ಕಾರು ಅಪಘಾತ: ನಟ ಪುನೀತ್ ಪಾರು
ಮೈಸೂರು

ಕಾರು ಅಪಘಾತ: ನಟ ಪುನೀತ್ ಪಾರು

June 8, 2018

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಚಾಲನೆ ಮಾಡು ತ್ತಿದ್ದ ಕಾರು ಆಂಧ್ರದ ಅನಂತಪುರಂ ಬಳಿ ಅಪಘಾತಕ್ಕೀಡಾಗಿದ್ದು, ಅದೃಷ್ಟವ ಶಾತ್ ಯಾವುದೇ ಅಪಾಯವಿಲ್ಲದೆ ಅವರು ಪಾರಾಗಿದ್ದಾರೆ.

ಬಳ್ಳಾರಿಯಲ್ಲಿ ನಡೆಯುತ್ತಿದ್ದ `ನಟ ಸಾರ್ವಭೌಮ’ ಚಿತ್ರದ ಶೂಟಿಂಗ್ ಮುಗಿಸಿ ತಮ್ಮ ರೇಂಜ್ ರೋವರ್ ಕಾರಿ ನಲ್ಲಿ (ಕೆಎ 05 ಎಂಡಬ್ಲ್ಯು 144) ಬೆಂಗಳೂ ರಿಗೆ ವಾಪಸಾಗುತ್ತಿದ್ದರು. ಕಾರನ್ನು ಪುನೀತ್ ರಾಜ್‍ಕುಮಾರ್ ಅವರೇ ಚಾಲನೆ ಮಾಡುತ್ತಿದ್ದರು.

ಬೆಂಗಳೂರು-ಅನಂತಪುರಂ ಹೆದ್ದಾರಿಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಕಲ್ಲುಗಳು ತಾಗಿದ್ದರಿಂದ ಕಾರಿನ ಟಯರ್ ಸ್ಫೋಟಗೊಂಡು ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಕಾರಿನ ಮುಂಭಾಗ ಜಖಂಗೊಂಡಿದೆ. ಪುನೀತ್ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಈ ವೇಳೆ ಕಾರಿನಲ್ಲಿ ಅವರ ಗನ್‍ಮ್ಯಾನ್ ಮತ್ತು ಚಾಲಕ ಇದ್ದರು. ಅಪಘಾತದ ನಂತರ ತಮ್ಮ ಸ್ನೇಹಿತನ ಕಾರಿನಲ್ಲಿ ಪುನೀತ್ ಸುರಕ್ಷಿತವಾಗಿ ಬೆಂಗಳೂರು ತಲುಪಿದ್ದಾರೆ.

Translate »