ಕುಮಾರಸ್ವಾಮಿಗೆ ಅಧಿಕಾರ ಕೊಟ್ಟು ದೇವರು ಪರೀಕ್ಷೆಯೊಡ್ಡಿದ್ದಾನೆ : ಹೆಚ್.ಡಿ.ದೇವೇಗೌಡ ನೋವಿನ ನುಡಿ
ಮೈಸೂರು

ಕುಮಾರಸ್ವಾಮಿಗೆ ಅಧಿಕಾರ ಕೊಟ್ಟು ದೇವರು ಪರೀಕ್ಷೆಯೊಡ್ಡಿದ್ದಾನೆ : ಹೆಚ್.ಡಿ.ದೇವೇಗೌಡ ನೋವಿನ ನುಡಿ

June 18, 2018

ತುಮಕೂರು: ನನ್ನ ಮಗ ಹೆಚ್.ಡಿ. ಕುಮಾರಸ್ವಾಮಿಗೆ ದೇವರು ಅಧಿ ಕಾರ ಕೊಟ್ಟು ಪರೀಕ್ಷೆ ಮಾಡು ತ್ತಿದ್ದಾನೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ನೊಂದು ನುಡಿದರು. ತುಮಕೂರು ಜಿಲ್ಲೆ ಪಾವ ಗಡ ತಾಲೂಕಿನ ತಾಳೆ ಮರದಹಳ್ಳಿ ಯಲ್ಲಿ ಆಂಜನೇಯಸ್ವಾಮಿ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, 38 ಸ್ಥಾನ ಪಡೆದಿದ್ದ ಜೆಡಿಎಸ್‍ಗೆ 78 ಸ್ಥಾನ ಪಡೆದಿರುವ ಕಾಂಗ್ರೆಸ್ ಬೆಂಬಲ ನೀಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದುದ್ದರ ಹಿಂದೆ ದೇವರ ಅನುಗ್ರಹವಿದೆ. ಆದರೆ ಅಧಿಕಾರ ಕೊಟ್ಟ ದೇವರು ಸಂಕಷ್ಟವನ್ನೂ ಕೊಟ್ಟಿದ್ದಾನೆ. ದೇವರು ಕೊಟ್ಟಿರುವ ಈ ಪರೀಕ್ಷೆ ಯಲ್ಲಿ ತೇರ್ಗಡೆ ಹೊಂದಲು ಕುಮಾರ ಸ್ವಾಮಿ ದೊಡ್ಡ ಹೋರಾಟವನ್ನೇ ಮಾಡ ಬೇಕಾಗಿದೆ ಎಂದು ಹೇಳುವ ಮೂಲಕ ತಮ್ಮ ನೋವನ್ನು ತೋಡಿಕೊಂಡರು.

Translate »