನಾ ಕಾರಣದಿಂದ ಠೇವಣಿ ದಾರರ ಮಾಹಿತಿ ಸಂಗ್ರಹಿಸುವುದರಲ್ಲಿ ವಿಳಂಬವಾಗಿದೆ. ಮತ್ತೆ ನಾಲ್ವರು ಅಧಿಕಾರಿ ಗಳನ್ನು ಈ ಕಾರ್ಯಕ್ಕೆ ನಿಯೋಜಿಸ ಲಾಗುವುದು. ಆದಷ್ಟು ಬೇಗ ಸಮಸ್ಯೆಗೆ ಸ್ಪಂದಿ ಸಲಾಗುವುದು. ಠೇವಣಿದಾರರು ಸಹಕರಿಸ ಬೇಕು ಎಂದು ಮನವಿ ಮಾಡಿದರು.

ಸಂಜೆವರೆಗೂ ಪ್ರತಿಭಟನೆ: ಇದಕ್ಕೂ ಮುನ್ನ, ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಗ್ರೀನ್ ಬಡ್ಸ್ ಏಜೆಂಟರು, ಠೇವಣಿದಾರರ ರಕ್ಷಣಾ ಸಮಿತಿ ನಡೆಸುತ್ತಿದ್ದ ಪ್ರತಿಭಟನೆ ಬುಧವಾರವೂ ಸಂಜೆವರೆಗೂ ಮುಂದುವರೆಯಿತು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಮಾಧ್ಯಮದವರ ಜತೆ ಮಾತನಾಡಿ, ಜಿಲ್ಲಾ ಡಳಿತ ಸ್ಪಂದಿಸುತ್ತಿಲ್ಲ ಎಂದು ಬೇಸರ ಗೊಂಡು ಪ್ರತಿಭಟನೆ ಮುಂದುವರೆಸಿದ್ದಾರೆ. ಅವರಿಗೆ ಬೆಂಬಲ ಸೂಚಿಸಲು ಬಂದಿ ದ್ದೇನೆ. ಈ ಸಂಬಂಧ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಜೊತೆ ಮಾತನಾಡುವೆ. ಪ್ರತಿಭಟನಾಕಾರರ ಅಹವಾಲನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೂ ತರುವೆ. ಇವರಿಗೆ ನ್ಯಾಯ ದೊರಕಿಸಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು. ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಳ್ಳಿ ದೇವರಾಜ್, ಠೇವಣಿದಾರರ ರಕ್ಷಣಾ ಸಮಿತಿ ರಾಜ್ಯ ಅಧ್ಯಕ್ಷೆ ಲಕ್ಷ್ಮೀದೇವಿ, ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

Translate »