ಇಂದು ಪುನೀತ್ ರಾಜ್‌ಕುಮಾರ್ ಪುಣ್ಯ ಸ್ಮರಣೆ
ಮೈಸೂರು

ಇಂದು ಪುನೀತ್ ರಾಜ್‌ಕುಮಾರ್ ಪುಣ್ಯ ಸ್ಮರಣೆ

November 8, 2021

ಬೆಂಗಳೂರು, ನ.೭-ಕಳೆದ ಶುಕ್ರವಾರ (ಅ.೨೯) ನಿಧನರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ೧೧ನೇ ದಿನದ ಪುಣ್ಯ ಸ್ಮರಣೆ ಕಾರ್ಯ ನಾಳೆ (ನ.೮) ನಡೆಯಲಿದ್ದು, ಇದಕ್ಕಾಗಿ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಲಾಗಿದೆ.

ಸದಾಶಿವನಗರದಲ್ಲಿರುವ ಪುನೀತ್ ರಾಜ್ ಕುಮಾರ್ ಅವರ ಮನೆಯ ಕಾಂಪೌಂಡ್ ಒಳಗೆ ಮತ್ತು ಹೊರಗೆ ಬೃಹತ್ ಶಾಮೀಯಾನಾ ಅಳವಡಿಸ ಲಾಗಿದ್ದು, ಪುನೀತ್‌ಗೆ ಇಷ್ಟವಾದ ಖಾದ್ಯಗಳ ತಯಾರಿ ನಡೆಯುತ್ತಿದೆ. ಪುನೀತ್ ರಾಜ್‌ಕುಮಾರ್ ಕುಟುಂಬ, ರಾಘವೇಂದ್ರ ರಾಜ್‌ಕುಮಾರ್, ಶಿವರಾಜ್ ಕುಮಾರ್ ಮತ್ತು ಸಹೋದರಿಯರ ಕುಟುಂಬದವರು ಸೇರಿ ದಂತೆ ಕುಟುಂಬಸ್ಥರು ಮತ್ತು ಆಪ್ತರುಗಳು ಮಾತ್ರ ಈ ಕಾರ್ಯದಲ್ಲಿ ಭಾಗವಹಿಸುವರು.

ಪುನೀತ್ ರಾಜ್‌ಕುಮಾರ್ ಅವರಿಗೆ ಇಬ್ಬರು ಪುತ್ರಿ ಯರೇ ಇರುವ ಕಾರಣದಿಂದ ರಾಘವೇಂದ್ರ ರಾಜ್ ಕುಮಾರ್ ಅವರ ಹಿರಿಯ ಪುತ್ರ ವಿನಯ್ ರಾಜ್ ಕುಮಾರ್ ಈ ೧೧ನೇ ದಿನದ ಕಾರ್ಯವನ್ನು ನೆರ ವೇರಿಸುವರು. ಸೋಮವಾರ ಬೆಳಗ್ಗೆ ಮನೆಯಲ್ಲಿ ಪೂಜಾ ಕಾರ್ಯಕ್ರಮಗಳೊಂದಿಗೆ

ಕಾರ್ಯಕ್ರಮ ನೆರವೇರಿಸಿದ ನಂತರ ಕುಟುಂಬಸ್ಥರೆಲ್ಲರೂ ಕಂಠೀರವ ಸ್ಟುಡಿಯೋ ದಲ್ಲಿರುವ ಪುನೀತ್ ರಾಜ್‌ಕುಮಾರ್ ಅವರ ಸಮಾಧಿ ಸ್ಥಳಕ್ಕೆ ತೆರಳುವರು. ನಂತರ ಸಮಾಧಿ ಸ್ಥಳದಲ್ಲಿ ವಿಧಿ-ವಿಧಾನದಂತೆ ಪುನೀತ್‌ಗೆ ಇಷ್ಟವಾದ ಖಾಧ್ಯಗಳ ಎಡೆ ಇಟ್ಟು ಪೂಜೆ ನೆರವೇರಿಸಲಾಗುವುದು. ಈ ಹಿನ್ನೆಲೆಯಲ್ಲಿ ಈ ಸಂದರ್ಭದಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಕುಟುಂಬಸ್ಥರ ಪೂಜಾ ಕಾರ್ಯ ಮುಗಿದ ನಂತರ ಸಮಾಧಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ನಾಳೆ (ಸೋಮ ವಾರ) ಪುನೀತ್ ರಾಜ್‌ಕುಮಾರ್ ಅವರ ೧೧ನೇ ದಿನದ ಕಾರ್ಯವಿರುವ ಕಾರಣ ಭಾನು ವಾರ ಸಂಜೆ ೭ ಗಂಟೆಯವರೆಗೂ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಬತ್ತದ ಅಭಿಮಾನ: `ಅಪ್ಪು’ ನಿಧನರಾಗಿ ೧೦ ದಿನ ಕಳೆದರೂ ಅಭಿಮಾನಿಗಳ ಅಭಿಮಾನ ಮಾತ್ರ ಬತ್ತಿಲ್ಲ. ದಿನದಿಂದ ದಿನಕ್ಕೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ರಾಜ್ಯದ ನಾನಾ ಭಾಗಗಳಿಂದ ಮತ್ತು ಅಕ್ಕ-ಪಕ್ಕದ ರಾಜ್ಯಗಳಿಂದಲೂ ಅಭಿಮಾನಿಗಳು ತಂಡೋಪ ತಂಡವಾಗಿ ಬಂದು ಪುನೀತ್ ರಾಜ್‌ಕುಮಾರ್ ಸಮಾಧಿ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಅಂಗವಿಕಲರು, ಪುಟ್ಟ ಮಕ್ಕಳು, ಮಹಿಳೆಯರು ಮತ್ತು ವಯೋ ವೃದ್ಧರು ಪುನೀತ್ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ, ಅವರ ಸಿನಿಮಾಗಳು ಮತ್ತು ನಟನೆಯನ್ನು ನೆನೆದು ಕಣ್ಣೀರು ಹಾಕುತ್ತಿದ್ದರು. ಕೆಲವರಂತೂ ಸಮಾಧಿ ಸ್ಥಳದಲ್ಲೇ ಮಂಕಾಗಿ ಕುಳಿತುಕೊಂಡು ಬೇಸರ ವ್ಯಕ್ತಪಡಿಸುತ್ತಿದ್ದುದು ಸಹ ಕಂಡು ಬಂದಿತು.

ಅನ್ನ ಸಂತರ್ಪಣೆ: ಮಂಗಳವಾರ(ನ.೯) ಬೆಳಗ್ಗೆ ಬೆಂಗಳೂರು ಅರಮನೆ ಮೈದಾನದಲ್ಲಿ ಸ್ಯಾಂಡಲ್‌ವುಡ್ ಚಿತ್ರನಟ ಪುನೀತ್ ರಾಜ್‌ಕುಮಾರ್ ಅವರ ೧೧ನೇ ದಿನದ ಕಾರ್ಯ ಕ್ರಮದ ಅಂಗವಾಗಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

Translate »