ಹಾಸನ ಡಿಸಿ ರೋಹಿಣಿ ಸಿಂಧೂರಿ ವರ್ಗಾವಣೆ
ಮೈಸೂರು, ಹಾಸನ

ಹಾಸನ ಡಿಸಿ ರೋಹಿಣಿ ಸಿಂಧೂರಿ ವರ್ಗಾವಣೆ

February 23, 2019

ಹಾಸನ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ರೋಹಿಣಿ ಸಿಂಧೂರಿ ಅವರನ್ನು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯದರ್ಶಿಯಾಗಿ ವರ್ಗಾ ವಣೆ ಮಾಡಲಾಗಿದೆ. ಹಾಸನದ ನೂತನ ಜಿಲ್ಲಾಧಿಕಾರಿಯಾಗಿ ಅಕ್ರಂ ಪಾಷಾ ಅವರನ್ನು ನೇಮಕ ಮಾಡಲಾಗಿದೆ. ರೋಹಿಣಿ ಸಿಂಧೂರಿ ಅವರನ್ನು 2017ರ ಜುಲೈ 23 ರಂದು ಹಾಸನ ಡಿಸಿಯಾಗಿ ನೇಮಕ ಮಾಡಲಾಗಿತ್ತು. ಆದರೆ, 2018ರ ಫೆ. 6ರಂದು ಅವರನ್ನು ವರ್ಗಾ ವಣೆ ಮಾಡಲಾಗಿತ್ತು. ರೋಹಿಣಿ ಸಿಂಧೂರಿ ವರ್ಗಾವಣೆ ವಿರುದ್ಧ ಕಾನೂನು ಹೋರಾಟ ಮಾಡಿ ಗೆಲುವು ಸಾಧಿಸಿ ಮತ್ತೆ ಹಾಸನ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದರು. ಆದರೆ, ಈಗಲೂ ರಾಜ್ಯ ಸರ್ಕಾರ ಅವಧಿಗೂ ಮುನ್ನವೇ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಅಕ್ರಂ ಪಾಷಾ ಶುಕ್ರವಾರ ಸಂಜೆ ಹಾಸನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು.

ಮತ್ತೆ ಅಂಖಿ ಕದ ತಟ್ತಾರಾ..?: ನೂತನ ಜಿಲ್ಲಾಧಿಕಾರಿ ಅಕ್ರಂಪಾಷ ಅವರಿಗೆ ಅಧಿಕಾರ ಹಸ್ತಾಂತರಕ್ಕೆ ರೋಹಿಣಿ ಸಿಂಧೂರಿ ಗೈರು ಹಾಜರಾಗಿದ್ದಾರೆ. ಈ ಹಿಂದೆ ಅವಧಿಗೂ ಮುನ್ನಾ ತಮ್ಮ ವರ್ಗಾವಣೆ ವಿರುದ್ಧ ಎರಡೆರಡು ಬಾರಿ ಕಾನೂನು ಹೋರಾಟ ಮಾಡಿ ರೋಹಿಣಿ ಸಿಂಧೂರಿ ಅವರು ಹಾಸನ ಡಿಸಿಯಾಗಿದ್ದರು. ಈಗಲೂ ಅವಧಿಗೂ ಮುನ್ನವೇ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರದ ವಿರುದ್ಧ ಮತ್ತೆ ಕಾನೂನು ಹೋರಾಟಕ್ಕೆ ಮುಂದಾಗ್ತಾರಾ? ಕಾದು ನೋಡಬೇಕಿದೆ.

Translate »