2018ನೇ ಸೌತ್ ಫಿಲಂ ಫೇರ್ ಪ್ರಶಸ್ತಿ ಪ್ರಕಟ ಅತ್ಯುತ್ತಮ ನಟ ಪುನೀತ್,  ಶೃತಿ ಹರಿಹರನ್ ಅತ್ಯುತ್ತಮ ನಟಿ
ಮೈಸೂರು

2018ನೇ ಸೌತ್ ಫಿಲಂ ಫೇರ್ ಪ್ರಶಸ್ತಿ ಪ್ರಕಟ ಅತ್ಯುತ್ತಮ ನಟ ಪುನೀತ್,  ಶೃತಿ ಹರಿಹರನ್ ಅತ್ಯುತ್ತಮ ನಟಿ

June 18, 2018

ಹೈದರಾಬಾದ್: 2018ರ ಸೌತ್ ಫಿಲಂ ಫೇರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಶನಿವಾರ ಹೈದರಾಬಾದ್‍ನಲ್ಲಿ ನಡೆದಿದೆ. ಈ ಅದ್ಧೂರಿ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ನಾಲ್ಕು ಚಿತ್ರರಂಗದ ಗಣ್ಯರು ಭಾಗಿಯಾಗಿದ್ದರು.

2018ನೇ ಸಾಲಿನ ಸೌತ್ ಫಿಲಂ ಫೇರ್ ಅವಾರ್ಡ್ ಪ್ರಕಟವಾಗಿದ್ದು, ರಾಜಕುಮಾರ ಚಿತ್ರಕ್ಕಾಗಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಬ್ಯೂಟಿಫುಲ್ ಮನಸ್ಸುಗಳು ಚಿತ್ರಕ್ಕಾಗಿ ನಟಿ ಶೃತಿ ಹರಿಹರನ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಪುನೀತ್ ರಾಜ್‍ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಸ್ವೀಕರಿಸುವಾಗ ಪುನೀತ್ ಬಾಲ್ಯದಿನಗಳಲ್ಲಿ ಅಪ್ಪಾಜಿ ಜೊತೆ ಸ್ವೀಕರಿಸಿದ್ದ ಪ್ರಶಸ್ತಿಯನ್ನು ನೆನಪಿಸಿಕೊಂಡರು. ಇನ್ನೂ ಅತ್ಯುತ್ತಮ ಪ್ರಶಸ್ತಿ ಪಡೆದ ಶೃತಿ ಹರಿಹರನ್ ಬ್ಯೂಟಿಫುಲ್ ಮನಸ್ಸುಗಳು ಸಿನಿಮಾಕ್ಕಾಗಿ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದರು.

ಸೌತ್ ಫಿಲಂ ಫೇರ್ ಅವಾರ್ಡ್ ವಿವರ: ಅತ್ಯುತ್ತಮ ನಟ-ಪುನೀತ್ ರಾಜ್‍ಕುಮಾರ್ (ರಾಜಕುಮಾರ್), ಅತ್ಯುತ್ತಮ ನಟಿ- ಶೃತಿ ಹರಿಹರನ್ (ಬ್ಯೂಟಿಫುಲ್ ಮನಸ್ಸುಗಳು), ಅತ್ಯುತ್ತಮ ನಿದೇಶಕ-ತರುಣ್ ಸುಧೀರ್(ಚೌಕ), ಅತ್ಯುತ್ತಮ
ಗೀತ ರಚನೆಕಾರ-ವಿ.ನಾಗೇಂದ್ರ ಪ್ರಸಾದ್(ಚೌಕ), ಅತ್ಯುತ್ತಮ ಚಿತ್ರ-ಒಂದು ಮೊಟ್ಟೆಯ ಕಥೆ, ಅತ್ಯುತ್ತಮ ಹಿನ್ನೆಲೆ ಗಾಯಕ-ಆರ್ಮನ್ ಮಲ್ಲಿಕ್(ಚಕ್ರವರ್ತಿ), ಅತ್ಯುತ್ತಮ ಹಿನ್ನೆಲೆ ಗಾಯಕಿ-ಅನುರಾಧ ಭಟ್(ಚೌಕ), ಅತ್ಯುತ್ತಮ ಸಂಗೀತ ನಿರ್ದೇಶಕ-ಭರತ್ ಬಿಜೆ(ಬ್ಯೂಟಿಫುಲ್ ಮನಸ್ಸುಗಳು), ಕ್ರಿಟಿಕ್ಸ್ ಅವಾರ್ಡ್-ಧನಂಜಯ್(ಅಲ್ಲಮ್ಮ), ಕ್ರಿಟಿಕ್ಸ್ ಅವಾರ್ಡ್-ಶ್ರದ್ಧ ಶ್ರೀನಾಥ್(ಆಪರೇಷನ್ ಅಲುಮೇಲಮ್ಮ). ತಮಿಳಿನಲ್ಲಿ ಆರಂ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದೆ. ವಿಕ್ರಮ್ ವೇದ ಚಿತ್ರಕ್ಕಾಗಿ ನಟ ವಿಜಯ್ ಸೇತುಪತಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದರೆ, ಆರಂಚಿತ್ರಕ್ಕೆ ನಟಿ ನಯನತಾರ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ತೆಲುಗುವಿನಲ್ಲಿ ಬಾಹುಬಲಿ-2 ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದೆ. ಅರ್ಜುನ್ ರೆಡ್ಡಿ ಚಿತ್ರಕ್ಕಾಗಿ ವಿಜಯ್ ದೇವರಕೊಂಡ ಅತ್ಯುತ್ತಮ ನಟ ಪ್ರಶಸ್ತಿ ಪಡೆದರೆ, ಫೀದಾ ಚಿತ್ರಕ್ಕೆ ಸಾಯಿ ಪಲ್ಲವಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.

Translate »