ಬೆಂಗಳೂರು, ನ.೭-ಕಳೆದ ಶುಕ್ರವಾರ (ಅ.೨೯) ನಿಧನರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ೧೧ನೇ ದಿನದ ಪುಣ್ಯ ಸ್ಮರಣೆ ಕಾರ್ಯ ನಾಳೆ (ನ.೮) ನಡೆಯಲಿದ್ದು, ಇದಕ್ಕಾಗಿ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಲಾಗಿದೆ. ಸದಾಶಿವನಗರದಲ್ಲಿರುವ ಪುನೀತ್ ರಾಜ್ ಕುಮಾರ್ ಅವರ ಮನೆಯ ಕಾಂಪೌಂಡ್ ಒಳಗೆ ಮತ್ತು ಹೊರಗೆ ಬೃಹತ್ ಶಾಮೀಯಾನಾ ಅಳವಡಿಸ ಲಾಗಿದ್ದು, ಪುನೀತ್‌ಗೆ ಇಷ್ಟವಾದ ಖಾದ್ಯಗಳ ತಯಾರಿ ನಡೆಯುತ್ತಿದೆ. ಪುನೀತ್ ರಾಜ್‌ಕುಮಾರ್ ಕುಟುಂಬ, ರಾಘವೇಂದ್ರ ರಾಜ್‌ಕುಮಾರ್, ಶಿವರಾಜ್ ಕುಮಾರ್ ಮತ್ತು ಸಹೋದರಿಯರ ಕುಟುಂಬದವರು ಸೇರಿ ದಂತೆ…
ಮೈಸೂರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ‘ಯುವರತ್ನ’ ಸಿನಿಮಾ ಪ್ರಚಾರ
March 24, 2021ಮೈಸೂರು,ಮಾ.23(ಪಿಎಂ)- ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ತಮ್ಮ ಅಭಿ ನಯದ `ಯುವರತ್ನ’ ಸಿನಿಮಾದ ಬಗ್ಗೆ ಮಂಗಳ ವಾರ ಮೈಸೂರಿನಲ್ಲಿ ಭರ್ಜರಿ ಪ್ರಚಾರ ಕೈಗೊಂಡರು. ಈ ವೇಳೆ ಪವರ್ ಸ್ಟಾರ್ ಅಭಿಮಾನಿಗಳು, ಯುವ ಸಮೂಹ ಹುಚ್ಚೆದ್ದು ಕುಣಿದು ಕುಪ್ಪಳಿಸಿತು. ಸಿನಿಮಾದ ನಾಯಕ ನಟ ಪುನೀತ್ ರಾಜ್ ಕುಮಾರ್ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂ ಡಿದ್ದ ಹಿನ್ನೆಲೆಯಲ್ಲಿ ನೆಚ್ಚಿನ ನಟನ ಕಂಡ ಅಭಿ ಮಾನಿಗಳು ಸಂಭ್ರಮದಲ್ಲಿ ತೇಲಿದರು. ಬಹುತೇಕ ಯುವ ಜನರೇ ಇದ್ದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದ ಮೈಸೂರು ಮಾನಸ…
2018ನೇ ಸೌತ್ ಫಿಲಂ ಫೇರ್ ಪ್ರಶಸ್ತಿ ಪ್ರಕಟ ಅತ್ಯುತ್ತಮ ನಟ ಪುನೀತ್, ಶೃತಿ ಹರಿಹರನ್ ಅತ್ಯುತ್ತಮ ನಟಿ
June 18, 2018ಹೈದರಾಬಾದ್: 2018ರ ಸೌತ್ ಫಿಲಂ ಫೇರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಶನಿವಾರ ಹೈದರಾಬಾದ್‍ನಲ್ಲಿ ನಡೆದಿದೆ. ಈ ಅದ್ಧೂರಿ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ನಾಲ್ಕು ಚಿತ್ರರಂಗದ ಗಣ್ಯರು ಭಾಗಿಯಾಗಿದ್ದರು. 2018ನೇ ಸಾಲಿನ ಸೌತ್ ಫಿಲಂ ಫೇರ್ ಅವಾರ್ಡ್ ಪ್ರಕಟವಾಗಿದ್ದು, ರಾಜಕುಮಾರ ಚಿತ್ರಕ್ಕಾಗಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಬ್ಯೂಟಿಫುಲ್ ಮನಸ್ಸುಗಳು ಚಿತ್ರಕ್ಕಾಗಿ ನಟಿ ಶೃತಿ ಹರಿಹರನ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಪುನೀತ್ ರಾಜ್‍ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಸ್ವೀಕರಿಸುವಾಗ ಪುನೀತ್ ಬಾಲ್ಯದಿನಗಳಲ್ಲಿ…
ಕಾರು ಅಪಘಾತ: ನಟ ಪುನೀತ್ ಪಾರು
June 8, 2018ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಚಾಲನೆ ಮಾಡು ತ್ತಿದ್ದ ಕಾರು ಆಂಧ್ರದ ಅನಂತಪುರಂ ಬಳಿ ಅಪಘಾತಕ್ಕೀಡಾಗಿದ್ದು, ಅದೃಷ್ಟವ ಶಾತ್ ಯಾವುದೇ ಅಪಾಯವಿಲ್ಲದೆ ಅವರು ಪಾರಾಗಿದ್ದಾರೆ. ಬಳ್ಳಾರಿಯಲ್ಲಿ ನಡೆಯುತ್ತಿದ್ದ `ನಟ ಸಾರ್ವಭೌಮ’ ಚಿತ್ರದ ಶೂಟಿಂಗ್ ಮುಗಿಸಿ ತಮ್ಮ ರೇಂಜ್ ರೋವರ್ ಕಾರಿ ನಲ್ಲಿ (ಕೆಎ 05 ಎಂಡಬ್ಲ್ಯು 144) ಬೆಂಗಳೂ ರಿಗೆ ವಾಪಸಾಗುತ್ತಿದ್ದರು. ಕಾರನ್ನು ಪುನೀತ್ ರಾಜ್‍ಕುಮಾರ್ ಅವರೇ ಚಾಲನೆ ಮಾಡುತ್ತಿದ್ದರು. ಬೆಂಗಳೂರು-ಅನಂತಪುರಂ ಹೆದ್ದಾರಿಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಕಲ್ಲುಗಳು ತಾಗಿದ್ದರಿಂದ ಕಾರಿನ ಟಯರ್ ಸ್ಫೋಟಗೊಂಡು ಅಪಘಾತ ಸಂಭವಿಸಿದೆ….