ನಾಳೆಯಿಂದ ದೇಶಾದ್ಯಂತ ಲಾರಿ ಮುಷ್ಕರ
ಮೈಸೂರು

ನಾಳೆಯಿಂದ ದೇಶಾದ್ಯಂತ ಲಾರಿ ಮುಷ್ಕರ

June 18, 2018

ಬೆಂಗಳೂರು:  ಡೀಸೆಲ್ ದರ ಏರಿಕೆ, ಥರ್ಡ್ ಪಾರ್ಟಿ ವಿಮೆಯ ಪ್ರೀಮಿಯಂ ದುಬಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಟೋಲ್ ಏರಿಕೆ ವಿರೋಧಿಸಿ ನಾಳೆ(ಜೂ.18)ಯಿಂದ ಕರ್ನಾಟಕ ಸೇರಿದಂತೆ ದೇಶಾದ್ಯಂತ ಲಾರಿ ಮಾಲೀಕರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಆದರೆ ಮತ್ತೊಂದು ಬಣದ ಲಾರಿ ಮಾಲೀಕರ ಸಂಘ, ಜು.20ರವರೆಗೆ ಕೇಂದ್ರ ಸರ್ಕಾರಕ್ಕೆ ನೀಡಿರುವ ಹಿನ್ನೆಲೆ ಯಲ್ಲಿ ಅಲ್ಲಿಯವರೆಗೂ ಲಾರಿ ಸಂಚಾರ ಬಂದ್ ಮಾಡದಿರಲು ನಿರ್ಣಯ ಮಾಡಿದೆ. ಹಾಗಾಗಿ ಲಾರಿ ಮುಷ್ಕರಕ್ಕೆ ಮಿಶ್ರ ಪ್ರತಿ ಕ್ರಿಯೆ ವ್ಯಕ್ತವಾಗುವ ಸಾಧ್ಯತೆಯಿದೆ.

ನೋಟು ಅಮಾನ್ಯೀಕರಣದ ಬಳಿಕ ಕೇಂದ್ರಸರ್ಕಾರಕ್ಕೆ 10 ಲಕ್ಷ ಕೋಟಿಗೂ ಅಧಿಕ ಹಣ ಸಂಗ್ರಹವಾಗಿದ್ದರೂ ಥರ್ಡ್ ಪಾರ್ಟಿ ವಿಮೆಯ ಪ್ರೀಮಿಯಂ ಹೆಚ್ಚಿಸಲಾಗಿದೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಹಾಗೂ ಡೀಸೆಲ್ ದರ ಏರಿಕೆ ಮಾಡುವ ಮೂಲಕ ಲಾರಿ ಮಾಲೀಕರು ಹಾಗೂ ಅವಲಂಬಿತರ ಜೀವನಕ್ಕೆ ಕೇಂದ್ರ ಸರ್ಕಾರ ಬರೆ ಹಾಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿ ನಾಳೆಯಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಲಾಗಿದ್ದು, ಮುಷ್ಕರದದಿಂದಾಗಿ ಕರ್ನಾಟಕದಲ್ಲಿ 9 ಲಕ್ಷದ 30 ಸಾವಿರ ಲಾರಿಗಳೂ ಸೇರಿದಂತೆ ದೇಶಾದ್ಯಂತ 93 ಲಕ್ಷ ಲಾರಿಗಳ ಮೂಲಕ ವಾಗುತ್ತಿದ್ದ ಸರಕು ಸಾಗಾಣಿಕೆ ಸಂಪೂರ್ಣ ಬಂದ್ ಆಗುವುದ ರಿಂದ ಜನಜೀವನದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಬಹುದು. ಅಖಿಲ ಭಾರತ ಲಾರಿ ಸರಕು ಸೇವಾ ವಾಹನಗಳ ಮಾಲೀಕರ ಸಂಘ ಹಾಗೂ ರಾಜ್ಯ ಲಾರಿ ಮಾಲೀಕರ ಒಕ್ಕೂಟ ಲಾರಿ ಮುಷ್ಕರಕ್ಕೆ ಕೈ ಜೋಡಿಸಿವೆ. ಆದರೆ ಆಲ್ ಇಂಡಿಯಾ ಮೋಟರ್ ಟ್ರಾನ್ಸ್‍ಪೋರ್ಟ್ ಕಾಂಗ್ರೆಸ್(ಎಐಎಂಟಿಸಿ) ಸಂಘಟನೆಯು ಈಗಾಗಲೇ ಕೇಂದ್ರ ಸರ್ಕಾರದ ಮೇಲೆ ಒತ್ತಡಹಾಕಿ, ಸಮಸ್ಯೆ ಪರಿಹಾರಕ್ಕೆ ಜುಲೈ 20ರವರೆಗೆ ಗಡುವು ನೀಡಿರುವುದರಿಂದ ಇದೀಗ ಏಕಾಏಕಿ ಕರೆ ನೀಡಲಾಗಿರುವ ಮುಷ್ಕರಕ್ಕೆ ಬೆಂಬಲ ನೀಡುವ ಸಾಧ್ಯತೆಯಿಲ್ಲವಾಗಿದೆ.

ಈ ಸಂಬಂಧ `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ ರಾಜ್ಯ ಲಾರಿ ಮಾಲೀಕರ ಸಂಘ (ಜಿ.ಆರ್.ಷಣ್ಮುಗಪ್ಪ ಬಣ)ದ ಉಪಾಧ್ಯಕ್ಷರೂ ಆದ ಮೈಸೂರು ಜಿಲ್ಲಾಧ್ಯಕ್ಷ ಕೋದಂಡ ರಾಮು, ಮುಷ್ಕರಕ್ಕೆ ನಮ್ಮ ವಿರೋಧವಿಲ್ಲ. ಆದರೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಸಮಸ್ಯೆಯನ್ನು ತಿಳಿಸಲಾಗಿದೆ. ಅಲ್ಲದೆ ಪ್ರಧಾನಮಂತ್ರಿಗಳ ಕಚೇರಿಯಿಂದ ನಮ್ಮ ಎಐಎಂಟಿಸಿ ಅಧ್ಯಕ್ಷರಾದ ಎಸ್.ಕೆ.ಮಿತ್ತಲ್ ಅವರಿಗೆ ಪ್ರತ್ಯುತ್ತರ ಬಂದಿದೆ. ಶೀಘ್ರದಲ್ಲೇ ಚರ್ಚೆಗೆ ಆಹ್ವಾನಿಸುವ ನಿರೀಕ್ಷೆಯಿದೆ. ಒಂದು ವೇಳೆ ಕೇಂದ್ರ ಮುಂದಿನ ಕ್ರಮ ಕೈಗೊಳ್ಳದಿದ್ದರೆ ಅಥವಾ ಚರ್ಚೆಯಲ್ಲಿ ಸಮಸ್ಯೆಗೆ ಪರಿಹಾರ ದೊರಕದಿದ್ದಲ್ಲಿ ಪೂರ್ವ ನಿರ್ಧಾರದಂತೆ ಜು.20ರಿಂದ ದೇಶಾಧ್ಯಂತ ಲಾರಿ

ಸಂಚಾರ ಬಂದ್ ಆಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗೆಯೇ ಮೈಸೂರು ಜಿಲ್ಲಾ ಲಾರಿ ಮಾಲೀಕರ ಸಂಘದಡಿ ಒಟ್ಟು 3,500 ಲಘು ಹಾಗೂ ಭಾರೀ ಲಾರಿಗಳ ಮಾಲೀಕರಿದ್ದಾರೆ. ಮೈಸೂರು ಗೂಡ್ಸ್ ಶೆಡ್ ಲಾರಿ ಮಾಲೀಕರ ಸಂಘ, ಮರಳು ಲಾರಿ ಮಾಲೀಕರ ಸಂಘ, ಮೈಸೂರು-ಚಾಮರಾಜನಗರ ಜಿಲ್ಲಾ ಲಾರಿ ಮಾಲೀಕರ ಸಂಘವೂ ಒಂದೇ ಸಂಘಟನೆಯಲ್ಲಿದ್ದು, ನಾಳೆಯಿಂದ ಲಾರಿ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗಲಾರದು ಎಂದು ಅವರು ಹೇಳಿದ್ದಾರೆ.

Translate »