ನಾಳೆಯಿಂದ 4 ದಿನ ಪರ್ವ ರಂಗಪ್ರಸ್ತುತಿ
ಮೈಸೂರು

ನಾಳೆಯಿಂದ 4 ದಿನ ಪರ್ವ ರಂಗಪ್ರಸ್ತುತಿ

March 24, 2021

ಆಗಲೇ ಎರಡು ದಿನದ ಪ್ರದರ್ಶನಕ್ಕೆ ಟಿಕೆಟ್ ಮಾರಾಟ ಪೂರ್ಣ

ಮೈಸೂರು, ಮಾ.23(ಎಂಕೆ)- ಮೈಸೂರು ರಂಗಾಯಣದ ಭೂಮಿಗೀತದಲ್ಲಿ ಹೆಸರಾಂತ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅವರ ‘ಪರ್ವ’ ಕಾದಂಬರಿಯ ರಂಗಪ್ರಸ್ತುತಿಯನ್ನು ಮಾ.25 ರಿಂದ 28ರವರೆಗೆ ಹಮ್ಮಿಕೊಳ್ಳಲಾಗಿದೆ. ಮಾ.25ರ ಸಂಜೆ 6.30ಕ್ಕೆ ‘ಆದಿ ಪರ್ವ’(2 ಗಂಟೆ 45 ನಿಮಿಷ), ಮಾ.26ರ ಸಂಜೆ 6.30ಕ್ಕೆ ‘ನಿಯೋಗ ಪರ್ವ’(2 ಗಂಟೆ 15 ನಿಮಿಷ) ಹಾಗೂ ಮಾ.27ರಂದು ಸಂಜೆ 6.30ಕ್ಕೆ ‘ಯುದ್ಧ ಪರ್ವ’(3 ಗಂಟೆ) ನಾಟಕ ಪ್ರದರ್ಶನವಿರಲಿದ್ದು, 3 ಸಂಚಿಕೆಗಳ ನಾಟಕದ ಪ್ರದರ್ಶನಗಳ ಮಧ್ಯೆ 10 ನಿಮಿಷ ವಿರಾಮ ಇರಲಿದೆ. ಮಾ.28ರ ಬೆಳಗ್ಗೆ 10 ಗಂಟೆಗೆ ‘ಪರ್ವ’ ಮಹಾರಂಗಪ್ರಸ್ತುತಿ(8 ಗಂಟೆ ಪ್ರದರ್ಶನ) ಇರಲಿದ್ದು, ಮಧ್ಯಾಹ್ನ 30 ನಿಮಿಷ ಊಟದ ವಿರಾಮ ಸೇರಿ 10 ನಿಮಿಷಗಳ 4 ವಿರಾಮಗಳಿರಲಿವೆ. ಮಾ.27 ಮತ್ತು 28ರ ಪ್ರದರ್ಶನಗಳಿಗೆ ರಂಗಮಂದಿರ ಭರ್ತಿಯಾಗುವಷ್ಟು ಟಿಕೆಟ್ ಮಾರಾಟವಾಗಿದೆ.

ಮೇ ಅಂತ್ಯದವರೆಗೂ ಪ್ರದರ್ಶನ: ಏಪ್ರಿಲ್ ಮತ್ತು ಮೇ ತಿಂಗಳ ಅಂತ್ಯದವರೆಗೆ ಪ್ರತಿ ಶನಿವಾರ ಮತ್ತು ಭಾನುವಾರ ಬೆಳಗ್ಗೆ 10ರಿಂದ ಸಂಜೆ 7ರವರೆಗೆ ‘ಪರ್ವ’ ಮಹಾರಂಗ ಪ್ರಸ್ತುತಿ ನಡೆಯಲಿದ್ದು, ಪ್ರದರ್ಶಗಳ ಟಿಕೆಟ್ ಬುಕ್ಕಿಂಗ್‍ಗಾಗಿ ‘ಪರ್ವ’ ಮಾಹಿತಿ ಕೇಂದ್ರ ಹಾಗೂ ರಂಗಾಯಣ ವೆಬ್‍ಸೈಟ್ ತಿತಿತಿ.ಡಿಚಿಟಿgಚಿಥಿಚಿಟಿಚಿ.oಡಿg ಸಂಪರ್ಕಿಸುವುದು.

Translate »