ಮೈಸೂರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ‘ಯುವರತ್ನ’ ಸಿನಿಮಾ ಪ್ರಚಾರ
ಮೈಸೂರು

ಮೈಸೂರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ‘ಯುವರತ್ನ’ ಸಿನಿಮಾ ಪ್ರಚಾರ

March 24, 2021

ಮೈಸೂರು,ಮಾ.23(ಪಿಎಂ)- ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ತಮ್ಮ ಅಭಿ ನಯದ `ಯುವರತ್ನ’ ಸಿನಿಮಾದ ಬಗ್ಗೆ ಮಂಗಳ ವಾರ ಮೈಸೂರಿನಲ್ಲಿ ಭರ್ಜರಿ ಪ್ರಚಾರ ಕೈಗೊಂಡರು. ಈ ವೇಳೆ ಪವರ್ ಸ್ಟಾರ್ ಅಭಿಮಾನಿಗಳು, ಯುವ ಸಮೂಹ ಹುಚ್ಚೆದ್ದು ಕುಣಿದು ಕುಪ್ಪಳಿಸಿತು.
ಸಿನಿಮಾದ ನಾಯಕ ನಟ ಪುನೀತ್ ರಾಜ್ ಕುಮಾರ್ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂ ಡಿದ್ದ ಹಿನ್ನೆಲೆಯಲ್ಲಿ ನೆಚ್ಚಿನ ನಟನ ಕಂಡ ಅಭಿ ಮಾನಿಗಳು ಸಂಭ್ರಮದಲ್ಲಿ ತೇಲಿದರು. ಬಹುತೇಕ ಯುವ ಜನರೇ ಇದ್ದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದ ಮೈಸೂರು ಮಾನಸ ಗಂಗೋತ್ರಿಯ ಬಯಲು ರಂಗಮಂದಿರ (ಓಪನ್ ಏರ್ ಥಿಯೇ ಟರ್) ಆವರಣ ಅಭಿಮಾನದ ಹರ್ಷೋ ದ್ಘಾರದಲ್ಲಿ ಮಿಂದೆದ್ದಿತು.

ಹೊಂಬಾಳೆ ಫಿಲಮ್ಸ್ ಬ್ಯಾನರ್‍ನಡಿ ನಿರ್ಮಾಣ ಗೊಂಡಿರುವ `ಯುವರತ್ನ’ ಸಿನಿಮಾ ಏ.1ರಂದು ತೆರೆ ಕಾಣಲಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ನಾಯಕ ನಟ ಪುನೀತ್ ರಾಜ್ಯದ ವಿವಿಧ ಭಾಗಗಳಲ್ಲಿ ಸಿನಿಮಾ ಪ್ರಚಾರದಲ್ಲಿ ನಿರತರಾಗಿದ್ದು, ಅಂತೆಯೇ ಮಂಗಳವಾರ ಮೈಸೂರಿನಲ್ಲಿ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಬಯಲು ರಂಗಮಂದಿರದ ವೇದಿಕೆಗೆ ಪುನೀತ್ ರಾಜ್‍ಕುಮಾರ್ ಆಗಮಿಸುತ್ತಿದ್ದಂತೆ ಅಭಿಮಾನಿ ಸಮೂಹದಿಂದ ಹರ್ಷೋದ್ಘಾರ ಮುಗಿಲು ಮುಟ್ಟಿತು. ಸಿನಿಮಾದ ಹಾಡು-ಸಂಗೀತದ ಅಬ್ಬರದೊಂ ದಿಗೆ ಅಭಿಮಾನಿಗಳು ಹುಚ್ಚೆದ್ದು ಕುಣಿದರು. ಅಲ್ಲದೆ, ನೆಚ್ಚಿನ ನಟನನ್ನು ಕಂಡು ಸಂಭ್ರಮಿಸಿದರು.

 

ಇದೇ ವೇಳೆ ಪುನೀತ್ ರಾಜ್‍ಕುಮಾರ್, ಹಲೋ ಮೈಸೂರ್ ಯೂತ್ಸ್… ಎಂದಾಕ್ಷಣ ಅಭಿಮಾನಿ ಗಳ ಕೇಕೆ ಸಿಳ್ಳೆಯ ಭಾರೀ ಸದ್ದು ಕೇಳಿ ಬಂದಿತು. ಮುಂದುವರೆದು ಮಾತನಾಡಿದ ಪುನೀತ್, ಈ ಓಪನ್ ಏರ್ ಥಿಯೇಟರ್‍ಗೆ ಬಂದರೆ ಏನೇನು ನೆನಪಾಗುತ್ತದೆ ಗೊತ್ತಾ? ಈ ಜಾಗದಲ್ಲೇ ನಿಂತು ಕೊಂಡು ನಮ್ಮ ತಂದೆಯವರ (ಡಾ.ರಾಜ್ ಕುಮಾರ್) ಮ್ಯೂಸಿಕಲ್ ನೈಟ್ ಕಾರ್ಯಕ್ರಮ ವೀಕ್ಷಣೆ ಮಾಡಿ ದ್ದೇನೆ. ನಾನೂ ಇದೇ ವೇದಿಕೆಯಲ್ಲಿ ಹಾಡಿದ್ದೇನೆ. ಎಷ್ಟೊ ಕಾರ್ಯಕ್ರಮಗಳನ್ನು ಈ ವೇದಿಕೆಯಲ್ಲಿ ನೀಡಿದ್ದೇನೆ ಎಂದು ಹಳೆ ನೆನಪಿಗೆ ಜಾರಿದರು.
ಮೈಸೂರು ಎಂದಾಕ್ಷಣ ಮೈಸೂರು ಮಹಾ ರಾಜರು ನೆನಪಾಗುತ್ತಾರೆ. ನಮ್ಮ ಗಾಜನೂರು ಮನೆಯಲ್ಲಿ ಮೈಸೂರು ಮಹಾರಾಜರ ಫೋಟೋ ಹಾಕಿದ್ದೆವು. ನಮ್ಮ ತಂದೆ-ತಾಯಿ (ರಾಜ್ ಕುಮಾರ್-ಪಾರ್ವತಮ್ಮ) ಮೈಸೂರು ಮಹಾ ರಾಜರ ಕೊಡುಗೆ ಬಗ್ಗೆ ಸಾಕಷ್ಟು ತಿಳಿಸಿ ಕೊಡುತ್ತಿದ್ದರು ಎಂದು ಸ್ಮರಿಸಿದರು.

ಇಂದು ನಾವು ಇಲ್ಲಿಗೆ ಭೇಟಿ ಕೊಟ್ಟಿರುವುದು ಏಕೆಂದು ನಿಮಗೆಲ್ಲಾ ಈಗಾಗಲೇ ಗೊತ್ತು. `ಯುವರತ್ನ’ ಸಿನಿಮಾ ಪ್ರಚಾರಕ್ಕಾಗಿ ಬಂದಿ ದ್ದೇವೆ. ಯುವರತ್ನ ಸಿನಿಮಾದ ನಿಜವಾದ ಹೀರೋ ಅಂದರೆ ಅದು ಯುವ ಜನರು. ಪ್ರತಿಯೊಬ್ಬರು ಒಂದು ಹಂತದಲ್ಲಿ ಯುವ ಜನರೇ. ಹೀಗಾಗಿ ಎಲ್ಲರ ಸಿನಿಮಾ ಇದು. ಏ.1ರಂದು ಸಿನಿಮಾ ತೆರೆ ಕಾಣುತ್ತಿದೆ. ನಿಮ್ಮ ಆಶೀರ್ವಾದ-ಪ್ರೀತಿ ನಮ್ಮ ಮೇಲಿರಲಿ ಎಂದು ಕೋರಿದರು.
ಬಳಿಕ ಅಭಿಮಾನಿಗಳ ಒತ್ತಾಯದ ಮೇರೆಗೆ ಸಿನಿಮಾದ `ದೇಶಕ್ಕೆ ಯೋಧ… ನಾಡಿಗೆ ರೈತ… ಜೀವನಕ್ಕೆ ಗುರು…’ ಗೀತೆಯನ್ನು ಚುಟುಕಾಗಿ ಸಾದರಪಡಿಸಿ, ಲಘು ನೃತ್ಯವನ್ನೂ ಪ್ರದರ್ಶಿಸಿ, ಅಭಿಮಾನಿಗಳ ಸಂಭ್ರಮ ಇಮ್ಮಡಿಗೊಳಿಸಿದರು.

Translate »