`ಸಮಾಜದ ಕತ್ತಲೆ ಹೋಗಲಾಡಿಸುವ ಬೆಳಕು ರಂಗಕಲೆ’: ಮ.ಗು.ಸದಾನಂದಯ್ಯ
ಮೈಸೂರು

`ಸಮಾಜದ ಕತ್ತಲೆ ಹೋಗಲಾಡಿಸುವ ಬೆಳಕು ರಂಗಕಲೆ’: ಮ.ಗು.ಸದಾನಂದಯ್ಯ

February 11, 2021

ಮೈಸೂರು, ಫೆ.10(ಎಂಕೆ)-`ಸಮಾಜದಲ್ಲಿರುವ ಕತ್ತಲೆಯನ್ನು ಹೋಗಲಾಡಿಸುವ ಬೆಳಕು ರಂಗಕಲೆ’ ಎಂದು ಕನ್ನಡಪರ ಹೋರಾಟಗಾರ ಮ.ಗು.ಸದಾನಂದಯ್ಯ ಹೇಳಿದರು.

ಮೈಸೂರು ಕಲಾಮಂದಿರದ ಚಿಂತಕರ ಚಾವಡಿ ಆವರಣದಲ್ಲಿ ದೇಸಿರಂಗ ಸಾಂಸ್ಕøತಿಕ ಸಂಸ್ಥೆ ಆಯೋಜಿಸಿರುವ ‘ರಂಗ-ನೃತ್ಯ ತರಬೇತಿ ಶಿಬಿರ’ ಉದ್ಘಾಟಿಸಿದ ಅವರು, ಕಲೆಗಳು ಜೀವಂತವಾಗಿರುವಲ್ಲಿ ಮಾತ್ರ ಉತ್ತಮ ಸಮಾಜ ಕಾಣಲು ಸಾಧ್ಯ. ಅವೈಜ್ಞಾನಿಕತೆ ಯಿಂದ ವೈಜ್ಞಾನಿಕತೆಯೆಡೆಗೆ ಸಾಗಲು ಕಲೆ-ಸಾಹಿತ್ಯ ಸಹಕಾರಿ. ರಂಗಕಲೆ ನಮ್ಮಲ್ಲಿ ವಿನಯಶೀಲ ಗುಣಗಳನ್ನು ವೃದ್ಧಿಸುತ್ತದೆ. ಜಾನಪದ ಕಲೆಗಳು ಮುಖವಾಡ ರಹಿತವಾಗಿ ನಮ್ಮನ್ನು ಸಾತ್ವಿಕರನ್ನಾಗಿಸುತ್ತವೆ. ಸರ್ಕಾರ ಮಾಡಬೇಕಾದ ಸಾಮಾಜಿಕ ಬದಲಾವಣೆ ಕೆಲಸಗಳನ್ನು ದೇಸಿರಂಗ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ ಎಂದರು. ಮಹಾರಾಣಿ ಕಾಲೇಜು ಕನ್ನಡ ವಿಭಾಗ ಮುಖ್ಯಸ್ಥ ಪ್ರೊ.ಮೈಸೂರು ಕೃಷ್ಣಮೂರ್ತಿ, ಮಹಾರಾಜ ಕಾಲೇ ಜಿನ ಸಹ ಪ್ರಾಧ್ಯಾಪಕಿ ವಿಜಯಲಕ್ಷ್ಮಿ ಮನಾಪುರ, ಸಹಾಯಕ ಪ್ರಾಧ್ಯಾಪಕ ಎಸ್.ಜಿ. ರಾಘವೇಂದ್ರ, ದೇಸಿರಂಗ ಸಾಂಸ್ಕøತಿಕ ಸಂಸ್ಥೆಯ ಕೃಷ್ಣ ಜನಮನ ಮತ್ತಿತರರಿದ್ದರು.

Translate »